Share this... Whatsapp Facebook Pinterest Twitter Linkedin Gmail Printನೊಣವಿನಕೆರೆ ಶ್ರೀಗಳಿಂದ ಬುತ್ತಿ ಸೋಮೇಶ್ವರ ದೇವಾಲಯ ಲೋಕಾರ್ಪಣ ವರದಿ: ಉಳ್ಳಾವಳ್ಳಿ ಶ್ರೀನಿವಾಸ್, ಹಿರೀಸಾವೆ ಚನ್ನರಾಯಪಟ್ಟಣ : ತಾಲ್ಲೂಕಿನ ಹೊಸಹಳ್ಳಿಪುರ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬುತ್ತಿ ಸೋಮೇಶ್ವರ ದೇವಾಲಯ ಲೋಕಾರ್ಪಣ ಕಾರ್ಯವನ್ನು ನೊಣವಿನಕೆರೆ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ನೆರವೇರಿಸಿದರು. ಜಾಹೀರಾತು ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಹಸಿರು ಚಪ್ಪರ ಹಾಕಿ ತಳಿರು- ತೋರಣ ಗಳಿಂದ ಸಿಂಗರಿಸಿದ್ದು ದೇಗುಲ, ರಸ್ತೆ ಹಾಗೂ ಬೀದಿಗಳನ್ನು ವಿದ್ಯುತ್ ದೀಪಾಲಂಕಾರಗೊಳಿಸಲಾಗಿತ್ತು. ಆ.16ರ ಮುಂಜಾನೆ ಗ್ರಾಮಕ್ಕೆ ಆಗಮಿಸಿದ ನೊಣವಿನಕೆರೆ ಶ್ರೀ ಕಾಡುಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿಯವರನ್ನು ಪಾದಪೂಜೆ ಮಾಡಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಬುತ್ತಿ ಸೋಮೇಶ್ವರ ಸ್ವಾಮಿಗೆ ವಿವಿಧ ಬಗೆಯ ಅಭಿಷೇಕಗಳು ನೆರವೇರಿದ್ದು ವಸ್ತ್ರ ಹಾಗೂ ಆಭರಣಗಳಿಂದ ಸಿಂಗರಿಸಲಾಯಿತು. ಶ್ರೀಗಳು ಕಳಶ ಪ್ರತಿಷ್ಠಾಪನ ಕಾರ್ಯವನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಭಕ್ತರು ಶ್ರೀಗಳು ಹಾಗೂ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಹೋಮ, ಹವನ ಹಾಗೂ ಪೂರ್ಣಾವತಿ ನಂತರ ಮಹಾ ಮಂಗಳಾರತಿ ನಡೆಯಿತು. ಬಳಿಕ ಅನ್ನದಾಸೋಹ ನೆರವೇರಿತು. ನರಿಹಳ್ಳಿ, ಉಳ್ಳಾವಳ್ಳಿ, ಹೊಸಹಳ್ಳಿ, ತುಪ್ಪದಹಳ್ಳಿ, ನಾಗನಹಳ್ಳಿ, ಬಿಳಿಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ದೇಗುಲದ ಲೋಕಾರ್ಪಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. Share this... Whatsapp Facebook Pinterest Twitter Linkedin Gmail Print Post navigation ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣರ ಪಾತ್ರವು ದೊಡ್ಡದಿದೆ: ಹೆಚ್ ಎಲ್ ವಿ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ- ಶಾಸಕ