Share this... Whatsapp Facebook Pinterest Twitter Linkedin Gmail Printಮೈಕ್ರೋ ಫೈನಾನ್ಸ್ ಕ್ರಮಕ್ಕೆ ರೈತ ಸಂಘದ ಮುಖಂಡರು ಆಕ್ರೋಶ ಸಾಲ ಕಟ್ಟಿಲ್ಲ ಅಂತ ಮೈಕ್ರೋ ಫೈನಾನ್ಸ್ ನಿಂದ ಮನೆಗೆ ಬೀಗ. ಬೀಗ ಒಡೆದು ಮನೆಯವರ ಒಳಗೆ ಕಳಿಸಿದ ರೈತ ಸಂಘದ ಮುಖಂಡರು. ಹಾಸನ: ಸಾಲ ಕಟ್ಟಿಲ್ಲ ಅಂತ ಮೈಕ್ರೋ ಫೈನಾನ್ಸ್ ಕಂಪನಿಯೊಂದು ಮನೆಗೆ ಬೀಗ ಜಡಿದು, ಕುಟುಂಬ ಸದಸ್ಯರನ್ನು ಮನೆಯಿಂದ ಆಚೆ ಹಾಕಿದ್ದ ಘಟನೆ ಹಾಸನ ತಾಲೂಕಿನ ಉಗನೆ ಕೊಪ್ಪಲು ಗ್ರಾಮದಲ್ಲಿ ನಡೆದಿತ್ತು ಇಕ್ವಿಟಾಸ್ ಮೈಕ್ರೋ ಎಂಬ ಪೈನಾನ್ಸ್ ನಿಂದ 2024ರಲ್ಲಿ ಹಾಸನ ತಾಲೂಕಿನ ಉಗಾನೆ ಕೊಪ್ಪಲು ಗ್ರಾಮದ ರತ್ನಮ್ಮ 12ಲಕ್ಷ ಸಾಲವನ್ನು ಪಡೆದಿದ್ದರು. ಈಗಾಗಲೇ 3 ಲಕ್ಷ ಹಣವನ್ನು ಪಾವತಿ ಮಾಡಿದ್ದು ಉಳಿಕೆ ಹಣ ಮತ್ತು ಬಡ್ಡಿ ಹಣವನ್ನು ಪಾವತಿ ಮಾಡಲು ಸ್ವಲ್ಪ ಕಷ್ಟವಾಗಿತ್ತು. ಸಮಯಾವಕಾಶ ಕೊಡಿ ಎಂದು ಕಂಪನಿಗೆ ಮನವಿ ಮಾಡಿದ್ರು. ಆದರೆ ಕಂಪನಿ ಇದಕ್ಕೆ ಅವಕಾಶ ಕೊಡದೆ, ಬಡ್ಡಿ ಮತ್ತು ಚಕ್ರಬಡ್ಡಿ ಸೇರಿ 18 ಲಕ್ಷ ಕಟ್ಟಬೇಕು ಎಂದು ಕಿರುಕುಳ ನೀಡಿ, ಕಳೆದ 12 ದಿನಗಳ ಹಿಂದೆ ಲಕ್ಷ್ಮಮ್ಮ ಕುಟುಂಬದ ವಿರುದ್ಧ ಕೋರ್ಟ್ ನಿಂದ ಮನೆ ಜಪ್ತಿ ಆದೇಶ ತಂದು, ಮನೆಯ ಸದಸ್ಯರನ್ನ ಹೊರಗೆ ಕಳುಹಿಸಿ ಮನೆಗೆ ಬೀಗ ಜಡಿದು ಬಲವಂತವಾಗಿ ಮನೆಯನ್ನ ವಶಕ್ಕೆ ಪಡೆದಿದ್ದರು. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಕುಟುಂಬಕ್ಕೆ, ಸಾಲ ವಾಪಸ್ ನೀಡಲು ಅನ್ಯಮಾರ್ಗ ಕಾಣದೆ, ಕಂಗಾಲಾಗಿ, ತಮ್ಮ ಜಮೀನಿನ ಸ್ವಲ್ಪ ಜಾಗದಲ್ಲಿ ಷಡ್ ನಿರ್ಮಿಸಿಕೊಂಡು ವಾಸವಾಗಿದ್ದರು. ಇದನ್ನು ಮನಗಂಡ ರೈತ ಸಂಘಟನೆಗಳು, ದೇಶದಲ್ಲಿ ಕೋಟಿ ಕೋಟಿ ಪಾವತಿಸದೆ ಇದ್ದರೂ ಅವರಿಗೆ ಸಾಲ ಮನ್ನಾ ರೂಪದಲ್ಲಿ ರಕ್ಷಣೆ ಮಾಡುತ್ತಿರುವ ಸರ್ಕಾರ, ರೈತರನ್ನ ದಿವಾಳಿ ಮಾಡಿದ್ದರು, ಫೈನಾನ್ಸ್ ಕಂಪನಿಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತ ಸಂಘದ ಮುಖಂಡ ಕಣಗಲ್ ಮೂರ್ತಿ ನೇತೃತ್ವದಲ್ಲಿ, ಮನೆಯ ಬೀಗವನ್ನು ಹೊಡೆದು ಬೀದಿಗೆ ಬಂದಿದ್ದ ರೈತ ಕುಟುಂಬವನ್ನು ಮತ್ತೆ ಮನೆಗೆ ಸೇರಿಸುವ ಮೂಲಕ ಆ ಕುಟುಂಬದ ಬಾಳಿಗೆ ಬೆಳಕಾಗಿದ್ದಾರೆ. ಇನ್ನು ಬಲವಂತವಾಗಿ ಸಮಯವಕಾಶ ನೀಡದೆ ಬೀಗ ಹಾಕಿದ್ದ ಮೈಕ್ರೋ ಫೈನಾನ್ಸ್ ಕ್ರಮಕ್ಕೆ, ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಇಕ್ವಿಟಾಸ್ ಮೈಕ್ರೋ ಫೈನಾನ್ಸ್ ವಿರುದ್ದ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ರೈತರು, ಬಡವರನ್ನ ಮನೆಯಿಂದಾಚೆ ಹಾಕಿದ್ರೆ ನಾವೂ ಸುಮ್ಮನಿರುವುದಿಲ್ಲ. ರೈತ ಈ ದೇಶದ ಬೆನ್ನೆಲುಬು. ಬರಗಾಲದಿಂದ ಈ ವರ್ಷ ತತ್ತರಿಸಿದ್ದಾನೆ. ಮಳೆ ಇಲ್ಲದೆ ಬೆಳೆಯುವ ಇಲ್ಲದೆ ತುತ್ತು ಅನ್ನಕ್ಕೂ ಕಷ್ಟ ಪಡುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಆತನಿಗೆ ಸರ್ಕಾರ ನಿರ್ವಾಗಬೇಕು. ಕೂಡಲೇ ಸಾಲ ಮನ್ನವನ್ನ ಸರ್ಕಾರ ಮಾಡಬೇಕು. ಅದನ್ನು ಬಿಟ್ಟು ಸಂಕಷ್ಟದಲ್ಲಿರುವ ರೈತ ಕುಟುಂಬವನ್ನು ಬೀದಿ ಪಾಲು ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. Share this... Whatsapp Facebook Pinterest Twitter Linkedin Gmail Print Post navigation 34 ವರ್ಷಗಳ ಸಾರ್ಥಕ ಸೇವೆಗೆ ಸಂದ ಗೌರವ; ಎಸಿ ಇಂದಿರಾ ಕೆಪಿಎಸ್ ಸಿ ಪರೀಕ್ಷಾ ಅಕ್ರಮ: ನ್ಯಾಯ ಕಲ್ಪಿಸಲು ಬದ್ಧ -ಪ್ರಿಯಾಂಕ್ ಖರ್ಗೆ