ಪ್ರಶ್ನೆ ಮಾಡಿದ್ದೇ ತಪ್ಪಾ ..!? ಬ್ರಾಹ್ಮಣ ಕುಟುಂಬದ ಮೇಲೆ ದೌರ್ಜನ್ಯ | ನ್ಯಾಯಕ್ಕಾಗಿ ಮಹಿಳೆ ಆಗ್ರಹ

ಹಾಸನ: ಏಳೆಂಟು ದಶಕಗಳಿಂದ ಉಳಿಮೆ ಮಾಡಿಕೊಂಡು ಬಂದಿದ್ದ ಜಮೀನಿಗೆ ಅಕ್ರಮವಾಗಿ ಕಲ್ಲು ಕಂಬ ನೆಡುವ ಮೂಲಕ, ಮೂಲ ಜಮೀನಿನ ಮಾಲೀಕನಿಗೆ ಹಲ್ಲೆ ಮಾಡಿರುವಂತ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ

ಸಂಪೂರ್ಣ ವಿಡಿಯೋ ನೋಡಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 👇

ಏನಿದು ಘಟನೆ:

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ, ಬಾಗೂರು ಸಮೀಪದ ಪಿ.ದಾಸಪುರದ ಜಾನಕಮ್ಮ ಎಂಬುವರಿಗೆ ಸೇರಿದ ಸರ್ವೆ ನಂಬರ್ 57/1B ಯಲ್ಲಿ 22 ಗುಂಟೆ ಜಮೀನಿದ್ದು, ಹೇಮಾವತಿ ಕಾಲುವೆ ಹಾದುಹೋಗಿದ್ದರಿಂದ ನಾಲೆಗಾಗಿ ಮೂರು ಗುಂಟೆ ಜಮೀನನ್ನ ಬಿಟ್ಟುಕೊಟ್ಟಿದ್ದು ಉಳಿದ 19 ಗುಂಟೆ ಜಮೀನನ್ನ ಏಳೆಂಟು ದಶಕಗಳಿಂದ ಉಳಿಮೆ ಮಾಡಿಕೊಂಡು ಬರುತ್ತಿದ್ದರು

ಪ್ರಸ್ತುತ ಈ ಜಮೀನಿನ ಪಕ್ಕದಲ್ಲಿಯೇ, ಅದೇ ಗ್ರಾಮದ ಹೊನ್ನೇಗೌಡರ ಮಗ ಅಶೋಕ್ ರವರ ಜಮೀನು ಕೂಡ ಇದ್ದು, ಜಮೀನಿನ ಹದ್ದುಬಸ್ತಿ ಹಾಗೂ ದುರಸ್ತಿ ಮಾಡಿಕೊಂಡು, ಅವರ ಜಮೀನಿಗೆ ಮಾತ್ರ ಕಲ್ಲು ಕಂಬ ನೆಟ್ಟಿದ್ದಲ್ಲದೆ, ಅಕ್ರಮವಾಗಿ ಜಾನಕಮ್ಮನವರಿಗೆ ಸೇರಿದ ಎರಡು ಗುಂಟೆ ಜಮೀನಿಗೆ ಅಕ್ರಮವಾಗಿ ಕಲ್ಲುಕಂಬ ನೆಟ್ಟು ಒತ್ತುವರಿಗೆ ಪ್ರಯತ್ನಿಸಿದ್ದಾನೆ.

ಹಲ್ಲೆ ನಡೆಸಿರುವ ಆರೋಪಿ ಅಶೋಕ

ಕಲ್ಲುಕುಂಬ ನೆಟ್ಟ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಲು ಹೋದ ಮೂಲ ಮಾಲೀಕರ ಮಗ ಹೇಮಂತ್ @ವಾಸುಗೆ ಹಲ್ಲೆ ನಡೆಸಿ, ಗಾಸಿಗೊಳಿಸಿದ್ದು, ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ, ನುಗ್ಗೆಹಳ್ಳಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಜಮೀನು ಒತ್ತುವರಿ ಮಾಡಿಕೊಂಡು ಆರೋಪಿಗೆ, ಎಚ್ಚರಿಕೆ ಮಾಡಿದ್ದು, ಹದ್ದುಬಸ್ತು ಮಾಡಿಸುವ ತನಕ ಯಾವುದೇ ರೀತಿಯ ಕೃಷಿ ಚಟುವಟಿಕೆಗಳನ್ನ ಇಬ್ಬರೂ ಕೂಡ ಮಾಡಬಾರದೆಂದು ಹೇಳಿದ್ದರು ಕೂಡ, ಕಳು ಕಂಬನೆಟ್ಟಿರುವುದು, ಮತ್ತು ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆ ನಮಗೆ ಸೂಕ್ತ ನ್ಯಾಯ ಕೊಡಿಸಬೇಕು ಎಂದು ನೊಂದ ಕುಟುಂಬ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು,

Leave a Reply

Your email address will not be published. Required fields are marked *