Share this... Whatsapp Facebook Pinterest Twitter Linkedin Gmail Printನೈಸ್ ಯೋಜನೆಯನ್ನು ಆ ಕಂಪನಿಯಿಂದ ಈಗ ಯಾರು ಟೇಕ್ ಓವರ್ ಮಾಡಲು ಹೊರಟಿದ್ದಾರೆ? ಹಾಸನ: ರೈತರ ಭೂಮಿಯನ್ನು ಲೂಟಿಯೊಡೆದು ತಮ್ಮ ಸಾಮ್ರಾಜ್ಯವನ್ನು ನಿರ್ಮಾಣ ಮಾಡಲು ಹೊರಟಿದ್ದೀರಾ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಇಂದು ಚನ್ನಮ್ಮನವರ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಅವರು ಮಾತನಾಡಿದರು. ಬಿಡದಿ ಭೂಸ್ವಾಧೀನ ಮತ್ತು ನೈಸ್ ಯೋಜನೆ ಸೇರಿದಂತೆ ವಿವಿಧ ಪ್ರಮುಖ ವಿಚಾರಗಳ ಕುರಿತು ಮಾತನಾಡಿದ್ದು, ಸರ್ಕಾರದ ಕ್ರಮಗಳನ್ನು ಕಟುವಾಗಿ ಟೀಕಿಸಿದ್ದಾರೆ. ಹನೂರಿನ ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಬೇಟೆ ವಿಚಾರವಾಗಿ ಮೂವರನ್ನು ಸ್ಥಳದಲ್ಲೇ ಸಾಯುವಂತೆ ತಲೆ ಮತ್ತು ಎದೆಗೆ ಗುಂಡು ಹಾರಿಸಿರುವುದು ಗಂಭೀರ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ದಿನಾಚರಣೆಯಂದು ಅವರು ತಪ್ಪೇ ಮಾಡಿರಬಹುದು, ಮಾಡಿದ್ದಾರಾ ಇಲ್ವಾ ಮುಂದೆ ಸತ್ಯಾಂಶ ಹೊರಬರಲಿ. ಅವರನ್ನು ಹಿಡಿಯಬೇಕೆಂದರೆ ಕಾಲಿಗಾದರೂ ಶೂಟ್ ಮಾಡಬಹುದಿತ್ತು. ಆದರೆ ಇಲ್ಲಿ ನೇರವಾಗಿ ಫೈರ್ ಮಾಡಿದ್ದು, ಶೂಟೌಟ್ ಮಾಡೋಕೆ ಅವರೇನು ವೀರಪ್ಪನ್ನಾ..? ಇದು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಹೆಚ್ಡಿಕೆ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ‘ಅವರೂ ಗುಂಡು ಹಾರಿಸಿದರು’ ಅಂತ ಹೇಳುತ್ತಿದ್ದಾರೆ. ಗುಂಡು ಹಾರಿಸಿದ್ದಿದ್ದರೆ ಇವರಿಗೆ ಯಾಕೆ ಗಾಯವಾಗಿಲ್ಲ?. ಅವರೆಲ್ಲ ಕೂಲಿ ಕೆಲಸ ಮಾಡಿ ಬದುಕುವಂಥವರು. ಸರಕಾರ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡುವುದೇನೋ ಸರಿ. ಎಲ್ಲೆ ಮೀರಿರುವ ಅಧಿಕಾರಿಗಳೂ ಅದಕ್ಕೆ ಬೆಲೆ ತರಲೇಬೇಕು. ಕಾನೂನಿನಲ್ಲಿ ಜೀವ ತೆಗೆಯಲು ಯಾರಿಗೂ ಅಧಿಕಾರವಿಲ್ಲ. ಜಿಲ್ಲಾ ಸಚಿವರು ‘ಅಧಿಕಾರಿಗಳದ್ದೇ ತಪ್ಪು ಇರಬಹುದು’ ಎಂದು ಹೇಳುತ್ತಾರೆ. ಇನ್ನೊಂದೆಡೆ ಸರಕಾರ ಸಮಜಾಯಿಷಿ ಕೊಟ್ಟಿದೆ. ಮುಖ್ಯಮಂತ್ರಿಗಳು, ‘ಸಂಪೂರ್ಣವಾಗಿ ಮಾಹಿತಿ ತೆಗೆದುಕೊಂಡು, ನಂತರ ಮುಂದಿನ ತೀರ್ಮಾನ ಮಾಡುತ್ತೇವೆ’ ಅಂತ ಹೇಳಿದ್ದಾರೆ. ಸರ್ಕಾರ ಆ ಭಾಗದ ಜನರ ಆಕ್ರೋಶವನ್ನು ತಣಿಸುವ ಕೆಲಸ ಮಾಡಬೇಕು” ಎಂದರು. ನೈಸ್ ಯೋಜನೆಯನ್ನು ಆ ಕಂಪನಿಯಿಂದ ಈಗ ಯಾರು ಟೇಕ್ ಓವರ್ ಮಾಡಲು ಹೊರಟಿದ್ದಾರೆ? ಇದರ ಹಿಂದೆ ಯಾರ ಪಾಲು ಇದೆ ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿ, ನೈಸ್ ಪ್ರಾಜೆಕ್ಟ್ ಟೇಕ್ ಓವರ್ ಗುಟ್ಟನ್ನು ರಟ್ಟು ಮಾಡಬೇಕು ಎಂದು ಆಗ್ರಹಿಸಿದರು. ಬಿಡದಿ ಭೂಸ್ವಾಧೀನ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ರೈತರು ತಮ್ಮ ಭೂಮಿ ನೀಡುವುದಿಲ್ಲ ಎಂದು ಕಳೆದ 500 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ದಬ್ಬಾಳಿಕೆ ಮಾಡಿ, ರೌಡಿಗಳನ್ನು ಬಿಟ್ಟು ಹೆದರಿಸಿ ಭೂಮಿ ವಾಪಸ್ ಪಡೆಯಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದರು. ಸೋನಿಯಾ ಗಾಂಧಿ ಹೇಳಿಕೆ: ವಂದೇ ಮಾತರಂ ಗೀತೆಗೆ ಅವಮಾನ ಮಾಡಿರುವ ಕಾಂಗ್ರೆಸ್ ನಾಯಕರ ಸಣ್ಣತನವನ್ನು ಪ್ರಶ್ನಿಸಿದ ಅವರು, ಸೋನಿಯಾ ಗಾಂಧಿ ಅವರ ವಿರುದ್ಧವೂ ಕಿಡಿಕಾರಿ ಮೊದಲು ರಾಷ್ಟ್ರಕ್ಕೆ ಮತ್ತು ನಮ್ಮ ಧ್ವಜಕ್ಕೆ ಗೌರವ ಕೊಡುವುದನ್ನು ನಿಮ್ಮ ಹೈಕಮಾಂಡ್ ಗೆ ಹೇಳಿಕೊಡಿ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು. Share this... Whatsapp Facebook Pinterest Twitter Linkedin Gmail Print Post navigation ತಮಿಳುನಾಡಿಗೆ ನೀರು ಕೊಟ್ಟು ಜಿಲ್ಲೆಯ ರೈತರಿಗೆ ಸರ್ಕಾರದಿಮದ ಅನ್ಯಾಯ –ನಾರಾಯಣಗೌಡ ರೌಡಿಸಂ ಬೆಳೆಸಲಿಕ್ಕೆ ಭಾರತ್ ಜೋಡೊ: ಹೆಚ್.ಡಿ.ಕೆ