Share this... Whatsapp Facebook Pinterest Twitter Linkedin Gmail Printಯಶಸ್ವಿಯಾಗಿ ಜರುಗಿದ ಪಶು ಆರೋಗ್ಯ ತಪಾಸಣಾ ಶಿಬಿರ ಚನ್ನರಾಯಪಟ್ಟಣ: 213 ಜಾನುವಾರುಗಳಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಮೂಲಕ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೈತರ ಗಮನ ಸೆಳೆದಿದ್ದಾರೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಊಪಿನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಪಶು ಆರೋಗ್ಯ ತಪಸನ ಶಿಬಿರದಲ್ಲಿ ಅಂತಿಮ ವರ್ಷದ 34 ಪಶು ವೈದ್ಯ ವಿದ್ಯಾರ್ಥಿಗಳು, ಗ್ರಾಮದ ಸುಮಾರು 51 ರೈತರ 213 ಜಾನುವಾರುಗಳಿಗೆ ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಯನ್ನು ನೀಡಿ ರೈತರಿಗೆ ಪಶುಗಳ ಆಹಾರ ಆರೋಗ್ಯ ನಿರ್ವಹಣೆಯ ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಅವರಿಂದ ಮೆಚ್ಚುಗೆ ಪಡೆದಿದ್ದಾರೆ. ಪಶು ಆರೋಗ್ಯ ಶಿಬಿರದಲ್ಲಿ ಜಾನುವಾರುಗಳಿಗೆ ಸಂಬಂಧಪಟ್ಟ ಗೈನಕಾಲಜಿ, ಮ್ಯಾಗಟ್ ಗಾಯ, ಜಂತುಹುಳು ಬಾಧೆ, ಮಾಸ್ಟೈಟಿಸ್, ಅಬ್ಸೆಸ್, RBS, ಗರ್ಭಧಾರಣೆ, ಮೆಟ್ರೈಟಿಸ್ ಹಾಗೂ ಕಾಲಿನ ಗಾಯ ಮುಂತಾದ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲಾಯಿತು. ಗರ್ಭಧಾರಣೆ ಪತ್ತೆಗಾಗಿ USG (Ultrasonography) ಬಳಸಲಾಯಿತು. ಮ್ಯಾಗಟ್ ಗಾಯ ಮತ್ತು ಜಂತುಹುಳು ಬಾಧೆಗೆ Ivermectin ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ನೀಡಲಾಯಿತು ಹೀಟ್ಗೆ ಸಂಬಂಧಿಸಿದ ಸಮಸ್ಯೆಗಳಿಗೆ Vetadyl–Vit. AD₃E ಇಂಜೆಕ್ಷನ್ನ ಬಳಕೆಯ ಕುರಿತು ತರಬೇತಿ ಪಶುವೈದ್ಯರು ಮಾಹಿತಿ ನೀಡಿದರು. ಮಾಸ್ಟೈಟಿಸ್, ಮೆಟ್ರೈಟಿಸ್ ಹಾಗೂ ಇತರ ಸೋಂಕುಗಳಿಗೆ ವೈದ್ಯರ ಸಲಹೆಯಂತೆ ಸೂಕ್ತ ಔಷಧೋಪಚಾರ ನೀಡಲಾಯಿತು. ಅಬ್ಸೆಸ್ ಇರುವ ಜಾನುವಾರುಗಳಲ್ಲಿ ಕೀವು ಹೊರತೆಗೆದು, ಆಂಟಿಬಯಾಟಿಕ್ ಮತ್ತು ಸ್ಪ್ರೇ ಮೂಲಕ ಚಿಕಿತ್ಸೆ ನೀಡಲಾಯಿತು. ಕಾಲಿನ ಗಾಯಗಳಿಗೆ Neuroxin, Tonophosph… ಹಾಗೂ ಕ್ಯಾಲ್ಸಿಯಂ ಸಿರಪ್ ಮುಂತಾದ ಚಿಕಿತ್ಸೆಯನ್ನು ಹಿರಿಯ ವೈದ್ಯರ ಸಲಹೆಯಂತೆ ತರಬೇತಿ ಪಶು ವೈದ್ಯರು ನೀಡಿದರು. ಶಿಬಿರದ ಮೂಲಕ ರೈತರಿಗೆ ಜಾನುವಾರುಗಳ ಆರೋಗ್ಯ ತಪಾಸಣೆ, ರೋಗಗಳ ಆರಂಭಿಕ ಗುರುತಿಸುವಿಕೆ, ಸೂಕ್ತ ಚಿಕಿತ್ಸೆಯ ಮಹತ್ವ ಹಾಗೂ ನಿಯಮಿತ ಪಶುವೈದ್ಯಕೀಯ ಆರೈಕೆಯ ಕುರಿತು ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮಕ್ಕೆ ನಮ್ಮ ಕೃಷಿ ಮಹಾವಿದ್ಯಾಲಯದ ಗೌರವಾನ್ವಿತ ಡೀನ್ ಬಸವರಾಜುöí⁸ ಸರ್, RAWE ಸಂಯೋಜಕರಾದ ಶಶಿಕಲಾ ಮ್ಯಾಡಂ ಹಾಗೂ ಸಹ ಸಂಯೋಜಕರಾದ ಚಂದನ ಮ್ಯಾಡಂ ಅವರು ಆಗಮಿಸಿ ಶಿಬಿರಕ್ಕೆ ಪ್ರೋತ್ಸಾಹ ನೀಡಿದರು. ಒಟ್ಟಾರೆಯಾಗಿ, ಪಶು ಆರೋಗ್ಯ ತಪಾಸಣಾ ಶಿಬಿರವು ರೈತರಿಗೆ ಹಾಗೂ ಅವರ ಜಾನುವಾರುಗಳಿಗೆ ಅತ್ಯಂತ ಉಪಯುಕ್ತವಾಗಿದ್ದು, ಯಶಸ್ವಿಯಾಗಿ ನಡೆಯಿತು Share this... Whatsapp Facebook Pinterest Twitter Linkedin Gmail Print Post navigation ಕೆಪಿಎಸ್ ಸಿ ಪರೀಕ್ಷಾ ಅಕ್ರಮ: ನ್ಯಾಯ ಕಲ್ಪಿಸಲು ಬದ್ಧ -ಪ್ರಿಯಾಂಕ್ ಖರ್ಗೆ ಉಪಿನಹಳ್ಳಿ ಅಂಗಾಂಶ ಕೃಷಿ ಸಸಿಗಳ ಮಹತ್ವ ಕಾರ್ಯಗಾರ