Share this... Whatsapp Facebook Pinterest Twitter Linkedin Gmail Printಅಂಗಾಂಶ ಕೃಷಿ ಸಸಿಗಳ ಮಹತ್ವ ಕುರಿತು ಅರಿವು ಕಾರ್ಯಕ್ರಮ ಚನ್ನರಾಯಪಟ್ಟಣ: ಸಸ್ಯದ ಆಯ್ದ ಭಾಗವನ್ನು ಪ್ರಯೋಗಾಲಯದ ನಿಯಂತ್ರಿತ ಪರಿಸ್ಥಿತಿಯಲ್ಲಿ ಬೆಳೆಸಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಸಸಿಗಳನ್ನು ಉತ್ಪಾದಿಸುವ ಆಧುನಿಕ ಸಸ್ಯ ಪ್ರಸರಣ ತಂತ್ರಜ್ಞಾನವನ್ನು ಅಂಗಾಂಶ ಕೃಷಿ ಸಸಿ ಉತ್ಪಾದನೆ ಎನ್ನುತ್ತಾರೆ ಎಂದು ಡಾ. ಸ್ಮಿತಾ ಹೇಳಿದರು. ಊಪಿನಹಳ್ಳಿ ಗ್ರಾಮದಲ್ಲಿ ಕಾರ್ಯಕೆರೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೂಲಕ ಆಯೋಜನೆ ಮಾಡಲಾಗಿದ್ದ, ಅಂಗಾಂಶ ಕೃಷಿ ಸಸಿಗಳ ಕುರಿತು ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಅಂಗಾಂಶ ಕೃಷಿ ಎಂದರೆ ಸಸ್ಯದ ಆಯ್ದ ಭಾಗವನ್ನು ಪ್ರಯೋಗಾಲಯದ ನಿಯಂತ್ರಿತ ಪರಿಸ್ಥಿತಿಯಲ್ಲಿ ಬೆಳೆಸಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಸಸಿಗಳನ್ನು ಉತ್ಪಾದಿಸುವ ಆಧುನಿಕ ಸಸ್ಯ ಪ್ರಸರಣ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನದ ಮೂಲಕ ಬಾಳೆ ಮತ್ತು ಆಲೂಗಡ್ಡೆಯಂತಹ ಬೆಳೆಗಳಲ್ಲಿ ಉತ್ತಮ ಗುಣಮಟ್ಟದ ನೆಡುವ ಸಾಮಗ್ರಿಯನ್ನು ಉತ್ಪಾದಿಸಬಹುದು.ಅಂಗಾಂಶ ಕೃಷಿ ಸಸಿಗಳ ಪ್ರಮುಖ ಪ್ರಯೋಜನಗಳಾದ ಆರೋಗ್ಯಕರ ಮತ್ತು ರೋಗಮುಕ್ತ ನೆಡುವ ಸಾಮಗ್ರಿ, ಏಕರೂಪದ ಬೆಳವಣಿಗೆ, ಉತ್ತಮ ಗುಣಮಟ್ಟ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳ ಉತ್ಪಾದನೆ ಹಾಗೂ ಉತ್ತಮ ಇಳುವರಿಗೆ ಸಹಕಾರ ಇತ್ಯಾದಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ವಿಶೇಷವಾಗಿ ಬಾಳೆ ಬೆಳೆಯಲ್ಲಿ ಅಂಗಾಂಶ ಕೃಷಿ ಸಸಿಗಳ ಬಳಕೆಯಿಂದ ಒಂದೇ ರೀತಿಯ ಬೆಳವಣಿಗೆಯನ್ನು ಹೊಂದಿರುವ ಆರೋಗ್ಯಕರ ಸಸಿಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು. “ಅಂಗಾಂಶ ಕೃಷಿ ಎಂದರೆ ಸಸ್ಯದ ಆಯ್ದ ಭಾಗವನ್ನು ಪ್ರಯೋಗಾಲಯದ ನಿಯಂತ್ರಿತ ಪರಿಸ್ಥಿತಿಯಲ್ಲಿ ಬೆಳೆಸಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಸಸಿಗಳನ್ನು ಉತ್ಪಾದಿಸುವ ಆಧುನಿಕ ಸಸ್ಯ ಪ್ರಸರಣ ತಂತ್ರಜ್ಞಾನ” – ಡಾ. ಸ್ಮಿತಾ, ಸಂಪನ್ಮೂಲ ವ್ಯಕ್ತಿ, ಕೃಷಿ ವಿಶ್ವವಿದ್ಯಾಲಯ ಕಾರೆಕೆರೆ. ಕಾರ್ಯಕ್ರಮಕ್ಕೆ ಮುನ್ನ ಊಪನಹಳ್ಳಿ ಗ್ರಾಮದ ಮಕ್ಕಳು, ನೃತ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ರೈತರಿಗೆ ಅಂಗಾಂಶ ಕೃಷಿ ಬಾಳೆ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ರೈತರು ಈ ಸಸಿಗಳನ್ನು ತಮ್ಮ ಹೊಲಗಳಲ್ಲಿ ನಾಟಿ ಮಾಡಿ, ಆಧುನಿಕ ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಊಪಿನಹಳ್ಳಿ ಗ್ರಾಮದ ಮಕ್ಕಳು, ರೈತರು ಹಾಗೂ RAWE ವಿದ್ಯಾರ್ಥಿಗಳು ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಕೃಷಿ ಮತ್ತು ತೋಟಗಾರಿಕಾ ಇಲಾಕ ಅಧಿಕಾರಿಗಳು ಭಾಗವಹಿಸಿದ್ದರು. Share this... Whatsapp Facebook Pinterest Twitter Linkedin Gmail Print Post navigation ಯಶಸ್ವಿಗೊಂಡ ಊಪನಹಳ್ಳಿ ಪಶು ಆರೋಗ್ಯ ಶಿಬಿರ ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯ ನೀಡುವ ಅಣಬೆ ಕೃಷಿ