2013ರ ನಂತರ ನಮ್ಮವರನ್ನು ಕೆಲ ಟೀಮ್ ಬ್ರೈನ್ ವಾಶ್ ಮಾಡಿತು ಕಾಂಗ್ರೆಸ್ ವಿರುದ್ಧ ಎಚ್ಡಿಕೆ ಗಂಭೀರ ಆರೋಪ

ಹಾಸನ: ಶಾಸಕ ಗುಬ್ಬಿ ಶ್ರೀನಿವಾಸ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರ ಭಾವನೆಗಳು, ಕುಮಾರಸ್ವಾಮಿ ಕರೆದು ಮಂತ್ರಿ ಮಾಡಿದರು ಎನ್ನುವುದರಲ್ಲಿ ಸತ್ಯ ಇದೆ. ನನ್ನ ಜೊತೆಯಲ್ಲಿ ಅತ್ಯಂತ ಪ್ರೀತಿ, ವಿಶ್ವಾಸದಲ್ಲಿದ್ದವರು. ಬಹುಶಃ ನನ್ನ ಜೊತೆ ಆತ್ಮೀಯತೆ ಏನಿತ್ತು, ಯಾರ ಜೊತೆಯೂ ಅಂತಹ ಆತ್ಮೀಯತೆ ಇಟ್ಟುಕೊಂಡಿರಲಿಲ್ಲ ಎಂದರು.

ಆದರೆ 2013ರ ನಂತರ ಕೆಲವು ಟೀಂಗಳು ನನ್ನಿಂದಲೇ ಬೆಳೆದವರು. ಅವರು ಬೈನ್‌ ವಾಶ್‌ ಮಾಡುತ್ತಾ ಹೋದರು. ನನ್ನ ಜೊತೆ ಆತ್ಮೀಯತೆ ಇದ್ದಂತಹವರನ್ನು ಕೂರಿಸಿಕೊಂಡು ಬೈನ್‌ ವಾಶ್ ಮಾಡಿ ನನ್ನ ಬಗ್ಗೆ ಹಲವು ತಪ್ಪು ಭಾವನೆ ಕಲ್ಪಿಸಲು ಪ್ರಯತ್ನಪಟ್ಟರು” ಎಂದು ಹೇಳಿದರು.

ಅದರಿಂದ ನನ್ನನ್ನು ಪ್ರೀತಿಸುವವರು, ಸಹಪಾಠಿಗಳಾಗಿದ್ದವರ ಮೈಂಡ್ ಹಾಳು ಮಾಡಿದರು. ಅದು ಈಗ ಒಂದೊಂದಾಗಿ ಹೊರಗೆ ಬರುತ್ತಿದೆ. ಮುಂದೆಯೂ ಬರುತ್ತೆ” ಎಂದರು.

ರಾಜ್ಯದಲ್ಲಿ ಜೆಡಿಎಸ್‌ ಪಕ್ಷದ ಮುಂದಿನ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, “ಜೆಡಿಎಸ್ ಪಕ್ಷ ಬಾಗಿಲು ತೆಗೆದಿರುವುದಕ್ಕಿಂತ ಹೆಚ್ಚಾಗಿ ರಾಜ್ಯ ಹೋಗುತ್ತಿರುವ ಪರಿಸ್ಥಿತಿ ಇದೆಯಲ್ಲಾ. ಈ ರಾಜ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಿ ಒಳ್ಳೆಯ ಕೆಲಸ ಮಾಡುವ ಸರ್ಕಾರ ಬರಬೇಕು” ಎಂದು ಹೇಳಿದರು.

ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಒಂದು ಉತ್ತಮವಾದಂತಹ, ಜನಪರವಾದಂತಹ ತೀರ್ಮಾನ ಮಾಡಲು ಒಂದು ಶಕ್ತಿ ಬೆಳೆಯಬೇಕು. ಎಲ್ಲಾ ರೀತಿಯ ಸಹಕಾರ ಕೊಡುವವರಿಗೆ, ಮುಕ್ತ ಮನಸ್ಸಿಂದ ಇರುವವರಿಗೆ ಆಹ್ವಾನ ಕೊಡಲು ತಯಾರಿದ್ದೇನೆ ಎಂದರು.

ಕಾಂಗ್ರೆಸ್‌ನಲ್ಲಿನ ಅಸಮಾಧಾನದ ಕುರಿತು ಅವರು, ಅಸಮಾಧಾನ ಅನ್ನೋದಕ್ಕಿಂತ ಹೆಚ್ಚಾಗಿ ಚುನಾವಣೆ ಸಮೀಪ ಬಂದಾಗ ಈಗಾಗಲೇ ಆಂತರಿಕವಾಗಿ ಅವರಲ್ಲಿ ಯಾವುದೇ ರೀತಿಯ ವಿಶ್ವಾಸವಿಲ್ಲ. ಅಲ್ಲಿ ಉತ್ತಮ ಕೆಲಸ ಮಾಡುವಂತಹವರು ಇದ್ದಾರೆ. ವಿಧಿ ಇಲ್ಲದೆ, ಅನಿವಾರ್ಯವಾಗಿ ಅಂತಹವರು ಮುಂದಿನ ದಿನಗಳಲ್ಲಿ ಆ ಪಕ್ಷವನ್ನು ತೊರೆಯುವುದು ದೂರವಿಲ್ಲ. ಅದನ್ನು ನೋಡೋಣ, ಕಾಲ ನಿರ್ಧಾರ ಮಾಡುತ್ತೆ ಎಂದು ಹೇಳಿದರು.

Leave a Reply

Your email address will not be published. Required fields are marked *