Share this... Whatsapp Facebook Pinterest Twitter Linkedin Gmail Printರೌಡಿಸಂ ಬೆಳೆಸಲಿಕ್ಕೆ ಭಾರತ್ ಜೋಡೊ ಹೆಸರಿನಲ್ಲಿ ಯುವಕರ ಸಂಘಟನೆ :ಎಚ್.ಡಿ.ಕುಮಾರಸ್ವಾಮಿ ಬಾಗಲಕೋಟೆ: ರೌಡಿಸಂ ಬೆಳೆಸಲಿಕ್ಕೆ ಭಾರತ್ ಜೋಡೊ ಹೆಸರಿನಲ್ಲಿ ಯುವಕರನ್ನು ಸಂಘಟನೆ ಮಾಡುತ್ತೇವೆ, ಅವರಿಗೆ ದೊಡ್ಡ ಮಟ್ಟದಲ್ಲಿ ಜ್ಞಾನ ನೀಡುತ್ತೇವೆ ಅಂತ ಹೇಳೋದು. ಇದು ಜ್ಞಾನ ತುಂಬಿಸೋಕೂ ಅಲ್ಲ, ಉದ್ಯೋಗ ಕೊಡೋಕೂ ಅಲ್ಲ” ಎಂದು ಹೆಚ್.ಡಿ.ಕೆ.ಟೀಕಿಸಿದರು. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೊಗುಣಶಿ ಗ್ರಾಮ ಬಳಿ ರೈತರ ಉತ್ಪನ್ನಗಳ ಮಾರಾಟ ಹಾಗೂ ಖರೀದಿ ಕೇಂದ್ರದ ಕಟ್ಟಡ ಉದ್ಘಾಟನೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿ ರಾಜ್ಯ ಸರಕಾರ ಭಾರತ್ ಜೋಡೋ ಮೂಲಕ ಯುವಕರನ್ನು ಸಂಘಟಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಂಚಾಯಿತಿ ಮಟ್ಟದಲ್ಲಿ ಭಾರತ್ ಜೋಡೋ ಮಾಡುತ್ತಿದ್ದಾರೆ. 6,000 ಸಂಘಗಳನ್ನು ಮಾಡೋದು, ಆ ಸಂಘಗಳಿಗೆ 10 ಲಕ್ಷ ರೂ.ಗಳನ್ನು ಕೊಡುವುದಕ್ಕೆ ಸಾವಿರ ಕೋಟಿ ರೂ. ಆಗುತ್ತದೆ. ಯಾರಪ್ಪನ ಮನೆದು ಭಾರತ್ ಜೋಡೋ?” ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, “ರೌಡಿಸಂ ಬೆಳೆಸಲಿಕ್ಕೆ ಭಾರತ್ ಜೋಡೊ ಹೆಸರಿನಲ್ಲಿ ಯುವಕರನ್ನು ಸಂಘಟನೆ ಮಾಡುತ್ತೇವೆ. ಅವರಿಗೆ ದೊಡ್ಡ ಮಟ್ಟದಲ್ಲಿ ಜ್ಞಾನ ನೀಡುತ್ತೇವೆ ಅಂತ ಹೇಳೋದು. ಇದು ಜ್ಞಾನ ತುಂಬಿಸೋಕೂ ಅಲ್ಲ, ಉದ್ಯೋಗ ಕೊಡೋಕೂ ಅಲ್ಲ” ಎಂದು ಟೀಕಿಸಿದರು. “ಹಿಂದೆ ಗುಂಡೂರಾವ್ ಕಾಲದಲ್ಲೂ ಎಸ್ ಎಂ ಖಾನ್ ಅಂತಿದ್ರು. ಅವರೂ ಕೂಡಾ ಇದೇ ತರಹ ಮಾಡಿದ್ದರು. ಆ ಸಂಸ್ಕೃತಿಯನ್ನು ರಾಜ್ಯದಲ್ಲಿ ಪುನಃ ತರಲು ಹೊರಟಿದ್ದಾರೆ. ಡಿಸಿಗಳ ಮೂಲಕ ಸಂಘ ರಚಿಸುತ್ತಿದ್ದಾರೆ. ಡಿಸಿಗಳ ಕೆಲಸ ಇದೇನಾ? ಇದು ಸರ್ಕಾರದ ಕೆಲಸ. ಅಲ್ಲಿ ಇಸ್ಪೀಟ್ ಆಡೋಕೆ, ಮತ್ತೊಂದಕ್ಕೆ ಎನ್ಕ್ರೇಜ್ ಮಾಡಲು ಹೊರಟಿದ್ದಾರೆ. ಬೆಂಗಳೂರು ನಗರದಲ್ಲಿ 68 ಭಾಗದಲ್ಲಿ ಇಸ್ಪೀಟ್ ಅಡ್ಡೆಗಳು ನಡೆಯುತ್ತಿವೆ. ಇವುಗಳನ್ನು ಕೇಳುವವರಿಲ್ಲ. ಆ ರೀತಿ ಸರ್ಕಾರ ಹೊರಟಿದೆ. ಇಂಥದ್ದನ್ನು ಪ್ರೋತ್ಸಾಹಿಸಲು ಸಂಘ ಕಟ್ಟುತ್ತಿದ್ದೀರಾ” ಎಂದು ಪ್ರಶ್ನಿಸಿದರು. Share this... Whatsapp Facebook Pinterest Twitter Linkedin Gmail Print Post navigation ರೈತರ ಭೂಮಿ ಲೂಟಿಯೊಡೆದು ಸಾಮ್ರಾಜ್ಯ ಕಟ್ಟುತ್ತೀರಾ..? ಹೆಚ್ಡಿಕೆ ಮಾಜಿ ಶಿಕ್ಷಣ ಸಚಿವ, ಬಿಜೆಪಿಯ ಬಿ.ಸಿ. ನಾಗೇಶ್ ನಿಧನ