Share this... Whatsapp Facebook Pinterest Twitter Linkedin Gmail Printಬಿಡದಿ ಟೌನ್ ಶಿಪ್ ಯೋಜನೆ ಕೈ ಬಿಡುವಂತೆ ಆಗ್ರಹ ನಾಳೆಯಿಂದ ಮೈತ್ರಿ ಪಕ್ಷದಿಂದ ಪಾದಯಾತ್ರೆ ಹಾಸನ: (ಹೊಳೆನರಸೀಪುರ): ಇನ್ಮುಂದೆ ನಮ್ಮ ತಾಯಿಯನ್ನು ಜೀವಂತವಾಗಿ ನೋಡಲು ಆಗುವುದಿಲ್ಲ. ಹಾಗಾಗಿ ಈ ಭೂಮಿಯಲ್ಲಿ ಅವರ ಕಾರ್ಯವನ್ನು ಮಾಡಿದ್ದೇನೆ ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಇಂದು ವಿವಿಧ ವಿಚಾರಗಳ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಾಯಿಯ ಸಮಾಧಿ ವಿಚಾರವಾಗಿ ಮಾತನಾಡಿದ ಅವರು ಇನ್ನುಂದೆ ನನ್ನಮ್ಮ ತಾಯಿಯನ್ನು ಜೀವಂತವಾಗಿ ನೋಡಲು ಆಗುವುದಿಲ್ಲ. ಹಾಗಾಗಿ ಈ ಭೂಮಿಯಲ್ಲಿ ಅವರ ಕಾರ್ಯವನ್ನು ಮಾಡಿದ್ದೇನೆ. ನಮ್ಮ ಮುಂದೆ ಇಗಲೂ ನಮ್ಮ ತಾಯಿ ಇದ್ದಾರೆ. ಎಂದು ಪ್ರತಿನಿತ್ಯ ನೆನಪಿಸಿಕೊಳ್ಳುತ್ತೇವೆ. ನಿನ್ನೆ ಬೆಂಗಳೂರಿಗೆ ಬಂದಿದ್ದೆ. ಇವತ್ತು ತಾಯಿಯವರ ಸಮಾಧಿ ನೋಡಲು ಬಂದಿದ್ದೇವೆ ಎಂದು ಹೇಳಿದರು. ನಾಳಿನ ಪಾದಯಾತ್ರೆ ಕುರಿತು ಮಾತನಾಡಿದ ಅವರು, ‘ನಾಳಿನ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ನಮ್ಮ ಪಕ್ಷದ ಶಾಸಕರು ಹಾಗೂ ಮುಖಂಡರು ನೈಸ್ ರಸ್ತೆಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಿದ್ದೇವೆ. ಮೂರು ದಿನಗಳ ಕಾಲ ಪಾದಯಾತ್ರೆ, ಇಟ್ಟುಕೊಂಡಿದ್ದಾರೆ. ಸ್ಟೇಚ್ಛಾಚಾರವಾಗಿ ನಿರ್ಧಾರ ಮಾಡಿಕೊಂಡು ಟೌನ್ ಶಿಪ್ ಮಾಡಲು ಹೊರಟಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ನೀಡಲು ಹಾಗೂ ಯೋಜನೆಯನ್ನು ಕೈಬಿಡಬೇಕೆಂದು ಪಾದಯಾತ್ರೆ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದರು. Share this... Whatsapp Facebook Pinterest Twitter Linkedin Gmail Print Post navigation ಜೆಡಿಎಸ್ ಗೆ ಆರ್ಥಿಕ ಶಕ್ತಿ ಇಲ್ಲದಿದ್ದರೂ ಜನತೆಯ ಶಕ್ತಿ ಇದೆ ಕರ್ನಾಟಕಕ್ಕೆ ಪರ್ಯಾಯ ರಾಜಕೀಯ ಶಕ್ತಿ ಅಗತ್ಯ: ನಟ ಚೇತನ್ ಅಹಿಂಸಾ