Share this... Whatsapp Facebook Pinterest Twitter Linkedin Gmail Printಭಾರತೀಯರ ಸ್ವಾಭಿಮಾನಿ ಜೀವಾಳವನ್ನು ಹೊಸಕಿಹಾಕಲು ಬ್ರಿಟಿಷರಿಂದಲೂ ಸಾಧ್ಯವಾಗಲಿಲ್ಲ ನಮ್ಮದು ಅಖಂಡ ಭಾರತ ದೇಶ. ಒಂದೊಮ್ಮೆ ಭೂ-ವಿಸ್ತಾರದಲ್ಲಿ ಪ್ರಸ್ತುತದ ಭೂ-ವಿಸ್ತಾರಕ್ಕಿಂತಲೂ ವಿಶಾಲವಾಗಿತ್ತು. ನಮ್ಮ ದೇಶದ ನೆರೆಹೊರೆ ರಾಷ್ಟ್ರಗಳೆಲ್ಲಾ ಅಂದು ಭಾರತದ ಗಡಿ ಪ್ರದೇಶವನ್ನೇ ಸುರಕ್ಷಣೆಗಾಗಿ ಅವಲಂಬಿಸಿದ್ದವು. ಶತಶತಮಾನಗಳಿಂದಲೂ ಭಾರತದ ಮೇಲೆ ಅಸಂಖ್ಯಾತ ದಾಳಿಗಳು ನಡೆದರೂ ಭಾರತ ಮಾತ್ರ ಹಿಮಾಲಯ ಪರ್ವತದಂತೆ ಅಚಲವಾಗಿ ನಿಂತಿದೆ. ಸಿಂಧೂ ಬಯಲಿನ ನಾಗರೀಕತೆಯಿಂದ ಮೊದಲ್ಗೊಂಡು ಇಂದಿನವರೆಗೂ ಭಾರತ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಏಕೆಂದರೆ ಮಹಾನ್ ಸಾಮ್ರಾಟರ, ರಾಜ-ಮಹಾರಾಜರ ಹೋರಾಟಗಳು, ದೇಶಭಕ್ತರ ತ್ಯಾಗ ಬಲಿದಾನಗಳು, ಕವಿ ಋಷಿ ಸಂತರ ಆದರ್ಶ ದರ್ಶನ ಮಾರ್ಗಗಳು, ಜನಸಾಮಾನ್ಯರಿಗಿರುವ “ನಮ್ಮ ದೇಶ” ಎಂಬ ಪರಿಕಲ್ಪನೆ, ಮನೋಭಾವನೆ, ಈ ನೆಲದ ಮೇಲಿನ ರಾಷ್ಟ್ರಪ್ರೇಮ ಮತ್ತು ದೇಶಾಭಿಮಾನ ಇಂದಿಗೂ ಭಾರತವನ್ನು ಭಾರತವನ್ನಾಗಿಯೇ ಉಳಿಸಿದೆ. ನಮ್ಮೆಲ್ಲರಿಗೂ ತಿಳಿದಿರುವಂತೆ ಯಾವುದೇ ಒಂದು ದೇಶ ಅದರದ್ದೇ ಆದ ಇತಿಹಾಸ, ಸಂಸ್ಕೃತಿ ಮತ್ತು ಹೆಗ್ಗುರುತನ್ನು ಹೊಂದಿರುತ್ತದೆ. ನಮ್ಮ ಭಾರತದಂತಹ ವೈವಿಧ್ಯಮಯ ದೇಶಕ್ಕೆ ‘ಸ್ವಾತಂತ್ರ್ಯ’ ಎಂಬುದು ಕೇವಲ ರಾಜಕೀಯ ಅಧಿಕಾರ ಹಸ್ತಾಂತರವಲ್ಲ; ಅದು ಶತಮಾನಗಳ ಗುಲಾಮಗಿರಿಯ ಸಂಕೋಲೆಗಳನ್ನು ಕಳಚಿ, ಲಕ್ಷಾಂತರ ಜನರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಹೊರಹೊಮ್ಮಿದ ಐತಿಹಾಸಿಕ ಘಟನೆಯ ಘಳಿಗೆ. ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸುವ ದಿನವೇ ‘ಆಗಸ್ಟ್ 15’ – ಭಾರತದ ಸ್ವಾತಂತ್ರ್ಯ ದಿನಾಚರಣೆ. 1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆದು, ಸ್ವತಂತ್ರ ರಾಷ್ಟ್ರವಾಗಿ ವಿಶ್ವದ ಭೂಪಟದಲ್ಲಿ ಹೊರಹೊಮ್ಮಿತು. ನಮ್ಮ ಭಾರತ ದೇಶವು ಎಪ್ಪತ್ತೊಂಬತ್ತು ವರ್ಷಗಳನ್ನು ಪೂರ್ಣಗೊಳಿಸಿ ಇಂದಿನ ಆಗಸ್ಟ್ 15 , 2006 ರಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಭಾರತ ಘನ ಸರ್ಕಾರವು ಧ್ಯೇಯ ವಾಕ್ಯವನ್ನು (ಥೀಮ್) ನೀಡಿದೆ. “ಯುವ ಶಕ್ತಿ ಫಾರ್ ವಿಕ್ಷಿತ್ ಭಾರತ್@2047” ಎಂದಾಗಿದೆ. ಇದರೊಂದಿಗೆ ದೇಶಪ್ರೇಮಿ ಬಂಕಿಮ್ ಚಂದ್ರ ಚಟರ್ಜಿಯವರ ಪ್ರಸಿದ್ಧ ರಾಷ್ಟ್ರೀಯ ಗೀತೆಯ “150 ವರ್ಷಗಳ ವಂದೇ ಮಾತರಂ” ಸಂಭ್ರಮವನ್ನು ಆಚರಿಸುತ್ತಿರುವುದು ಈ ವರ್ಷದ ವಿಶೇಷವೆನಿಸಿದೆ. ಐತಿಹಾಸಿಕ ಹಿನ್ನೆಲೆ :ಭಾರತದ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಹಿನ್ನೆಲೆಯನ್ನು ನೋಡುವುದಾದರೆ, ನಮ್ಮ ದೇಶಕ್ಕೆ ವ್ಯಾಪಾರದ ಮನೋಧೋರಣೆಯಿಂದ ತಕ್ಕಡಿ ಹಿಡಿದು ಬಂದ ಈಸ್ಟ್ ಇಂಡಿಯಾ ಕಂಪನಿಯು, ಭಾರತೀಯರಲ್ಲಿದ್ದ ಒಗ್ಗಟ್ಟಿನ ಕೊರತೆಯನ್ನು ಬಂಡವಾಳ ಮಾಡಿಕೊಂಡು ಸಂಪೂರ್ಣ ರಾಷ್ಟ್ರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಸುಮಾರು ಎರಡು ಶತಮಾನಗಳ ಅವಧಿಯಲ್ಲಿ ಬ್ರಿಟಿಷರು ಭಾರತದ ಸಂಪತ್ತನ್ನು ದೋಚಿದರು, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಜ್ಜುಗುಜ್ಜು ಮಾಡಿದರು. ಆದರೆ, ಭಾರತೀಯರ ಸ್ವಾಭಿಮಾನಿ ಜೀವಾಳವನ್ನು ಹೊಸಕಿಹಾಕಲು ಅವರಿಂದ ಸಾಧ್ಯವಾಗಲಿಲ್ಲ. 1857ರ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ (ಸಿಪಾಯಿ ದಂಗೆ) ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ಅಲ್ಲಾಡಿಸಿತು. ಮಂಗಳ ಪಾಂಡೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದ ನಾಯಕರು ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಜನ ಸಾಮಾನ್ಯರಲ್ಲಿ ಹೊತ್ತಿಸಿದರು. ಹೋರಾಟದ ಹಾದಿ :ಇಪ್ಪತ್ತನೇ ಶತಮಾನದ ಆರಂಭದಲ್ಲಿ ಸ್ವಾತಂತ್ರ್ಯ ಹೋರಾಟವು ಸಾರ್ವಜನಿಕ ಚಳವಳಿಯಾಗಿ ಮಾರ್ಪಟ್ಟಿತು. ಈ ಹೋರಾಟದಲ್ಲಿ ಎರಡು ಪ್ರಮುಖ ಮಾರ್ಗಗಳು ಕಂಡುಬಂದವು: ಅಹಿಂಸಾತ್ಮಕ ಮಾರ್ಗದ ಚಳವಳಿ : ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಮತ್ತು 1942ರ ‘ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಚಳವಳಿಗಳು ಜನಸಾಮಾನ್ಯರನ್ನು ಒಂದೇ ವೇದಿಕೆಯಡಿ ತಂದವು. ಸತ್ಯ, ಅಹಿಂಸೆ ಮತ್ತು ಉಪವಾಸ ಸತ್ಯಾಗ್ರಹಗಳೇ ಆಯುಧಗಳಾದವು. ಕ್ರಾಂತಿಕಾರಿ ಮಾರ್ಗದ ಚಳವಳಿ : ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ರಾಜಗುರು, ಸುಖ್ದೇವ್, ಚಂದ್ರಶೇಖರ್ ಆಜಾದ್ ಅವರಂತಹ ಯುವ ನಾಯಕರು ಶಸ್ತ್ರಸಜ್ಜಿತ ಹೋರಾಟದ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದರು. ನೇತಾಜಿಯವರ ‘ಆಜಾದ್ ಹಿಂದ್ ಫೌಜ್’ ಮತ್ತು “ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ” ಎಂಬ ಕರೆ ಭಾರತೀಯರಲ್ಲಿ ಅಭೂತಪೂರ್ವ ರೊಮಾಂಚನವನ್ನು ಉಂಟುಮಾಡಿತು. ಸರ್ದಾರ್ ವಲ್ಲಭಭಾಯಿ ಪಟೇಲ್, ಪಂಡಿತ್ ಜವಾಹರಲಾಲ್ ನೆಹರೂ, ಡಾ. ಬಿ.ಆರ್. ಅಂಬೇಡ್ಕರ್, ಮೌಲಾನಾ ಅಬುಲ್ ಕಲಾಮ್ ಆಜಾದ್ ಮುಂತಾದ ನಾಯಕರ ನಿರಂತರ ಶ್ರಮದ ಫಲವಾಗಿ ಬ್ರಿಟಿಷರು ಭಾರತವನ್ನು ತೊರೆಯಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆಗಸ್ಟ್ 15, 1947 :ಸ್ವತಂತ್ರ ಭಾರತದ ಉದಯದ ಕ್ಷಣದಲ್ಲಿ ಅಖಂಡ ಭಾರತದ ಜನರು ಎಚ್ಚರದಿಂದ ಕಾಯುತ್ತಿದ್ದರು. 1947ರ ಆಗಸ್ಟ್ 14ರ ಮಧ್ಯರಾತ್ರಿ, ಜವಾಹರಲಾಲ್ ನೆಹರೂ ಅವರು ತಮ್ಮ ಐತಿಹಾಸಿಕ “ಟ್ರಿಸ್ಟ್ ವಿತ್ ಡೆಸ್ಟಿನಿ” (ವಿಧಿಯೊಂದಿಗೆ ನಿಕಟ ಸಂಪರ್ಕ) ಭಾಷಣದ ಮೂಲಕ ಭಾರತದ ಸ್ವಾತಂತ್ರ್ಯವನ್ನು ಘೋಷಿಸಿದರು. ಸ್ವಾತಂತ್ರ್ಯ ಸಿಗುವ ಆ ಮಹತ್ವದ ರಾತ್ರಿ ಭಾರತವು ತನ್ನ ಸ್ವಂತ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳಲು ಮುಂದಾದ ಐತಿಹಾಸಿಕ ಕ್ಷಣವನ್ನು ಇದು ಸೂಚಿಸುತ್ತದೆ. ನೆಹರು ಅವರು ತಮ್ಮ ಭಾಷಣದಲ್ಲಿ “ಜಗತ್ತು ನಿದ್ರಿಸುತ್ತಿರುವಾಗ, ಭಾರತವು ಸ್ವಾತಂತ್ರ್ಯಕ್ಕಾಗಿ ಎಚ್ಚರಗೊಳ್ಳುತ್ತದೆ” ಎಂದು ನುಡಿದರು. ಮಾರನೇ ದಿನದ ಬೆಳಿಗ್ಗೆ ಅಂದರೆ 1947ರ ಆಗಸ್ಟ್ 15, ರಂದು ದೆಹಲಿಯ ಕೆಂಪುಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜವು ಮೊದಲ ಬಾರಿಗೆ ಹಾರಾಡಿತು. ಸುದೀರ್ಘ ಕಾಲದ ಕತ್ತಲೆ ಸರಿದು, ಹೊಸ ಭರವಸೆಯ ಸೂರ್ಯೋದಯವಾಯಿತು. ಆದರೆ, ಸ್ವಾತಂತ್ರ್ಯದ ಜೊತೆಗೇ ಬಂದ ದೇಶದ ವಿಭಜನೆ (ಭಾರತ-ಪಾಕಿಸ್ತಾನ) ಮತ್ತು ಅದರಿಂದಾದ ಕೋಮು ಗಲಭೆಗಳು ಈ ಕ್ಷಣಕ್ಕೆ ತೀವ್ರ ದುಃಖದ ಛಾಯೆಯನ್ನೂ ತಂದೊಡ್ಡಿದವು. Read this: Human–Elephant Conflict; MP Urges Visit by Expert Team ಸ್ವಾತಂತ್ರ್ಯ ಸಿಕ್ಕು ದಶಕಗಳು ಕಳೆದರೂ ಇಂದಿಗೂ ನಾವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಭ್ರಷ್ಟಾಚಾರ, ಬಡತನ, ನಿರುದ್ಯೋಗ, ಕೋಮುವಾದ ಮತ್ತು ಜಾತಿಯತೆ ಮುಂತಾದ ಸಾಮಾಜಿಕ ಕಂಟಕಗಳು ಇನ್ನೂ ಜೀವಂತವಾಗಿವೆ. ಸೈಬರ್ ಅಪರಾಧಗಳು, ಭಯೋತ್ಪಾದನೆ ಮತ್ತು ಪರಿಸರ ಮಾಲಿನ್ಯದಂತಹ ಹೊಸ ರೀತಿಯ ಸವಾಲುಗಳು ಎದುರಾಗಿವೆ. ಸ್ವಾತಂತ್ರ್ಯ ದಿನದ ಆಚರಣಾ ವಿಧಾನ : ದೇಶಾದ್ಯಂತ ನಮ್ಮ ಸ್ವಾತಂತ್ರ್ಯ ದಿನವನ್ನು ಪ್ರತೀ ವರ್ಷ ಆಗಸ್ಟ್ 15ರಂದು ಅತ್ಯಂತ ವೈಭವ ದಿಂದ ಆಚರಿಸಲಾಗುತ್ತದೆ. ರಾಷ್ಟ್ರ ಹಂತದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ಪ್ರಧಾನಮಂತ್ರಿ ಯವರು ರಾಷ್ಟ್ರಧ್ವಜವನ್ನು ಹಾರಿಸಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಸೇನಾ ಪಡೆಗಳ ಪರೇಡ್, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಸಾಹಸ ಕ್ರೀಡೆಗಳು ಭಾರತದ ವೈವಿಧ್ಯತೆ ಮತ್ತು ಶಕ್ತಿಯನ್ನು ಪ್ರದರ್ಶಿಸುತ್ತವೆ. ಅಂತೆಯೇ ರಾಜ್ಯ ಮತ್ತು ಸ್ಥಳೀಯ ಹಂತದಲ್ಲಿ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಮುಖ್ಯಮಂತ್ರಿಗಳು, ರಾಜ್ಯಗಳ ಜಿಲ್ಲೆಗಳಲ್ಲಿ ಉಸ್ತುವರಿ ಸಚಿವರು, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ರಸ್ತೆ ರಸ್ತೆಗಳಲ್ಲಿ ಧ್ವಜಾರೋಹಣ ನಡೆಯುತ್ತದೆ. ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿ, ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಸಾಧನೆಗಳು ಮತ್ತು ಸವಾಲುಗಳು : ಸ್ವಾತಂತ್ರ್ಯೋತ್ತರ ಭಾರತದ ಸಾಧನೆಗಳು ಮತ್ತು ಸವಾಲುಗಳು ನಮ್ಮ ಎದುರಿಗೆವೆ. ಭಾರತ ಸ್ವಾತಂತ್ರ್ಯವಾದ ಸಂದರ್ಭದಲ್ಲಿ ಬಡತನ, ಅನಕ್ಷರತೆ ಮತ್ತು ಹಸಿವಿನಿಂದ ಬಳಲುತ್ತಿತ್ತು. ಆದರೆ ಕಳೆದ ಏಳೂವರೆ ದಶಕಗಳಲ್ಲಿ ಭಾರತವು ಸಾಧಿಸಿದ ಪ್ರಗತಿ ಅಪಾರವಾದದ್ದು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವು ತನ್ನ ಸಂವಿಧಾನದ ಅಡಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಜಾಪ್ರಭುತ್ವದ ಯಶಸ್ಸನ್ನು ಕಂಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ (ISRO) ಸಾಧನೆಗಳು (ಚಂದ್ರಯಾನ, ಮಂಗಳಯಾನ, ಆದಿತ್ಯ ಎಲ್-1) ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿವೆ. ಅಂದರೆ ವಿಜ್ಞಾನ ಮತ್ತು ತಂತ್ರಜ್ಞಾನವೂ ಪ್ರಗತಿಶೀಲವಾಗಿದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿರುವ ಭಾರತ, ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ವಲಯದಲ್ಲಿ ಮುಂಚೂಣಿಯಲ್ಲಿದ್ದು ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿದೆ.ಇದನ್ನು ಓದಿರಿ : ಚಾಮುಂಡಿಬೆಟ್ಟ ಅಭಿವೃಧ್ಧಿ ಪ್ರಾಧಿಕಾರದ ವಿರುದ್ದ ಭಕ್ತರ ಆಕ್ರೋಶ ಇಪ್ಪತ್ತೊಂದನೇ ಶತಮಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾರತ ವಿಶ್ವ ಭೂಪಟದಲ್ಲಿ ಪ್ರಕಾಶಿಸುತ್ತಿದೆ. ಸ್ವಾತಂತ್ರ್ಯ ಸಿಕ್ಕು ದಶಕಗಳು ಕಳೆದರೂ ಇಂದಿಗೂ ನಾವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಭ್ರಷ್ಟಾಚಾರ, ಬಡತನ, ನಿರುದ್ಯೋಗ, ಕೋಮುವಾದ ಮತ್ತು ಜಾತಿಯತೆ ಮುಂತಾದ ಸಾಮಾಜಿಕ ಕಂಟಕಗಳು ಇನ್ನೂ ಜೀವಂತವಾಗಿವೆ. ಸೈಬರ್ ಅಪರಾಧಗಳು, ಭಯೋತ್ಪಾದನೆ ಮತ್ತು ಪರಿಸರ ಮಾಲಿನ್ಯದಂತಹ ಹೊಸ ರೀತಿಯ ಸವಾಲುಗಳು ಎದುರಾಗಿವೆ. ಆಂತರಿಕ ಭದ್ರತೆ ಸೂಕ್ತ ರೀತಿಯಲ್ಲಿ ಇಲ್ಲ. ನಿಜವಾದ ಸ್ವಾತಂತ್ರ್ಯ ಎಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ; ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಆರ್ಥಿಕ ಮತ್ತು ಆಲೋಚನಾ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾತಂತ್ರ್ಯಕ್ಕೆ ಪೂರ್ಣ ಅರ್ಥ ಬರುತ್ತದೆ. “ಸ್ವಾತಂತ್ರ್ಯ ಎಂಬುದು ಉಚಿತವಾಗಿ ಸಿಕ್ಕಿದ ವಸ್ತುವಲ್ಲ ; ಅದು ನಮಗೆ ನೀಡಲ್ಪಟ್ಟ ಮಹತ್ತರ ಜವಾಬ್ದಾರಿ.” ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ನಮಗೆ ಸಿಕ್ಕಿರುವ ಈ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ವೀರರ ತ್ಯಾಗ ಮತ್ತು ರಕ್ತದ ಹನಿಗಳಿವೆ. ಅವರ ತ್ಯಾಗವನ್ನು ಸ್ಮರಿಸುವುದು ಮತ್ತು ದೇಶದ ಗೌರವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಧರ್ಮ, ಜಾತಿ, ಭಾಷೆಗಳ ಗಡಿಗಳನ್ನು ಮೀರಿ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸಿದಾಗ ಮಾತ್ರ ನಮ್ಮ ದೇಶವು ವಿಶ್ವಗುರುವಿನ ಸ್ಥಾನವನ್ನು ತಲುಪಲು ಸಾಧ್ಯ ಎಂಬುದನ್ನು ಅರಿತು ಬಾಳೋಣ. ಸರ್ವರಿಗೂ ಭಾರತದ 80 ನೇ (ಆಗಸ್ಟ್ 15, 1947-2026) ವರ್ಷದ ಸ್ವಾತಂತ್ರ್ಯ ಮಹೋತ್ಸವದ ಶುಭಾಶಯಗಳು. ಜೈ ಹಿಂದ್ ! ಜೈಕರ್ನಾಟಕ ಮಾತೆ ! ಇದನ್ನು ಓದಿರಿ : ಈಶ್ವರಹಳ್ಳಿ ಕೊಡುಗೆ ದರೋಡೆ ಪ್ರಕರಣ 8ಮಂದಿ ಬಂಧನ Share this... Whatsapp Facebook Pinterest Twitter Linkedin Gmail Print Post navigation ಶಿಕ್ಷಕ ಸಮೂಹದ ಚಿರಧ್ರುವತಾರೆ : ಡಾ. ಎಸ್ ರಾಧಾಕೃಷನ್