ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ: ಹುಲ್ಲಹಳ್ಳಿ ಸುರೇಶ್ 

ಬೇಲೂರು: ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಮತ್ತೊಬ್ಬ ಮನುಷ್ಯ ನೀಡುವ ರಕ್ತವೇ ಸಾವಿನ ಸನಿಹವಿರುವ ವ್ಯಕ್ತಿಗೆ ಜೀವದಾನ ಎಂದು ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್ ಹೇಳಿದರು.

80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬೇಲೂರು ನಗರದ ಕಾರು ಚಾಲಕರ ಸಂಘ ಆವರಣದಲ್ಲಿ ರೆಡ್ ಕ್ರಾಸ್ ಸಂಸ್ಥೆ , ತಾಲೂಕು ಕಾಫಿ ಬೆಳಗಾರರ ಸಂಘ, ತಾಲೂಕು ಕಾರು ಚಾಲಕರ ಸಂಘ, ಹಾಸನದ ವೈದ್ಯಕೀಯ ಏಮ್ಸ್ ಸಂಸ್ಥೆ, ಬೇಲೂರು ತಾಲೂಕು ರೋಟರಿ ಸಂಸ್ಥೆ, ಇವುಗಳ ಸಯೋಗದೊಂದಿಗೆ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ, ಅಪಘಾತಕ್ಕೊಳಗಾದವರಿಗೆ ಮತ್ತೊಬ್ಬ ಮನುಷ್ಯ ನೀಡುವ ರಕ್ತವೇ ಜೀವದಾನ. ಆರೋಗ್ಯವಂತ ವ್ಯಕ್ತಿಯು ಪ್ರತಿ ಮೂರು ತಿೆಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ, ಬದಲಿಗೆ ಇನ್ನೊಬ್ಬರ ಅಮೂಲ್ಯ ಜೀವವನ್ನು ಉಳಿಸಿದ ತೃಪ್ತಿ ನೀಡಲಿದೆ ಎಂದರು.

ರಕ್ತ ದಾನಿಗಳಿಗೆ ಮೆಡಿಸನ್ ಕಿಟ್ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಕಾರು ಸಂಘದ ಎಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ನಗರ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *