ಮಂಗಲ್ ಪಾಂಡೆ ನೇತೃತ್ವದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅನೇಕ ಬ್ರಾಹ್ಮಣ ಯುವಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ: ಹೆಚ್ ಎಲ್ ವಿಜಯ್ ಕುಮಾರ್

ವರದಿ: ರಾಮದೇವಪುರ ಗಿರೀಶ್, ಹಾಸನ 

ಹಾಸನ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ವರ್ಗಗಳು, ಸಮುದಾಯಗಳು ಮತ್ತು ಧರ್ಮಗಳ ಜನತೆ ಬ್ರಾಹ್ಮಣ ಸಮುದಾಯವು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದು ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಎಂ ಎಸ್ ಶ್ರೀಕಂಠಯ್ಯ ಹೇಳಿದರು.

ಹಾಸನದ ಗಾಯತ್ರಿ ಪತ್ತಿನ ಸಹಕಾರ ಸಂಘದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು

ಹಾಸನ ನಗರದ ಕೆ ಆರ್ ಪುರಂ ಬಡಾವಣೆಯಲ್ಲಿರುವ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜನೆ ಮಾಡಲಾಗಿದ್ದ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ನಂತರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬ್ರಾಹ್ಮಣ ಸಮುದಾಯದಿಂದಲೂ ಅನೇಕ ನಾಯಕರು, ಕ್ರಾಂತಿಕಾರಿಗಳು, ಲೇಖಕರು ಮತ್ತು ಸಮಾಜ ಸುಧಾರಕರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಹತ್ವದ ಪಾತ್ರ ವಹಿಸಿದ್ದಾರೆ. ಚಳವಳಿಯನ್ನು ಮುನ್ನಡೆಸಿದ ಅನೇಕರು ಮತ್ತು ತಳಮಟ್ಟದಲ್ಲಿ ಸಂಘಟಿಸಿದವರು ವಿವಿಧ ಸಮಾಜಗಳಿಂದ ಬಂದವರಾಗಿದ್ದರು. ಮಹಾತ್ಮ ಗಾಂಧಿ ಮತ್ತು ಇತರ ನಾಯಕರಿಗೆ ಬೆಂಬಲ ನೀಡುವ ಮೂಲಕ ಬ್ರಾಹ್ಮಣ ಸಮುದಾಯದ ಅನೇಕ ವ್ಯಕ್ತಿಗಳು ವಕೀಲರಾಗಿ, ಪತ್ರಕರ್ತರಾಗಿ ಮತ್ತು ರಾಜಕೀಯ ನಾಯಕರಾಗಿ ಬ್ರಿಟಿಷರ ಕಾನೂನುಗಳನ್ನು ವಿರೋಧಿಸಿ, ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದರು.

ಗಾಯತ್ರಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಐ ನೆಟ್ ವಿಜಯಕುಮಾರ್ ಮಾತನಾಡಿ ಶಸ್ತ್ರಾಸ್ತ್ರ ಹೋರಾಟದ ಮೂಲಕ ಬ್ರಿಟಿಷರನ್ನು ಎದುರಿಸಿದ ಮಂಗಳ ಪಾಂಡೆ ಮುಂತಾದವರ ಜತೆಗೆ, ಅನೇಕ ಬ್ರಾಹ್ಮಣ ಯುವಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಅಲ್ಲದೆ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಮೂಲಕವೂ ಸ್ವಾತಂತ್ರ್ಯದ ಆಕಾಂಕ್ಷೆಯನ್ನು ಜನರ ಮನೆಗಳಿಗೆ ತಲುಪಿಸಲು ರಾಷ್ಟ್ರೀಯ ಭಾವನೆ ಮೂಡಿಸುವ ಲೇಖನಗಳು, ಕವನಗಳು ಮತ್ತು ದಿನಪತ್ರಿಕೆಗಳನ್ನು ಪ್ರಕಟಿಸುವಲ್ಲಿ ವಿದ್ವಾಂಸರು ಮತ್ತು ಬರಹಗಾರರ ಪಾತ್ರ ಅಂದಿನ ಕಾಲದಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದರು.

ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗಾಯತ್ರಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಹೆಚ್ ವಿ ಶ್ರೀನಿವಾಸಮೂರ್ತಿ, ಕೆ ಎಸ್ ಎನ್ ಮೂರ್ತಿ, ಮಾಜಿ ಉಪಾಧ್ಯಕ್ಷೆ ರೇಖಾ ರಾಮಚಂದ್ರ ಸ್ವಾತಂತ್ರ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಜಾಹೀರಾತು

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೆಚ್ ಜಿ ರಂಗನಾಥ, ಉಪಾಧ್ಯಕ್ಷ ಮುರುಳಿ ಬಿ ಎಸ್ ನಿರ್ದೇಶಕರುಗಳಾದ ಹೆಚ್ ಎಸ್ ತಿಲಕ್, ಡಾ. ಜಗದೀಶ್, ಎಸ್ ರಘುನಂದನ್, ಹೆಚ್ ಪಿ ಸೋಮಶೇಖರ್, ಆಶಾ ಕುಮಾರಸ್ವಾಮಿ, ನಂದಾಮಣಿ, ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ನಾಗರತ್ನ, ಲೆಕ್ಕಪರಿಶೋಧಕ ಪ್ರಕಾಶ್ ಭಟ್ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಹಾಸನ ಜಿಲ್ಲಾ ಬ್ರಾಹ್ಮಣ ಸಭಾ ಮತ್ತು ಗಾಯತ್ರಿ ಪತ್ತಿನ ಸಹಕಾರ ಸಂಘದ ಹಲವು ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Leave a Reply

Your email address will not be published. Required fields are marked *