ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ 24 ಗಂಟೆಗಳ ರಾಜ್ಯಮಟ್ಟದ ಆರೋಗ್ಯ ಕ್ಷೇತ್ರದ ನವೋದ್ಯಮ ಹ್ಯಾಕಥಾನ್ ‘ಆರೋಗ್ಯ ಮಂಥನ-2026’ರಲ್ಲಿ ಮೊದಲ ಮೂರು ಸ್ಥಾನ ಪಡೆದ ತಂಡಗಳು.

www.Aksharamitra.com

ಹಾಸನ: ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್ (ಟಿಬಿಐ) ಹಾಗೂ ಎಂಇ-ರೈಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ 24 ಗಂಟೆಗಳ ರಾಜ್ಯಮಟ್ಟದ ಆರೋಗ್ಯ ಕ್ಷೇತ್ರದ ನವೋದ್ಯಮ ಹ್ಯಾಕಥಾನ್ ‘ಆರೋಗ್ಯ ಮಂಥನ-2026’ ಯಶಸ್ವಿಯಾಗಿ ನಡೆಯಿತು.

ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ 24 ಗಂಟೆಗಳ ರಾಜ್ಯಮಟ್ಟದ ಆರೋಗ್ಯ ಕ್ಷೇತ್ರದ ನವೋದ್ಯಮ ಹ್ಯಾಕಥಾನ್ ‘ಆರೋಗ್ಯ ಮಂಥನ-2026’ರಲ್ಲಿ ಮೊದಲ ಮೂರು ಸ್ಥಾನ ಪಡೆದ ತಂಡಗಳು.

ಹ್ಯಾಕಥಾನ್‌ನಲ್ಲಿ 288 ವಿದ್ಯಾರ್ಥಿಗಳು 68 ತಂಡಗಳಾಗಿ ಭಾಗವಹಿಸಿದ್ದರು. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ನವೀನ ಪರಿಹಾರಗಳನ್ನು ರೂಪಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ವಿಜೇತರಿಗೆ ಒಟ್ಟು ₹1 ಲಕ್ಷ ಮೊತ್ತದ ನಗದು ಬಹುಮಾನ ಹಾಗೂ ಸ್ಟಾರ್ಟ್‌ಅಪ್ ಮತ್ತು ಇನ್‌ಕ್ಯುಬೇಷನ್ ಅವಕಾಶಗಳನ್ನು ಕಲ್ಪಿಸಲಾಗಿತ್ತು.

ಹಿಮ್ಸ್‌ನ ನಿರ್ದೇಶಕ ಡಾ. ಬಿ. ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ತೇಜಸ್ವಿ, ಡಾ.ಪ್ರವೀಣ್, ಡಾ. ನಿರುಪಮಾ, ಡಾ. ಸಂಧ್ಯಾ, ಡಾ. ರಶ್ಮಿ, ಡಾ. ರಘು, ಡಾ. ಸಾವಿತ್ರಿ ಹಾಗೂ ಡಾ. ಸುನೀತಾ ಅವರು ಭಾಗವಹಿಸಿದ ತಂಡಗಳಿಗೆ ಮಾರ್ಗದರ್ಶನ ನೀಡಿದರು.

ಸ್ಪರ್ಧೆಯಲ್ಲಿ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ರಶ್ಮಿ ಎಂ. ನೇತೃತ್ವದ ತಂಡ ಪ್ರಥಮ, ರೇವಾ ವಿಶ್ವವಿದ್ಯಾಲಯದ ಧ್ರುವ ಕೆ. ನೇತೃತ್ವದ ತಂಡ ದ್ವಿತೀಯ ಹಾಗೂ ಕೆನರಾ ಎಂಜಿನಿಯರಿಂಗ್ ಕಾಲೇಜಿನ ದೇವಿಶ್ರೀ ನೇತೃತ್ವದ ತಂಡ ತೃತೀಯ ಸ್ಥಾನ ಪಡೆದವು. ಏಳು ತಂಡಗಳಿಗೆ ವಿಶೇಷ ಪ್ರಶಂಸನಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಬಿ.ಆರ್.ಗುರುದೇವ್, ಕಾರ್ಯದರ್ಶಿ ಜಿ.ಟಿ.ಕುಮಾರ್, ಪ್ರಾಂಶುಪಾಲ ಡಾ.ಎಸ್.ಪ್ರದೀಪ್, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ನಿರ್ದೇಶಕರಾದ ಡಾ.ಡಿ.ಸಿ.ಅರವಿಂದ್, ಜಿ ಆರ್ ಶ್ರೀನಿವಾಸ್, ಆರೋಗ್ಯ ಮಂಥನ ಹ್ಯಾಕಥಾನ್‌ ಸಂಯೋಜಕಿ ಡಾ. ಗೀತಾ ಕಿರಣ್, ಕಿರಣ್ ಎನ್ ಜಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *