Share this... Whatsapp Facebook Pinterest Twitter Linkedin Gmail Print🎭 ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಕಲಾ ಸಂಘಗಳಿಂದ ನಾಟಕೋತ್ಸವ – 2026 🎭 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಸನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾಸನ ಜಿಲ್ಲಾ ವಿವಿಧ ರಂಗಭೂಮಿ, ಸಾಮಾಜಿಕ ಮತ್ತು ಜಾನಪದ ಕಲಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಗಸ್ಟ್ 10ರಿಂದ 12ರವರೆಗೆ ಹಾಸನದಲ್ಲಿ ಮೂರು ದಿನಗಳ ನಾಟಕೋತ್ಸವ ಆಯೋಜಿಸಲಾಗಿದೆ. ನಾಟಕಗಳ ವಿವರ: 📅 ಆಗಸ್ಟ್ 10 (ಸೋಮವಾರ) | ಸಂಜೆ 6.45 “ಸ್ಮಶಾನ ಕುರುಕ್ಷೇತ್ರ” – ಹಾಸನದ ಸಂಸ್ಕೃತಿ ಟ್ರಸ್ಟ್ ಪ್ರಸ್ತುತಿ (ಕುವೆಂಪು ಅವರ ಅಮರ ಕೃತಿ) 📅 ಆಗಸ್ಟ್ 11 (ಮಂಗಳವಾರ) | ಸಂಜೆ 6.45 “ಘಾಟಿ” ಮೈಸೂರಿನ ನಾಟ್ಯಲೇಖ ರಂಗಸಮೂಹ ಪ್ರಸ್ತುತಿ 📅 ಆಗಸ್ಟ್ 12 (ಬುಧವಾರ) | ಸಂಜೆ 6.45 “ಈದಿ” ಕೊಡವೂರು (ಉಡುಪಿ) ಸಮನಸಾ ತಂಡದ ಪ್ರಸ್ತುತಿ ವಿಶೇಷ ಸೂಚನೆ: ⏰ ನಿಗದಿತ ಸಮಯಕ್ಕೆ ನಾಟಕ ಪ್ರದರ್ಶನ ಆರಂಭವಾಗಲಿದೆ. ಆದ್ದರಿಂದ ರಂಗಾಸಕ್ತರು 15 ನಿಮಿಷಗಳ ಮುಂಚಿತವಾಗಿ ಆಗಮಿಸುವಂತೆ ವಿನಂತಿ. ಪ್ರತಿ ನಾಟಕವು ಸುಮಾರು 1 ರಿಂದ 1.30 ಗಂಟೆಗಳ ಅವಧಿಯದ್ದಾಗಿರುತ್ತದೆ. ಬನ್ನಿ…! ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಆಗಮಿಸಿ. ಉತ್ತಮ ನಾಟಕಗಳ ಸೊಬಗನ್ನು ಆಸ್ವಾದಿಸಿ, ಕನ್ನಡ ರಂಗಭೂಮಿಗೆ ನಿಮ್ಮ ಬೆಂಬಲವನ್ನು ನೀಡಿ. “ನೀವು ಬನ್ನಿ… ನಿಮ್ಮವರನ್ನೂ ಕರೆತನ್ನಿ… ನಾಟಕೋತ್ಸವದ ಸವಿ ಎಲ್ಲರಿಗೂ ಉಣಬಡಿಸಿ!” Share this... Whatsapp Facebook Pinterest Twitter Linkedin Gmail Print Post navigation ಡಿಜಿಟಲ್ ಸೇವೆಗಳ ಬಳಕೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಳ ಮಾಜಿ ಶಾಸಕ ಪ್ರೀತಮ್ ಗೌಡ ವಿರುದ್ಧ ಎಫ್ ಐ ಆರ್ !?