Share this... Whatsapp Facebook Pinterest Twitter Linkedin Gmail Printಬಗರ್ ಹೊಳೆನರಸೀಪುರ: ಬಗರ್ ಹುಕುಂ ಸಕ್ರಮಿಕರಣ ಸಮಿತಿ ಸಭೆಯು ತಾಲೂಕು ಕಚೇರಿಯ ಸಭಾಂಗಣದಲ್ಲಿ ಇಂದು ನಡೆಯಿತು. ಸಭೆ ಪ್ರಾರಂಭದ ವೇಳೆ ಸಮಿತಿ ಸದಸ್ಯ ಎಚ್. ಟಿ.ಲಕ್ಷ್ಮಣ ವಿಷಯ ಪ್ರಸ್ತಾಪಿಸಿ ಸಮಿತಿಯ ಮುಂದೆ ತಂದಿರುವ ಫಲಾನುಭವಿಗಳ ಕಡತ ಕುರಿತು ಮಾತನಾಡುತ್ತಾ ಅರ್ಹ ಫಲಾನುಭವಿಗಳು ಭೂಮಿಯನ್ನು ಸಾಗುವಳಿ ಮಾಡುತ್ತಿರುವ ಕುರಿತು, ಸ್ಥಳಕ್ಕೆ ನಮ್ಮ ಸಮಿತಿಯ ಸದಸ್ಯರುಗಳನ್ನು ಕರೆದುಕೊಂಡು ಹೋಗುವಂತೆ ಸಮಿತಿಯ ಅಧ್ಯಕ್ಷರ ಮತ್ತು ಸದಸ್ಯ ಕಾರ್ಯದರ್ಶಿಗಳ ಗಮನ ಸೆಳೆದರು. ಈ ಕುರಿತು ಸಮಿತಿಯ ಅಧ್ಯಕ್ಷರು , ಸ್ಥಳೀಯ ಶಾಸಕರು ತಮ್ಮ ಅನಿಸಿಕೆಯನ್ನು ಸಭೆಯಲ್ಲಿ ವ್ಯಕ್ತಪಡಿಸುತ್ತಾ ಯಾವುದೇ ಕಾರಣಕ್ಕೂ ಸಮಿತಿ ಸದಸ್ಯರುಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಬಾರದೆಂದು ಕಡಾ ಖಂಡಿತವಾಗಿ ಏರು ಧ್ವನಿಯಲ್ಲಿ ಸದಸ್ಯ ಕಾರ್ಯದರ್ಶಿ, ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್ ಅವರಿಗೆ ಸೂಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರುಗಳು ಸ್ಥಳಕ್ಕೆ ನಮ್ಮನ್ನು ಕರೆದುಕೊಂಡು ಹೋಗದಿದ್ದರೆ ನಾವುಗಳು ಸಭೆಯಲ್ಲಿ ನಡೆಯುವ ಯಾವುದೇ ನಡವಳಿಗೆ ಸಹಿ ಮಾಡುವುದಿಲ್ಲ ಎಂದು ಹಠಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ದಂಡ ಧಿಕಾರಿಯವರು ಸದಸ್ಯರುಗಳು ನಾವು ತಯಾರಿಸಿರುವ ಕಡತವನ್ನು ಪರಿಶೀಲಿಸಬಹುದು. ಆದರೆ ಯಾವುದೇ ಕಾರಣಕ್ಕೂ ಸ್ಥಳಕ್ಕೆ ಕರೆದುಕೊಂಡು ಹೋಗಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ತಿಳಿಸಿದರು. ಇದಕ್ಕೆ ಸಮಾಧಾನಗೊಳ್ಳದ ಸದಸ್ಯರುಗಳು ನಾವುಗಳು ಸಾಗುವಳಿ ಸ್ಥಳಕ್ಕೆ ತೆರಳಲು ಅವಕಾಶವಿಲ್ಲ ಎಂದಾದರೆ ತಾವು ಲಿಖಿತವಾಗಿ ನಮಗೆ ಬರೆದು ಕೊಡಿ ಎಂದು ಹೇಳಿದರು. ಸಮಿತಿ ಅಧ್ಯಕ್ಷರು ಹೇಳುವ ವಿಷಯವನ್ನು ಮತ್ತು ನಾವುಗಳು ಕೊಡುವ ಸಲಹೆಯನ್ನು ನಡಾವಳಿಯಲ್ಲಿ ನಮೂದಿಸಿ ಎಂದು ಸದಸ್ಯರುಗಳು ಸಭೆಯಲ್ಲಿ ತಿಳಿಸಿದಾಗ ಇದಕ್ಕೆ ಒಪ್ಪದ ಅಧ್ಯಕ್ಷರು ಸದಸ್ಯರುಗಳನ್ನು ಸಾಗುವಳಿ ಸ್ಥಳಕ್ಕೆ ಕರೆದುಕೊಂಡು ಹೋದರೆ ಯಾವುದೇ ಕಾರಣಕ್ಕೂ ನಾನು ಯಾವುದಕ್ಕೂ ಸಹಿ ಮಾಡುವುದಿಲ್ಲ. ನಾನು ಯಾವುದೇ ಸಭೆಗೂ ಬರುವುದಿಲ್ಲ ಎಂದು ಅಧಿಕಾರಿಗಳ ಮೇಲೆ ಕೆಂಡಮಂಡಲವಾಗಿ ಸಭೆಯಿಂದ ಸಿಟ್ಟಾಗಿ ಹೊರ ನಡೆದರು. ಈ ವೇಳೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯರುಗಳನ್ನು ಸಾಗುವಳಿ ಸ್ಥಳಕ್ಕೆ ಕರೆದುಕೊಂಡು ಹೋಗಬಾರದೆಂದು ಎಂಬ ನಿಯಮವಿದ್ದರೆ ಈ ಕುರಿತು ನಮಗೆ ಸ್ಪಷ್ಟ ಮಾಹಿತಿ ನೀಡಲೇಬೇಕೆಂದು ಪಟ್ಟು ಹಿಡಿದ ಸದಸ್ಯರುಗಳು ಸಭೆಯಲ್ಲಿ ಕುಳಿತರು. ಸದಸ್ಯರ ಅಹವಾಲು ಕುರಿತು ಸದಸ್ಯ ಕಾರ್ಯದರ್ಶಿ ಸಭೆಯಲ್ಲಿ ಮಾತನಾಡಿ ಸದಸ್ಯರುಗಳನ್ನು ಸಾಗುವಳಿ ಸ್ಥಳಕ್ಕೆ ಕರೆದುಕೊಂಡು ಹೋಗುವ ಬಗ್ಗೆ ಸರ್ಕಾರದಿಂದ, ಸಂಬಂಧಪಟ್ಟ ಮೇಲಾಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳುವುದಾಗಿ ಸದಸ್ಯರುಗಳಿಗೆ ಆಶ್ವಾಸನೆ ನೀಡಿದರು. ಅವರ ಆಶ್ವಾಸನೆಯಂತೆ ಈ ಹಿಂದೆ ಸಂಬಂಧಪಟ್ಟ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುವ ತಾಲೂಕು ತಹಸೀಲ್ದಾರ್ ರವರ, ರಾಜಸ್ವನಿರೀಕ್ಷಕರ, ಗ್ರಾಮ ಲೆಕ್ಕಿಗರ ಜೊತೆ ಸದಸ್ಯರು ಸ್ಥಳ ಪರಿಶೀಲನೆ ಮಾಡಿದ ಕಡತಕ್ಕೆ ಸದಸ್ಯರುಗಳು ಸಹಿ ಮಾಡಿ ಸಭೆಯಿಂದ ಹೊರ ನಡೆದರು. Share this... Whatsapp Facebook Pinterest Twitter Linkedin Gmail Print Post navigation ರೈತರ ಭೂಮಿ ಲೂಟಿಯೊಡೆದು ಸಾಮ್ರಾಜ್ಯ ಕಟ್ಟುತ್ತೀರಾ..? ಹೆಚ್ಡಿಕೆ ಮಾಜಿ ಶಾಸಕ ಪ್ರೀತಮ್ ಗೌಡ ವಿರುದ್ಧ ಎಫ್ ಐ ಆರ್ !?