Share this... Whatsapp Facebook Pinterest Twitter Linkedin Gmail Printಸರ್ಕಾರದ ಹಾಗೂ ದಾನಿಗಳು ಕೊಡುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಿ : ಎ. ಮಂಜು ವರದಿ: ಪ್ರದೀಪ್, ಹೊಳೆನರಸೀಪುರ ಹೊಳೆನರಸೀಪುರ : ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಪ್ರತಿಭಾವಂತರಾಗಿ ಹೊರಹೊಮ್ಮಬೇಕು ಎಂದು ಶಾಸಕ ಎ ಮಂಜು ನುಡಿದರು. ತಾಲೂಕಿನ ಹಳ್ಳಿ ಮೈಸೂರು ಹೋಬಳಿ ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ದಾನಿಗಳಿಂದ ಉಚಿತವಾಗಿ ಬೈಸಿಕಲ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಮಕ್ಕಳಿಗೆ ಅವಕಾಶಗಳು ಅಧಿಕವಾಗಿವೆ. ಸೌಲಭ್ಯಗಳು ದೊರೆಯುತ್ತಿವೆ. ಸರ್ಕಾರಗಳಿಂದ ಹಲವು ಸೌಲಭ್ಯಗಳು ಲಭ್ಯವಾಗುತ್ತಿವೆ. ಇವುಗಳ ಸದ್ಬಳಕೆಯೊಂದಿಗೆ ವಿದ್ಯಾವಂತರಾಗಿ ಎಂದು ತಿಳಿಸಿದರು. ಸ್ವಂತ ಹಣದಲ್ಲಿ ದಾನಿಗಳು ಮತ್ತು ಮುಖ್ಯ ಶಿಕ್ಷಕ ಬೊಮ್ಮ ನಾಯ್ಕ ಹಾಗೂ ಸಹ ಶಿಕ್ಷಕ ತೀರ್ಥಪ್ಪ ಸಹಕಾರದಿಂದ 19 ವಿದ್ಯಾರ್ಥಿಗಳು ಬೈಸಿಕಲ್ ಮೂಲಕ ಶಾಲೆಗೆ ಬರಲು ಅನುಕೂಲವಾಗಿದೆ. ಮುಂದೆಯೂ ದಾಖಲಾತಿ ಹೆಚ್ಚುವುದಾಗಿ ಮೆಚ್ಚುಗೆ ಸೂಚಿಸಿದರು. ಶಾಲೆಗೆ ಸುಣ್ಣ ಬಣ್ಣ ರಿಪೇರಿ ತಡೆಗೋಡೆ ಮಾಡುವುದಾಗಿ ತಿಳಿಸಿದರು. ಸೋಮನಹಳ್ಳಿ ಶಾಲೆಯನ್ನು ಕೆಪಿಎಸ್ ಶಾಲೆ ಮಾಡುವುದಾಗಿ ಘೋಷಿಸಿದರು. ಮುಖ್ಯ ಶಿಕ್ಷಕರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೊಮಾಲಿಂಗೇಗೌಡ ಮಾತನಾಡಿ ಶಾಲೆಯು ಕಳೆದ ವರುಷ 100 ಪರ್ಸೆಂಟ್ ರಿಸಲ್ಟ್ ನೀಡಿದ್ದು, ಈ ವರುಷ ಶಾಲಾ ದಾಖಲಾತಿ ಹೆಚ್ಚಿಸುವ ದೃಷ್ಟಿಯಿಂದ 8 ನೆಯ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕರು ಉಚಿತ ಬೈಸಿಕಲ್ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇವತ್ತು ಶಾಸಕರ ಉಪಸ್ಥಿತಿಯಲ್ಲಿ ವಿತರಣೆ ಮಾಡಿದ್ದು ಶ್ಲಾಘನೀಯ ಎಂದರು. ಎಂಎಲ್ಎ ಎ . ಮಂಜು ಮಾತನಾಡಿ ಸ್ವಂತ ಹಣದಲ್ಲಿ ದಾನಿಗಳು ಮತ್ತು ತೀರ್ಥ ರವರ ಸಹಕಾರದಿಂದ 19 ವಿದ್ಯಾರ್ಥಿಗಳು ಬೈಸಿಕಲ್ ಮೂಲಕ ಶಾಲೆಗೆ ಬರಲು ಅನುಕೂಲವಾಗಿದೆ. ಮುಂದೆಯೂ ದಾಖಲಾತಿ ಹೆಚ್ಚುವುದಾಗಿ ಮೆಚ್ಚುಗೆ ಸೂಚಿಸಿದರು. ಶಾಲೆಗೆ ಸುಣ್ಣ ಬಣ್ಣ ರಿಪೇರ್ ತಡೆಗೋಡೆ ಮಾಡುವುದಾಗಿ ತಿಳಿಸಿದರು. ಸೋಮನಹಳ್ಳಿ ಶಾಲೆಯನ್ನು ಕೆಪಿಎಸ್ ಶಾಲೆ ಮಾಡುವುದಾಗಿ ಘೋಷಿಸಿದರು. ಮುಖ್ಯ ಶಿಕ್ಷಕರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿ ಎಂದರು. ಕಾಮಿಡಿ ಕಿಲಾಡಿ ತುಕಾಲಿ ಸಂತೋಷ ಮಾತನಾಡಿ ತಾವು ಮುಂದಿನ ದಿನ ಸರ್ಕಾರಿ ಶಾಲೆ ಸೋಮನಹಳ್ಳಿ ದಾಖಲಾತಿಗೆ ಸಹಾಯ ಮಾಡುವ ಮೂಲಕ ದಾಖಲಾತಿ ಹೆಚ್ಚಿಸಿ ಮುಖ್ಯ ಶಿಕ್ಷಕರ ನಿಸ್ವಾರ್ಥ ಸೇವೆಗೆ ಮತ್ತು ಈ ಮಾದರಿ ಕಾರ್ಯಕ್ಕೆ ತುಂಬಾ ಸಹಕಾರ ನೀಡುವುದಾಗಿ ತಿಳಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಮಧು ಸಾರ್ವಜನಿಕರು ಪೋಷಕರು ಜನಪ್ರತಿನಿಧಿಗಳು ಅಧಿಕಾರಿಗಳು ಗ್ರಾಮಸ್ಥರು ಪ್ರಿನ್ಸಿಪಾಲರು ಉಪನ್ಯಾಸಕರು ಶಾಲಾ ಶಿಕ್ಷಕರು ಸಿಬ್ಬಂಧಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದರು. Share this... Whatsapp Facebook Pinterest Twitter Linkedin Gmail Print Post navigation ಅರ್ಥಪೂರ್ಣ ಸ್ವಾತಂತ್ರ್ಯೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ರಂಗಭೂಮಿಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ-ಗೊರೂರು ಅನಂತರಾಜ