Share this... Whatsapp Facebook Pinterest Twitter Linkedin Gmail Printಹಾಸನದಲ್ಲಿ ESI ಆಸ್ಪತ್ರೆ ಸ್ಥಾಪನೆಗೆ ಕೇಂದ್ರ ಸಚಿವೆಗೆ ಸಂಸದ ಮನವಿ ನವದೆಹಲಿ: ಹಾಸನದಲ್ಲಿ 200 ಹಾಸಿಗೆಗಳ ESI ಆಸ್ಪತ್ರೆ ಸ್ಥಾಪನೆ ಮಾಡುವಂತೆ ಸಂಸದ ಶ್ರೇಯಸ್ ಎಂ. ಪಟೇಲ್ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು. Advertisement ಹಾಸನದಲ್ಲಿರುವ ಪ್ರಸ್ತುತ ESI ಡಿಸ್ಪೆನ್ಸರಿಯನ್ನು ಪೂರ್ಣ ಪ್ರಮಾಣದ 200 ಹಾಸಿಗೆಗಳ ESI ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಕಾರಣ ಹಾಸನದಲ್ಲಿ ಸರಿಸುಮಾರು 61,337 ESI ವಿಮಾ ಫಲಾನುಭವಿಗಳು (Insured Persons) ನೋಂದಾಯಿತರಾಗಿದ್ದಾರೆ. ಆದರೆ ಅವರ ಆರೋಗ್ಯ ಸೇವೆಯ ಅಗತ್ಯಗಳಿಗೆ ಪ್ರಸ್ತುತ ವ್ಯವಸ್ಥೆ ಸಮರ್ಪಕವಾಗಿಲ್ಲ. ಗಂಭೀರ ಕಾಯಿಲೆ, ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ತಜ್ಞ ವೈದ್ಯಕೀಯ ಸೇವೆಗಳಿಗೆ ಹಾಸನದ ESI ಫಲಾನುಭವಿಗಳು ಇತರೆ ಆಸ್ಪತ್ರೆಗಳಿಗೆ ಅಥವಾ ಹಾಸನದ ಹೊರಗೆ ತೆರಳಬೇಕಾದ ಪರಿಸ್ಥಿತಿ ಇದೆ. Advertisement ಅಲ್ಲದೆ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಹೆಚ್ಚುವರಿ ಆರ್ಥಿಕ ಮತ್ತು ಪ್ರಯಾಣದ ಹೊರೆ ಉಂಟಾಗುತ್ತಿದೆ. ಹಾಸನ ಜಿಲ್ಲೆ ಕೈಗಾರಿಕಾ, ವಾಣಿಜ್ಯ ಹಾಗೂ ಸೇವಾ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ದೊಡ್ಡ ಪ್ರಮಾಣದ ಕಾರ್ಮಿಕ ವರ್ಗವಿದೆ. ಆದ್ದರಿಂದ ಬಲಿಷ್ಠ ESI ಆರೋಗ್ಯ ಮೂಲಸೌಕರ್ಯ ಅತ್ಯಗತ್ಯವಾಗಿದೆ. ಪ್ರಸ್ತಾವಿತ 200 ಹಾಸಿಗೆಗಳ ESI ಆಸ್ಪತ್ರೆಗೆ ಸಂಬಂಧಿಸಿದಂತೆ ತಕ್ಷಣ feasibility study ಹಾಗೂ requirement assessment ನಡೆಸುವಂತೆ ಮನವಿ ಮಾಡಿದ್ದಾರೆ. Advertisement ಇನ್ನು ಯೋಜನೆಗೆ ಅಗತ್ಯವಿರುವ Administrative Approval ಮತ್ತು Expenditure Sanction ನೀಡುವಂತೆ ಒತ್ತಾಯಿಸಲಾಗಿದ್ದು, ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಆಸ್ಪತ್ರೆಯಲ್ಲಿ ತಜ್ಞ ವೈದ್ಯಕೀಯ ವಿಭಾಗಗಳು, ತುರ್ತು ಚಿಕಿತ್ಸಾ ಘಟಕ, ICU, ಶಸ್ತ್ರಚಿಕಿತ್ಸಾ ಕೊಠಡಿಗಳು, ರೋಗನಿರ್ಣಯ ಸೌಲಭ್ಯಗಳು, ಔಷಧಾಲಯ ಸೇರಿದಂತೆ ಅಗತ್ಯ ವೈದ್ಯಕೀಯ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಕೋರಿದ್ದಾರೆ. ಇನ್ನು 61,337 ESI ಫಲಾನುಭವಿಗಳ ಹಿತದೃಷ್ಟಿಯಿಂದ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಹಾಗೂ ಕಾಲಮಿತಿಯೊಳಗೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಹಾಸನದಲ್ಲಿ 200 ಹಾಸಿಗೆಗಳ ESI ಆಸ್ಪತ್ರೆ ನಿರ್ಮಾಣವಾದರೆ ಸಾವಿರಾರು ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಸ್ಥಳೀಯವಾಗಿಯೇ ಲಭ್ಯವಾಗಲಿದೆ.ಹಾಸನ ಜಿಲ್ಲೆಯ ಕಾರ್ಮಿಕರ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share this... Whatsapp Facebook Pinterest Twitter Linkedin Gmail Print Post navigation ಸ್ಮಾರಕ ಸಂರಕ್ಷಣೆ 21ಕೋಟಿ ಅನುದಾನಕ್ಕೆ ಮನವಿ ಲೋಕಾಯುಕ್ತ ಬಲೆಗೆ ಪಿಎಸ್ಐ ಮಂಜುನಾಥ