ನಮ್ಮ ಶಕ್ತಿ ನಾಡಿನ ಜನ. ಇನ್ನೂ ಶಕ್ತಿ ಇದೆ. ನಮ್ಮದು ಸಣ್ಣ ಪಕ್ಷ. ಆರ್ಥಿಕವಾಗಿ ಪಕ್ಷದ ಖಜಾನೆ ತುಂಬಿಸಿ ಇಟ್ಟುಕೊಂಡಿಲ್ಲ

ಹಾಸನ: ಜೆಡಿಎಸ್‌ ಪಕ್ಷದ ಕುರಿತು ಮಾತನಾಡಿದ ಕುಮಾರಸ್ವಾಮಿ, “ನಮ್ಮ ಶಕ್ತಿ ನಾಡಿನ ಜನ. ಇನ್ನೂ ಶಕ್ತಿ ಇದೆ. ನಮ್ಮದು ಸಣ್ಣ ಪಕ್ಷ. ಆರ್ಥಿಕವಾಗಿ ಪಕ್ಷದ ಖಜಾನೆ ತುಂಬಿಸಿ ಇಟ್ಟುಕೊಂಡಿಲ್ಲ. ದುಡ್ಡು ಇಲ್ಲದೇ ಇದ್ದರೂ ಜನಬಲದಲ್ಲಿ ರಾಷ್ಟ್ರೀಯ ಪಕ್ಷಗಳ ಜೊತೆಯಲ್ಲಿ ನಮ್ಮ ಸಣ್ಣ ಶಕ್ತಿ ಏನಿದೆ, ಅದನ್ನು ಬೆಳೆಸಿ ಉಳಿಸಿರುವ ಜನ ಇದ್ದಾರೆ. ಒಂದು ವರ್ಗ ಇದೆ. ಅವರಿಂದ ಈ ಪಕ್ಷ ವೃದ್ಧಿಯಾಗುತ್ತೆ ಹೊರತು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದರು.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ತಮ್ಮ ಮನೆಯಲ್ಲಿ ಮಾತನಾಡಿದವರು, ನಮಗೆ ನಾಡಿನ ಜನರ ಬಲವೇ ಪಕ್ಷಕ್ಕೆ ಶಕ್ತಿ. ಆರ್ಥಿಕವಾಗಿ ನಾವು ಖಜಾನೆ ತುಂಬಿಸಿಕೊಂಡಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದು ಅವರಿಗಿರುವ ಶಕ್ತಿಯಲ್ಲಿ ನಮಗೂ ಸ್ವಲ್ಪ ಸಣ್ಣ ಶಕ್ತಿ ಇದೆ. ಅದರ ಮುಖಾಂತರ ಮುಂದಿನ ದಿನದಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲು ಪ್ರಯತ್ನ ಪಡುತ್ತದೆ ಎಂದರು

ಕಾಂಗ್ರೆಸ್‌ನಲ್ಲಿರುವ ಶಾಸಕರ ಆತ್ಮವಿಮರ್ಶೆ: 

ಕಾಂಗ್ರೆಸ್‌ ಪಕ್ಷದಲ್ಲಿರುವ ಶಾಸಕರ ಕುರಿತು ಮಾತನಾಡಿದ ಕುಮಾರಸ್ವಾಮಿ, ಹಿರಿಯರು, ಕಿರಿಯರು ಎನ್ನುವುದಕ್ಕಿಂತ ಹೆಚ್ಚಾಗಿ ಉತ್ತಮವಾದಂತಹ, ಸಾರ್ವಜನಿಕವಾಗಿ ಭಯ ಭಕ್ತಿ ಇಟ್ಟುಕೊಂಡಿರುವ ಶಾಸಕರು ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ. ಜನಗಳಿಗೆ ಗೌರವ ಕೊಡುವವರು ಇದ್ದಾರೆ ಎಂದರು.

ಅಂತಹವರು ಪಕ್ಷ ನಿಷ್ಠೆ, ಬಲವಂತ, ಅನಿವಾರ್ಯ, ವಿಧಿ ಇಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಈಗ ಆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದಾಗ ಜನಗಳ ಬಗ್ಗೆ ಭಯ ಭಕ್ತಿ ಇರುವಂತಹವರು ಪಕ್ಷದಲ್ಲಿ ಮುಂದುವರೆಯುವುದು ಸರಿಯೋ, ತಪ್ಪೋ ಅನ್ನೋದನ್ನ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ನನಗೆ ಮಾಹಿತಿಗಳು ಇದೆ. ಮುಂದೆ ಯಾವ ತರ ಆತ್ಮವಿಮರ್ಶೆ ಯಾವ ತರಹ ಬದಲಾವಣೆ ತರುತ್ತೆ ಅನ್ನೋದನ್ನ ಕಾದು ನೋಡೋಣ ಎಂದು ಹೇಳಿದರು.

ಜೆಡಿಎಸ್ ಪಕ್ಷ ನೊಂದವರಿಗೆ ನೋವಿನಲ್ಲಿರುವವರಿಗೆ, ಸಮಸ್ಯೆಯಲ್ಲಿದ್ದವರಿಗೆ ಪರಿಹಾರ ಕೊಡುವ ಪಕ್ಷ. ಆ ನೋವಿನಲ್ಲಿರುವವರಿಗೆ ಜೆಡಿಎಸ್ ಪಕ್ಷದ ಬಾಗಿಲ ತೆರೆದಿರುತ್ತದೆ. ಆ ನೋವಿಗೆ ಪರಿಹಾರವೂ ದೊರಕುತ್ತದೆ ಎಂದು ಹೇಳುವ ಮೂಲಕ ಅಪಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಪಕ್ಷಕ್ಕೆ ಪರೋಕ್ಷವಾಗಿ ಆಹ್ವಾನ ನೀಡಿದರು

Leave a Reply

Your email address will not be published. Required fields are marked *