ಆಯುಧವಿಲ್ಲದೆ ಅಹಿಂಸ ಮಾರ್ಗದಲ್ಲಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾನ್ ನಾಯಕ ಗಾಂಧೀಜಿ

ಹಳೇಬೀಡು: ಗಾಂಧೀಜಿ ಮತ್ತು ಶಾಸ್ತ್ರಿಜಿ ಅವರು ಭಾರತ ದೇಶದ ಅನಾಗ್ರ ರತ್ನಗಳು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್ ಬಿ .ಕೆ .ಅವರು ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರ 157ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜಯಂತಿಯ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸಮೀಪದ ಚೀಲ ನಾಯಕನಹಳ್ಳಿ ಗ್ರಾಮದ ತೀರ್ಥ ಮಲ್ಲೇಶ್ವರ ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಮೂಲಕ ವಿಶೇಷವಾಗಿ ಗಾಂಧಿ ಮತ್ತು ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಯಾವುದೇ ಆಯುಧವಿಲ್ಲದೆ ಅಹಿಂಸ ಮಾರ್ಗದಲ್ಲಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾನ್ ನಾಯಕ ಗಾಂಧೀಜಿಯವರು ಅವರ ಕಲ್ಪನೆಯಂತೆ ಅವರ ಜನ್ಮದಿನದ ಅಂಗವಾಗಿ ಸ್ವಚ್ಛ ಭಾರತವನ್ನು ನನಸಾಗಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ನ್ನುೊಳಗೊಂಡು ಕಲ್ಯಾಣಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದು ಸಂಪೂರ್ಣವಾಗಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಿರುವುದು ಖುಷಿ ತಂದಿದೆ ಎಂದರು.

ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಅಂಗವಾಗಿ ಸಮೀಪದ ಚೀಲನಾಯಕನಹಳ್ಳಿ ತೀರ್ಥ ಮಲ್ಲೇಶ್ವರ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು.

ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯೊಂದಿಗೆ ಇಡೀ ದೇಶವನ್ನು ಜಾಗೃತಗೊಳಿಸಿದ ಮಹಾನ್ ರಾಷ್ಟ್ರ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಾಮಾಣಿಕತೆ ದಕ್ಷತೆ ಮೂಲಕ ಹೇಗೆ ರಾಷ್ಟ್ರವನ್ನು ಸದೃಢವಾಗಿ ಕಟ್ಟಬಹುದೆಂಬುದನ್ನು ಪ್ರಸ್ತುತ ರಾಜಕಾರಣಿಗಳಿಗೆ ತೋರಿಸಿಕೊಟ್ಟ ಮಹಾನ್ ನಾಯಕ ಅವರ ಹಾದಿಯಲ್ಲಿ ಪ್ರಸಕ್ತ ರಾಜಕಾರಣಿಗಳು ನಡೆದರೆ ದೇಶ ಸದೃಢವಾಗಿರುತ್ತದೆ ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಯವರ ಜನ್ಮ ದಿನಾಚರಣೆಯನ್ನು ಕಲ್ಯಾಣಿ ಸ್ವಚ್ಛಗೊಳಿಸುವ ಮೂಲಕ ಆಚರಣೆ ಮಾಡಿರುವುದು ಸಂತಸ ತಂದಿದೆ ಪುರಾತನ ಸ್ಮಾರಕಗಳು ಅವಶೇಷಗಳನ್ನು ಉಳಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯವಾಗಿದೆ ಅದನ್ನು ನಾವೆಲ್ಲರೂ ಜವಾಬ್ದಾರಿಯುತವಾಗಿ ಪಾಲಿಸಬೇಕಿದೆ. 

  • ಸ್ಪಂದನ. ಅಂತಿಮ ಬಿಎ ವಿದ್ಯಾರ್ಥಿನಿ. ಹಳೇಬೀಡು

ಎನ್ಎಸ್ಎಸ್ ಅಧಿಕಾರಿ ಶಂಕರಪ್ಪನವರು ಮಾತನಾಡಿ, ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದರ ಜೊತೆ ಜೊತೆಗೆ ಸೇವಾ ಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಹಿತದೃಷ್ಟಿಯಿಂದ ಚೀಲನಾಯಕನಹಳ್ಳಿ ಗ್ರಾಮದಲ್ಲಿರುವ ವಿಶೇಷ ದೇವಾಲಯದ ತೀರ್ಥ ಮಲ್ಲೇಶ್ವರ ದೇವಾಲಯದ ಕಲ್ಯಾಣಿ ಸ್ವಚ್ಛಗೊಳಿಸುವ ಕಾರ್ಯ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲ್ಯಾಣ ಸಂಪೂರ್ಣ ಸ್ವಚ್ಛಗೊಳಿಸಿರುವುದು ಗಾಂಧೀಜಿಯವರ ಜಯಂತಿಗೆ ಅರ್ಥ ತಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ತಿಮ್ಮನಾಯಕ್, ಮನೋಜ್ ಕುಮಾರ್, ಶಿವರಾಜಕುಮಾರ್, ಉದಯ್ ಕುಮಾರ್, ಚಂದ್ರಶೇಖರ್ ,ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *