ಹಿರಿಯ ನಟ ಅನಂತ್ ನಾಗ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಅಕ್ಷರ ಮಿತ್ರ ಡಿಜಿಟಲ್ ಡೆಸ್ಕ್:

ನವದೆಹಲಿ: ಚಂದನವನದ ಹಿರಿಯ ನಟ ಅನಂತ್‌ ನಾಗ್‌ ಅವರನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ 2024’ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.

ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಸಲ್ಲಿಸಿರುವ ಅನುಪಮ ಕೊಡುಗೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 22 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ಕುರಿತು ಭಾರತೀಯ ವಾರ್ತಾಶಾಖೆ ಪಿಐಬಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ, ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಹಾಗೂ ಹಲವಾರು ತಲೆಮಾರುಗಳಿಗೆ ಸ್ಫೂರ್ತಿಯಾಗಿರುವ ಅವರ ಅದ್ಭುತ ಸಿನಿಮಾ ಪಯಣಕ್ಕಾಗಿ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ 2024’ ಅನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿರುವುದಾಗಿ ತಿಳಿಸಿದೆ.

ಸೆಪ್ಟೆಂಬರ್ 22 ರಂದು ಪ್ರಶಸ್ತಿ ಪ್ರದಾನ: ಗುಜರಾತ್‌ನ ಕೆವಾಡಿಯಾದಲ್ಲಿ 2026ರ ಸೆಪ್ಟೆಂಬರ್ 22 ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅನಂತ್ ನಾಗ್ ಅವರನ್ನು ಅಭಿನಂದಿಸಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ದಿಗ್ಗಜ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು. ದಶಕಗಳ ಕಾಲ ಅವರ ಸಹಜ ಅಭಿನಯ, ಅದ್ಭುತ ಬಹುಮುಖಿ ಪ್ರತಿಭೆ ಮತ್ತು ಚಾತುರ್ಯವು ಭಾರತೀಯ ಚಿತ್ರರಂಗದ ಮೇಲೆ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ನೈಜತೆಯನ್ನು ತಂದಿದ್ದಾರೆ. ನಿಜಕ್ಕೂ ಅತ್ಯುನ್ನತ ಕಲಾವಿದರೊಬ್ಬರಿಗೆ ಸಂದ ಅತ್ಯಂತ ಸೂಕ್ತವಾದ ಗೌರವವಿದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಐದು ಬಾರಿ ರಾಜ್ಯ ಪ್ರಶಸ್ತಿ: ಚಲನಚಿತ್ರಗಳಲ್ಲದೆ ಕಿರುತೆರೆ, ರಂಗಭೂಮಿಯಲ್ಲೂ ಅನಂತ್ ನಾಗರ್ ಹೆಸರುವಾಸಿಯಾಗಿದ್ದಾರೆ. ಖ್ಯಾತ ಲೇಖಕ ಆರ್.ಕೆ. ನಾರಾಯಣ್ ಅವರ ಕಥೆಗಳನ್ನು ಆಧರಿಸಿದ ಜನಪ್ರಿಯ ದೂರದರ್ಶನ ಧಾರಾವಾಹಿ ‘ಮಾಲ್ಗುಡಿ ಡೇಸ್’ನಲ್ಲಿ ಅವರು ನಟಿಸಿದ್ದಾರೆ. ಈ ಹಿರಿಯ ನಟ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಐದು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪದ್ಮಭೂಷಣ ಪ್ರಶಸ್ತಿ: 2025ರಲ್ಲಿ ಕೇಂದ್ರ ಸರ್ಕಾರ ಅನಂತ ನಾಗ್ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಭೂಷಣ’ವನ್ನು ನೀಡಿ ಗೌರವಿಸಿತು.

ಡಾ. ರಾಜ್ ಕುಮಾರ್ ಬಳಿಕ ಇದೀಗ ಕನ್ನಡದ ಮತ್ತೋರ್ವ ನಟನಿಗೆ ಪ್ರತಿಷ್ಠಿತ ಪ್ರಶಸ್ತಿ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗುತ್ತದೆ ಮತ್ತು ಭಾರತೀಯ ಚಿತ್ರರಂಗದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ವ್ಯಕ್ತಿಯೊಬ್ಬರಿಗೆ ಇದನ್ನು ನೀಡಲಾಗುತ್ತದೆ. ಸುಮಾರು 30 ವರ್ಷಗಳ ನಂತರ ಡಾ. ರಾಜ್ ಕುಮಾರ್ ನಂತರ ಇದೀಗ ಕನ್ನಡಕ್ಕೆ ಈ ಪ್ರಶಸ್ತಿ ಒಲಿದುಬಂದಿದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಶೇಷತೆಗಳು:

ಉನ್ನತ ಗೌರವ: ಭಾರತೀಯ ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ಅತ್ಯಂತ ದೊಡ್ಡ ಪ್ರಶಸ್ತಿ ಇದು.

ಸ್ಥಾಪನೆ: ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಖ್ಯಾತರಾದ ಧುಂಡಿರಾಜ್ ಗೋವಿಂದ್ ಫಾಲ್ಕೆ (ದಾದಾಸಾಹೇಬ್ ಫಾಲ್ಕೆ) ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ 1969ರಲ್ಲಿ ಇದನ್ನು ಸ್ಥಾಪಿಸಲಾಯಿತು.

ಪ್ರಶಸ್ತಿ ಮೊತ್ತ: ಸ್ವರ್ಣ ಕಮಲ (ಗೋಲ್ಡನ್ ಲೋಟಸ್) ಪದಕ, ಶಾಲು ಮತ್ತು 10,00,000 ರೂಪಾಯಿ ನಗದು ಬಹುಮಾನವನ್ನು ಹೊಂದಿದೆ.

ಪ್ರಶಸ್ತಿ ಪಡೆದ ಪ್ರಮುಖ ಚಿತ್ರರಂಗದ ದಿಗ್ಗಜರು : 1969ರಲ್ಲಿ ದೇವಿಕಾ ರಾಣಿ ಅವರಿಂದ ಆರಂಭವಾದ ಈ ಪ್ರಶಸ್ತಿ ನಂತರ ಭಾರತೀಯ ಚಿತ್ರರಂಗದ ಹಲವು ಕ್ಷೇತ್ರಗಳ ಸಾಧಕರಿಗೆ ದೊರೆತಿದೆ. ನಟ-ನಟಿಯರಷ್ಟೇ ಅಲ್ಲದೆ ನಿರ್ದೇಶಕರು, ನಿರ್ಮಾಪಕರು, ಗೀತರಚನಕಾರರು, ಸಂಗೀತ ನಿರ್ದೇಶಕರು, ಗಾಯಕರು ಮತ್ತು ಛಾಯಾಗ್ರಾಹಕರೂ ಈ ಗೌರವ ಪಡೆದಿದ್ದಾರೆ.

ಕೆಲವು ಪ್ರಮುಖ ಪುರಸ್ಕೃತರು:

  1. 1969 – ದೇವಿಕಾ ರಾಣಿ – ಮೊದಲ ಪುರಸ್ಕೃತರು
  2. 1970 – ಬಿ.ಎನ್. ಸಿರ್ಕಾರ್
  3. 1971 – ಪೃಥ್ವಿರಾಜ್ ಕಪೂರ್
  4. 1972 – ಪಂಕಜ್ ಮಲ್ಲಿಕ್
  5. 1973 – ಸುಲೋಚನಾ
  6. 1974 – ಬಿ.ಎನ್. ರೆಡ್ಡಿ
  7. 1975 – ಧೀರೇಂದ್ರನಾಥ್ ಗಂಗೂಲಿ
  8. 1976 – ಕಾನನ್ ದೇವಿ
  9. 1977 – ನಿತಿನ್ ಬೋಸ್
  10. 1978 – ರೈಚಂದ್ ಬೋರಾಲ್
  11. 1979 – ಸೋಹ್ರಾಬ್ ಮೋದಿ
  12. 1980 – ಪಿ. ಜೈರಾಜ್
  13. 1981 – ನೌಶಾದ್
  14. 1982 – ಎಲ್.ವಿ. ಪ್ರಸಾದ್
  15. 1983 – ದುರ್ಗಾ ಖೋಟೆ
  16. 1984 – ಸತ್ಯಜಿತ್ ರೇ
  17. 1985 – ವಿ. ಶಾಂತಾರಾಮ್
  18. 1986 – ಬಿ. ನಾಗಿರೆಡ್ಡಿ
  19. 1987 – ರಾಜ್ ಕಪೂರ್
  20. 1988 – ಅಶೋಕ್ ಕುಮಾರ್
  21. 1989 – ಲತಾ ಮಂಗೇಶ್ಕರ್
  22. 1990 – ಅಕ್ಕಿನೇನಿ ನಾಗೇಶ್ವರ ರಾವ್
  23. 1991 – ಭಾಲ್ಜಿ ಪೆಂಧಾರ್ಕರ್
  24. 1992 – ಭೂಪೇನ್ ಹಜಾರಿಕಾ
  25. 1993 – ಮಜ್ರೂಹ್ ಸುಲ್ತಾನ್‌ಪುರಿ
  26. 1994 – ದಿಲೀಪ್ ಕುಮಾರ್
  27. 1995 – ಡಾ. ರಾಜ್‌ಕುಮಾರ್
  28. 1996 – ಶಿವಾಜಿ ಗಣೇಶನ್
  29. 1997 – ಕವಿ ಪ್ರದೀಪ್
  30. 1998 – ಬಿ.ಆರ್. ಚೋಪ್ರಾ
  31. 1999 – ಹೃಷಿಕೇಶ್ ಮುಖರ್ಜಿ
  32. 2000 – ಆಶಾ ಭೋಸ್ಲೆ
  33. 2001 – ಯಶ್ ಚೋಪ್ರಾ
  34. 2002 – ದೇವ್ ಆನಂದ್
  35. 2003 – ಮೃಣಾಲ್ ಸೇನ್
  36. 2004 – ಅದೂರ್ ಗೋಪಾಲಕೃಷ್ಣನ್
  37. 2005 – ಶ್ಯಾಮ್ ಬೆನಗಲ್
  38. 2006 – ತಪನ್ ಸಿನ್ಹಾ
  39. 2007 – ಮನ್ನಾ ಡೇ
  40. 2008 – ವಿ.ಕೆ. ಮೂರ್ತಿ
  41. 2009 – ಡಿ. ರಾಮಾನಾಯ್ಡು
  42. 2010 – ಕೆ. ಬಾಲಚಂದರ್
  43. 2011 – ಸೌಮಿತ್ರ ಚಟರ್ಜಿ
  44. 2012 – ಪ್ರಾಣ್
  45. 2013 – ಗುಲ್ಜಾರ್
  46. 2014 – ಶಶಿ ಕಪೂರ್
  47. 2015 – ಮನೋಜ್ ಕುಮಾರ್
  48. 2016 – ಕೆ. ವಿಶ್ವನಾಥ್
  49. 2017 – ವಿನೋದ್ ಖನ್ನಾ
  50. 2018 – ಅಮಿತಾಭ್ ಬಚ್ಚನ್
  51. 2019 – ರಜನಿಕಾಂತ್
  52. 2020 – ಆಶಾ ಪಾರೇಖ್
  53. 2021 – ವಹೀದಾ ರೆಹಮಾನ್
  54. 2022 – ಮಿಥುನ್ ಚಕ್ರವರ್ತಿ
  55. 2023 – ಮೋಹನ್‌ಲಾಲ್
  56. 2024 – ಅನಂತ್ ನಾಗ್.

ಅನಂತ್ ನಾಗ್ ಪರಿಚಯ: 

ಅನಂತ್ ನಾಗ್ ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ಹಿರಿಯ ನಟ ಮತ್ತು ರಾಜಕಾರಣಿ.

ಜನನ: ಸೆಪ್ಟೆಂಬರ್ 4, 1948.

ಸ್ಥಳ: ಶಿರಾಲಿ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ.

ಕುಟುಂಬ: ಇವರ ಪತ್ನಿ ಗಾಯತ್ರಿ, ಮಗಳು ಅದಿತಿ ಅನಂತ್ ನಾಗ್. ದಿವಂಗತ ಶಂಕರ್ ನಾಗ್ ಇವರ ಸಹೋದರ ಮತ್ತು ಅರುಂಧತಿ ನಾಗ್ ಇವರ ನಾದಿನಿ.

ಚಲನಚಿತ್ರ ಜೀವನಅನಂತ್ ನಾಗ್ ಅವರು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಇವರು ಮುಖ್ಯವಾಗಿ ಕನ್ನಡ ಸಿನೆಮಾದಲ್ಲಿ ಹೆಸರುವಾಸಿ. ಇದರೊಂದಿಗೆ ಹಿಂದಿ, ತೆಲುಗು, ತಮಿಳು, ಮರಾಠಿ ಮತ್ತು ಮಲಯಾಳಂ ಭಷೆಗಳಲ್ಲೂ ನಟಿಸಿದ್ದಾರೆ.ನಾಟಕಗಳು, ಸಮಾಂತರ ಸಿನೆಮಾ ಹಾಗೂ ಟೆಲಿವಿಷನ್ ಧಾರಾವಾಹಿಗಳಲ್ಲೂ ಅದ್ಭುತ ನಟನೆ ನೀಡಿದ್ದಾರೆ.

ಪ್ರಮುಖ ಪ್ರಶಸ್ತಿಗಳು ಪದ್ಮ ಭೂಷಣ ಪ್ರಶಸ್ತಿ (2025).ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2017).ಭಾರತೀಯ ಸಿನೆಮಾದ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.

ಕನ್ನಡಿಗರಿಗೆ ಸಂದ ಗೌರವ:ಭಾರತೀಯ ಚಿತ್ರರಂಗದ ಈ ಉನ್ನತ ಪ್ರಶಸ್ತಿಯನ್ನು ಪಡೆದ ಕನ್ನಡಿಗರು:

  • ಡಾ. ರಾಜ್‌ಕುಮಾರ್ (1995)
  • ವಿ.ಕೆ. ಮೂರ್ತಿ (ಸಿನಿಮಾಟೋಗ್ರಾಫರ್)
  • ಅನಂತ್ ನಾಗ್ (2024ರ ಸಾಲಿಗೆ)

Leave a Reply

Your email address will not be published. Required fields are marked *