ಬಸವರಾಜ ಹೊರಟ್ಟಿಯವರದ್ದು ಬಲವಂತದ ರಾಜೀನಾಮೆ HDK

ಹಾಸನ: ಬಸವರಾಜ ಹೊರಟ್ಟಿ ಅವರ ರಾಜೀನಾನು ವಿಚಾರವಾಗಿ ಮಾತನಾಡಿದ ಅವರು, “ಹೊರಟ್ಟಿ ಅವರ ಮದ್ಯದಲ್ಲಿ 8-10 ಮಂದಿ ಶಾಸಕರು ಮತ್ತು ಸಚಿವರು ಹಾಗೂ ಮುಖ್ಯಮಂತ್ರಿಗಳು ಇದ್ದರು. ಕಾಂಗ್ರೆಸ್ ಅಧ್ಯಕ್ಷರು ಎಲ್ಲರೂ ಅವರ ಮೇಲೆ ಒತ್ತಡ ಹೇರಿ, ಬ್ಲಾಕ್ ಮೇಲ್ ಮಾಡಿ ರಾಜೀನಾಮೆ ಪಡೆದಿದ್ದಾರೆ ಎಂದು ಆರೋಪಿಸಿದರು.

ಹಾಸನದ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಮಾತನಾಡಿದರು. ಸಭಾಪತಿ ಬಸವರಾಜ ಹೊರಟ್ಟಿಯವರು ಸ್ವತಹ ರಾಜೀನಾಮೆ ನೀಡಿಲ್ಲ ಅವರ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಕಚೇರಿಯಿಂದ ಟೈಪ್ ಮಾಡಿಕೊಂಡು ಬಂದಿದ್ದಾರೆ. ದಿನಾಂಕವನ್ನು ಗ್ಯಾಪ್ ಬಿಟ್ಟಿದ್ದಾರೆ ಪನ್ನಿಲ್‌ನಲ್ಲಿ ಏಳು ಎಂದು ಬರೆದಿದ್ದಾರೆ. 8-2026 ಟೈಪ್ ಮಾಡಿ, 7 ಎಂಬುದನ್ನು ಕೈಯಿಂದ ಬರೆದಿದ್ದಾರೆ. ಎಲ್ಲವನ್ನು ನೋಡಿದರೆ ಅವರು ಮೊದಲೇ ಪ್ಲಾನ್ ಮಾಡಿ ಬಲವಂತವಾಗಿ ರಾಜೀನಾಮೆ ಪಡೆದಿದ್ದಾರೆ ಎಂದು ಕಾಣಿಸುತ್ತಿದೆ ಎಂದು ಆರೋಪಿಸಿದರು. ರಾಜೀನಾಮೆ ಕೊಡುವವರು ಕೊಡಬಹುದು ಕೊಟ್ಟ ತಕ್ಷಣವೇ ಪಡೆಯುತ್ತೇವೆ ಎಂದಿದ್ದಾರೆ. ಮಂತ್ರಿಗಳಾಗದ ಕಾಂಗ್ರೆಸ್‌ ಕೆಲವು ಶಾಸಕರು ಬಹಳ ಜನ ನೋವಿನಲ್ಲಿದ್ದಾರೆ. ಮಾತು ಕೊಟ್ಟಿದ್ದರು. ಮಾತಿನ ಪ್ರಕಾರ ನಡೆದುಕೊಂಡಿಲ್ಲ ಎಂದು ನೋವಿನಲ್ಲಿ ಇದ್ದೀನಿ ಎಂದು ಹೇಳಿರುವುದನ್ನು ಗಮನಿಸಿದ್ದೀನಿ ಎಂದರು.

ಜೆಡಿಎಸ್ ಮುಗಿಸುವುದೇ ನಮ್ಮ ಮೊದಲ ಕಾರ್ಯಕ್ರಮ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಬಂದಿರುವವರೆಗೂ ಒಂದು ಕಿವಿಮಾತು ಹೇಳುತ್ತೇನೆ. ಜೆಡಿಎಸ್ ಪಕ್ಷ ನೊಂದವರಿಗೆ ನೋವಿನಲ್ಲಿರುವವರಿಗೆ, ಸಮಸ್ಯೆಯಲ್ಲಿದ್ದವರಿಗೆ ಪರಿಹಾರ ಕೊಡುವ ಪಕ್ಷ. ಆ ನೋವಿನಲ್ಲಿರುವವರಿಗೆ ಜೆಡಿಎಸ್ ಪಕ್ಷದ ಬಾಗಿಲ ತೆರೆದಿರುತ್ತದೆ. ಆ ನೋವಿಗೆ ಪರಿಹಾರವೂ ದೊರಕುತ್ತದೆ ಎಂದು ಹೇಳುವ ಮೂಲಕ ಅಪಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಪಕ್ಷಕ್ಕೆ ಪರೋಕ್ಷವಾಗಿ ಆಹ್ವಾನ ನೀಡಿದರು

Leave a Reply

Your email address will not be published. Required fields are marked *