Share this... Whatsapp Facebook Pinterest Twitter Linkedin Gmail Printನನ್ನ ಬಗ್ಗೆ ಮಾತಾಡೊ ನೈತಿಕತೆ, ಅರ್ಹತೆ ತಂಗಡಗಿಗೆ ಇಲ್ಲ: ಅನ್ಸಾರಿ ಕೊಪ್ಪಳ: ಶಿವರಾಜ ತಂಗಡಗಿಗೆ ಸಚಿವಗಿರಿಯ ಮದ ನೆತ್ತಿಗೇರಿದೆ. 2028ರ ಚುನಾವಣೆಯಲ್ಲಿ ಮತದಾರರು ತಂಗಡಗಿ ಮದ ಇಳಿಸುತ್ತಾರೆ. ನನ್ನ ಬಗ್ಗೆ ಮಾತನಾಡೋ ನೈತಿಕತೆ ಮತ್ತು ಅರ್ಹತೆ ತಂಗಡಗಿಗೆ ಇಲ್ಲ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಿರುಗೇಟು ನೀಡಿದರು. ಕೊಪ್ಪಳ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ತಂಗಡಗಿ, ಹಿಟ್ನಾಳ ಬ್ರದರ್ಸ್ ಹಾಗೂ ರಾಯರಡ್ಡಿನೇ ಕಾರಣ. ಇದಕ್ಕೆ ಸಾಕ್ಷಿ ಸಮಯ ಬಂದಾಗ ನೀಡುತ್ತೇನೆ. ಸಚಿವರಾಗಲು ಅವರು ಸೂಟ್ಕೇಸ್ ಕೊಟ್ಟಿರುವುದಕ್ಕೆ ಸಾಕ್ಷಿ ಕೊಡಲು ಸಾಧ್ಯನಾ? ಎಂದು ಪ್ರಶ್ನಿಸಿದರು. ಶಿವರಾಜ ತಂಗಡಗಿಯವರು ಇದೇ ಕಾಂಗ್ರೆಸ್ ಸರಕಾರದಲ್ಲಿ ಮೊದಲ ಸಲ ಮಂತ್ರಿಯಾಗಿದ್ದಾಗ ಯಲ್ಲಾಲಿಂಗ ಎಂಬ ಯುವಕನನ್ನು ಕೊಲೆ ಮಾಡಿ, ಆ ಕೃತ್ಯವನ್ನು ಬೇರೊಬ್ಬರ ತಲೆಗೆ ಕಟ್ಟಿ, ಅವರನ್ನು ಖುಲಾಸೆ ಮಾಡಿಸಿದ ಪುಣ್ಯಾತ್ಮ ತಂಗಡಗಿ. ಅವರು ಸಣ್ಣ ನೀರಾವರಿ ಸಚಿವರಿದ್ದಾಗ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿ ಇಂದಿಗೂ ಸಣ್ಣ ಪುಟ್ಟ ಅಧಿಕಾರಿಗಳು ಕೋರ್ಟ್ಗೆ ಅಲೆದಾಡುವಂತೆ ಮಾಡಿದ ನಾಯಕ ಇಕ್ಬಾಲ್ ಅನ್ಸಾರಿ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ನಾನು ಕಾಂಗ್ರೆಸ್ನಲ್ಲೇ ಇದ್ದೇನೆ. ಪಕ್ಷದಲ್ಲಿ ಅನ್ಸಾರಿ ಇರುವುದು ತಂಗಡಗಿ, ರಾಯರಡ್ಡಿ ಮತ್ತು ಹಿಟ್ನಾಳ ಬ್ರದರ್ಸ್ಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ಅನ್ಸಾರಿ ಜೆಡಿಎಸ್ ಸೇರುತ್ತಿದ್ದಾರೆ ಎಂದು ವದಂತಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ಗೊತ್ತಿದೆ. ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಇನ್ನೊಬ್ಬರ ತಟ್ಟೆಯ ನೋಣದ ಬಗ್ಗೆ ಮಾತನಾಡುವ ಮೂರ್ಖರು ಅವರು. ಬರುವ ದಿನಗಳಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. Share this... Whatsapp Facebook Pinterest Twitter Linkedin Gmail Print Post navigation 2 ವರ್ಷದ ಬಳಿಕ ಪ್ರಜ್ವಲಿಸಿದ ಪ್ರಜ್ವಲ್ ರೇವಣ್ಣ ಫ್ಲಕ್ಸ್ ವಿಮೆ ಮಾಡಿಸಿದ ಬೆಳೆಗೆ ಶೇ.25 ರಷ್ಟು ತಾತ್ಕಾಲಿಕ ಪರಿಹಾರ