Share this... Whatsapp Facebook Pinterest Twitter Linkedin Gmail Printಐತಿಹಾಸಿಕ ಸ್ಮಾರಕ ರಕ್ಷಣೆಗೆ 21.50ಕೋಟಿ ಹಣ ಬಿಡುಗಡೆ ಮಾಡುವಂತೆ ಸಂಸದ ಮನವಿ ನವದೆಹಲಿ: ಹಾಸನ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ₹21.50 ಕೋಟಿ ಅನುದಾನ ಮಂಜೂರಾತಿ ಮಾಡುವಂತೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಗೆ ಸಂಸದ ಶ್ರೇಯಸ್ ಎಂ. ಪಟೇಲ್ ಮನವಿ ಮಾಡಿದರು. ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಹಾಸನ ಜಿಲ್ಲೆಯ ಐತಿಹಾಸಿಕ, ಪಾರಂಪರಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಪ್ರಮುಖ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಒಟ್ಟು ₹21.50 ಕೋಟಿ ಅನುದಾನ ಮಂಜೂರು ಮಾಡುವಂತೆ ಅಧಿಕೃತ ಮನವಿ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯ ಹೊಯ್ಸಳ ವಾಸ್ತುಶಿಲ್ಪ ಪರಂಪರೆ ಹಾಗೂ ಶ್ರೀಮಂತ ಸಾಂಸ್ಕೃತಿಕ ಹೇರಿಟೇಜ್ ಅನ್ನು ಸಂರಕ್ಷಿಸುವುದರ ಜೊತೆಗೆ ಜಿಲ್ಲೆಯ ಪ್ರವಾಸೋದ್ಯಮ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಅನುದಾನವನ್ನು ಕೋರಲಾಗಿದೆ ಎಂದು ಮನವಿ ಪತ್ರದಲ್ಲಿ ಪ್ರಸ್ತಾಪಿಸಲಾದ ಪ್ರಮುಖ ಯೋಜನೆಗಳು ಶ್ರವಣಬೆಳಗೊಳ ಸ್ಮಾರಕ – ಸಮಗ್ರ ಸಂರಕ್ಷಣೆ ಮತ್ತು ನಿರ್ವಹಣಾ ಯೋಜನೆ: ₹13 ಕೋಟಿ ಮಂಜರಾಬಾದ್ ಕೋಟೆ ಮತ್ತು ಡಂಜನ್, ಸಕಲೇಶಪುರ: ₹4 ಕೋಟಿ ಹೊಯ್ಸಳೇಶ್ವರ ದೇವಸ್ಥಾನ, ಹಳೇಬೀಡು ಹಾಗೂ ಹುಚೇಶ್ವರ ದೇವಸ್ಥಾನ: ₹3 ಕೋಟಿ ಈಶ್ವರ ದೇವಸ್ಥಾನ, ಅರಸೀಕೆರೆ – ಮುಂಭಾಗದ ಗುಮ್ಮಟ ಸಂರಕ್ಷಣೆ: ₹1.50 ಕೋಟಿ ವೆಚ್ಚವಾಗಲಿದ್ದು ಹಾಗೂ ಮೇಲಿನ ಈ ಎಲ್ಲಾ ಯೋಜನೆಗಳಿಗೆ ಒಟ್ಟು ₹21.50 ಕೋಟಿ ಅನುದಾನ ಮಂಜೂರು ಮಾಡುವಂತೆ ಸಂಸದ ಶ್ರೇಯಸ್ ಎಂ ಪಟೇಲ್ ಮನವಿ ಮಾಡಿದ್ದಾರೆ. Share this... Whatsapp Facebook Pinterest Twitter Linkedin Gmail Print Post navigation ಚೈನ್ಸ್ ಸ್ಯಾಚಿಂಗ್ ಆರೋಪಿಗೆ ಬಿತ್ತು ಸಿಕ್ಕಾಪಟ್ಟೆ ಗೂಸಾ ಹಾಸನದಲ್ಲಿ ESI ಆಸ್ಪತ್ರೆ ನಿರ್ಮಾಣಕ್ಕೆ ಮನವಿ