Share this... Whatsapp Facebook Pinterest Twitter Linkedin Gmail Printಗಾಂಧೀಜಿ ಭಾರತದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಬಾಳ್ಳು ಜಗನ್ನಾಥ್ ಹಾಸನ: ಮಹಾತ್ಮಗಾಂಧೀಜಿ ಅವರ ತತ್ವವನ್ನು ಸಂಪೂರ್ಣ ಅಳವಡಿಸಿಕೊಂಡಿರುವ ಪಕ್ಷ ಎಂದರೆ ಅದು ಜೆಡಿಎಸ್ ಎಂದು ಪಕ್ಷದ ನೂತನ ಗೌರವಾಧ್ಯಕ್ಷ ಬಾಳ್ಳು ಜಗನ್ನಾಥ್ ಹೇಳಿದರು. ನಗರದ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಜಯಪ್ರಕಾಶ್ ನಾರಾಯಣ್, ಗಾಂಧೀಜಿ, ಶಾಸ್ತ್ರಿ ಅವರು ಈ ದೇಶಕ್ಕೆ ತಮ್ಮದೇ ಅಮೂಲ್ಯ ಕೊಡುಗೆ ನೀಡಿದ್ದಾರೆ. ಆದರೆ ಅವರೆಂದೂ ಅಧಿಕಾರದ ಹಿಂದೆ ಹೋದವರಲ್ಲ ಎಂದರು. ಪ್ರಪಂಚಕ್ಕೆ ಶಾಂತಿ ಸಂದೇಶ ಸಾರಿದ, ಶಾಂತಿ, ಅಹಿಂಸೆಯಿಂದಲೇ ಎಲ್ಲವನ್ನೂ ಪಡೆಯಬಹುದು ತಮ್ಮ ನಡೆ-ನುಡಿಯಲ್ಲಿ ಪ್ರತಿಪಾದಿಸಿದ ಗಾಂಧೀಜಿ ಅವರನ್ನು ಪ್ರೀತಿ ಮಾಡುವವರು ಇಡೀ ವಿಶ್ವದಲ್ಲಿ ಇದ್ದಾರೆ ಕೊಂಡಾಡಿದರು. ವಿಪರ‍್ಯಾಸ ಎಂದರೆ ಇತ್ತೀಚಿನ ದಿನಮಾನಗಳಲ್ಲಿ ಗಾಂಧೀಜಿ ಅವರಿಂದಲೇ ದೇಶ ಹಾಳಾಯಿತು ಎಂದು ಸುಳ್ಳು ಸುದ್ದಿ ಹರಡುತ್ತಿರುವುದು ಖಂಡನೀಯ ಎಂದ ಅವರು, ಅವರು ಇಲ್ಲದೇ ಇದ್ದಿದ್ದರೆ ಭಾರತದ ಚಿತ್ರಣ ಬೇರೆಯೇ ಆಗಿರುತ್ತಿತ್ತು ಎಂದು ಎಂದರು. ಮಹಾತ್ಮಗಾಂಧೀಜಿ ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ದಂಡಯಾತ್ರೆ ಮೂಲಕ ಇದು ಸಾಧ್ಯವಾಯಿತು ಎಂದು ಹೇಳಿದರು.ಇದಕ್ಕೂ ಮುನ್ನ ಗಾಂಧಿ ಜಯಂತಿ ಮತ್ತು ಲಾಲ್‌ಬಹದೂರ್ ಶಾಸ್ತ್ರಿಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು, ಜೆಡಿಎಸ್ ಸಹ ಕಾರ್ಯದರ್ಶಿ ಕ್ರಾಂತಿ ಸಿ.ತ್ಯಾಗಿ, ಹಾಸನ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ನಗರಸಭೆ ಮಾಜಿ ಅಧ್ಯಕ್ಷರು ಸಿ.ಆರ್.ಶಂಕರ್, ಪಕ್ಷದ ಮುಖಂಡರಾದ ಬನವಾಸೆ ರುದ್ರಪ್ಪ, ಚಿಕ್ಕಹೊನ್ನೇನಹಳ್ಳಿ ಶಿವಣ್ಣ, ಸಂಗಮ್, ಮಾಂತೇಶ್ ಸತೀಶ್, ಅಂಕಪುರ ಪಾಪಣ್ಣ, ಗೊರೂರು ಹೇಮರಾಜ್, ಬಿದರಕೆರೆ ಜಯರಾಂ, ರಾಮಘಟ್ಟ ಜಗದೀಶ್, ರಂಗಶೆಟ್ಟಿ, ಚಿಕ್ಕಬಸವನಹಳ್ಳಿ ನಾಗಣ್ಣ, ನಾಗಮ್ಮ, ಚಂದ್ರಿಕಾ, ಪ್ರೇಮಮ್ಮ ಮೊದಲಾದವರಿದ್ದರು. Share this... Whatsapp Facebook Pinterest Twitter Linkedin Gmail Print Post navigation ರೈತರ ಬಾಳು ಹಸನಾದರೆ ದೇಶ ಪ್ರಗತಿ ಕಾಣುತ್ತದೆ: ಡಾ. ರಮೇಶ್ ಗಾಂಧೀಜಿ ಮತ್ತು ಶಾಸ್ತ್ರಿಜಿ ಅವರು ಭಾರತ ದೇಶದ ಅನಾಗ್ರ ರತ್ನಗಳು