Share this... Whatsapp Facebook Pinterest Twitter Linkedin Gmail Printಚಾಮರಾಜನಗರ: ಬೆಳ್ಳುಳ್ಳಿಗೆ ಉತ್ತಮ ದರ ಇರುವುದನ್ನು ಮನಗೊಂಡಿರುವ ಖದೀಮರು ಫಸಲನ್ನೇ ಕದ್ದೊಯ್ದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ. ಕಳ್ಳತನವಾಗಿರುವ ಬೆಳ್ಳುಳ್ಳಿ ಹೊಲದಲ್ಲಿ ನಿಂದು ಅಳಲುತೊಂಡಿಕೊಂಡ ರೈತರು ಭೀಮನಬೀಡು ಗ್ರಾಮದ ಸಿದ್ದರಾಜು ಎಂಬ ರೈತನ ಜಮೀನಿನಲ್ಲಿ ಈ ಕಳವು ಪ್ರಕರಣ ನಡೆದಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಕಳ್ಳರು ಆಘಾತವನ್ನುಂಟು ಮಾಡಿದ್ದಾರೆ. ಕೃಷಿ ಜಮೀನುಗಳಲ್ಲಿ ಪಂಪ್ಸೆಟ್ ಕೇಬಲ್, ಸ್ಟಾರ್ಟರ್, ಸೋಲಾರ್ ಬ್ಯಾಟರಿಗಳನ್ನು ಹೊತ್ತೊಯ್ದ ಘಟನೆಗಳು ನಡೆಯುತ್ತಿದ್ದವು. ಈಗ ಫಸಲನ್ನೇ ಕೊಯ್ದು ಕದ್ದೊಯ್ದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕಾಡು ಪ್ರಾಣಿಗಳ ಕಾಟದಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಕಳ್ಳರಿಂದಲೂ ರಕ್ಷಣೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ”ಮಳೆ ಇಲ್ಲದಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸಿ ಎರಡು ಎಕರೆಯಲ್ಲಿ ಬೆಳ್ಳುಳ್ಳಿ ಬೆಳೆದಿದ್ದೆ. ಉತ್ತಮ ಇಳುವರಿಯೂ ಬಂದಿತ್ತು. ಸದ್ಯ, ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳುಳ್ಳಿಗೆ 350-420 ರೂ. ಇದ್ದು ಖದೀಮರು ಸುಮಾರು 5 ಕ್ವಿಂಟಾಲ್ ನಷ್ಟು ಬೆಳ್ಳುಳ್ಳಿ ಫಸಲನ್ನೇ ಕೊಯ್ದುಕೊಂಡು ಪರಾರಿಯಾಗಿದ್ದಾರೆ” ಸಿದ್ದರಾಜು, ಗದ್ದೆಯ ಮಾಲೀಕ ರೈತ ಸಿದ್ದರಾಜು ಭೀಮನಬೀಡು ಈ ಬಗ್ಗೆ ಅಕ್ಷರಮಿತ್ರ ಪತ್ರಿಕೆಯೊಂದಿಗೆ ಮತ್ತೊಬ್ಬ ರೈತ ಮಾತನಾಡಿ,”ಬೆಳೆ ಭಾಗಶಃ ಕಟಾವಿಗೆ ಬಂದಿತ್ತು. ಇನ್ನೇನು ರೈತನ ಕಿಸೆಗೆ ಹಣ ಸೇರಬೇಕಿತ್ತು. ಈ ಸಮಯದಲ್ಲಿ ಯಾರೋ ಖದೀಮರು ಫಸಲನ್ನೇ ಕೊಯ್ದು ಕಳ್ಳತನ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬರಗಾಲ ಆವರಿಸಿದ್ದರೂ ಕೂಡ ಇರುವ ಅಲ್ಪಸ್ವಲ್ಪ ನೀರಿನಲ್ಲಿ, ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳ್ಳುಳ್ಳಿ ಬೆಳೆಯಲಾಗಿತ್ತು. ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿ ಫಸಲನ್ನು ಕಿತ್ತುಕೊಂಡು ಪರಾರಿಯಾಗಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಈ ಮೂಲಕ ಕಳ್ಳರನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂಬುದು ನಮ್ಮ ಆಗ್ರಹ ರಾಜ್, ರೈತ ಮುಖಂಡ Share this... Whatsapp Facebook Pinterest Twitter Linkedin Gmail Print Post navigation ಇಂದು ಉದ್ಯೋಗ ಮೇಳ ಜೀವನದಿಗೆ ನೀರು ಬಂದರೂ ಬಯಲು ಸೀಮೆಗೆ ತಪ್ಪದ ಬರ