Share this... Whatsapp Facebook Pinterest Twitter Linkedin Gmail Printದೆಹಲಿಯಲ್ಲಿ ಮೃತಪಟ್ಟ ಹಾಸನದ ಎಂಜಿನಿಯರಿಂಗ್ ಪದವೀಧರನ ಮೃತದೇಹವನ್ನು ತವರಿಗೆ ತಲುಪಿಸಲು HDK ನೆರವು ರಘು ಹೊಂಗೆರೆ, ಜೆಡಿಎಸ್ ಮಾಧ್ಯಮ ವಕ್ತಾರ ಹಾಸನ: ರಾಜಕೀಯ, ಆಡಳಿತಾತ್ಮಕ ಕೆಲಸಗಳ ನಡುವೆಯೂ ತವರು ಜಿಲ್ಲೆಯ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾನವೀಯತೆ ಮತ್ತು ತವರು ಪ್ರೀತಿಯನ್ನು ಮೆರೆದಿದ್ದಾರೆ. Video : ಮಾನವೀಯತೆ ಮತ್ತು ತವರು ಪ್ರೀತಿಗೆ ಸಾಕ್ಷಿಯಾದ ಹೆಚ್ಡಿಕೆ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ನಾಯಕರಹಳ್ಳಿ ಗ್ರಾಮದ ಜಯರಾಮ್ ಅವರ ಪುತ್ರ, ಎಂಜಿನಿಯರಿಂಗ್ ಪದವೀಧರ ಜಯಂತ್ ಗೌಡ ಅವರು ದೆಹಲಿಯ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಸಚಿವರ ಗಮನಕ್ಕೆ ಬಂದ ತಕ್ಷಣ ಅವರು ಸ್ಪಂದಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಮೃತ ಯುವಕನ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದ ಕುಮಾರಸ್ವಾಮಿ ಅವರು, ದುಃಖದಲ್ಲಿದ್ದ ಕುಟುಂಬಕ್ಕೆ ನೆರವಾಗಲು ಮುಂದಾಗಿದ್ದಾರೆ. ದೆಹಲಿಯಲ್ಲಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮರಣೋತ್ತರ ಪರೀಕ್ಷೆ ನಡೆಸಿಸಿದ ಬಳಿಕ ಮೃತದೇಹವನ್ನು ದೆಹಲಿಯಿಂದ ಅವರ ಸ್ವಗ್ರಾಮ ನಾಯಕರಹಳ್ಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲು ಸಹಕರಿಸಿದ್ದಾರೆ. ತಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡು ಆಘಾತದಲ್ಲಿದ್ದ ಕುಟುಂಬಕ್ಕೆ ಇಂತಹ ಸಂದರ್ಭದಲ್ಲಿ ನೆರವು ದೊರಕಿರುವುದು ದೊಡ್ಡ ಸಮಾಧಾನ ತಂದಿದೆ. ದೂರದ ದೆಹಲಿಯಲ್ಲಿ ನಡೆದ ಘಟನೆಯಾದರೂ ತಕ್ಷಣ ಗಮನಹರಿಸಿ ಸ್ಪಂದಿಸಿದ ಸಚಿವರ ನಡೆ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಸಚಿವರ ಈ ಮಾನವೀಯ ಕಾರ್ಯವನ್ನು ಜಿಲ್ಲೆಯ ಜನರೂ ಶ್ಲಾಘಿಸಿದ್ದಾರೆ. ಅಧಿಕಾರ, ಜವಾಬ್ದಾರಿಗಳ ನಡುವೆಯೂ ತವರು ಜಿಲ್ಲೆಯ ಜನರೊಂದಿಗೆ ನಂಟು ಉಳಿಸಿಕೊಂಡು, ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸುವುದು ತವರು ಪ್ರೀತಿಯ ಪ್ರತೀಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗುವ ಇಂತಹ ಕಾರ್ಯಗಳು ಸಾರ್ವಜನಿಕ ಜೀವನದಲ್ಲಿ ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರುತ್ತವೆ. ಜಯಂತ್ ಗೌಡ ಅವರ ಕುಟುಂಬಕ್ಕೆ ನೆರವಾಗುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರು ಮಾನವೀಯತೆ ಹಾಗೂ ತವರು ಜಿಲ್ಲೆಯ ಜನರ ಮೇಲಿನ ಕಾಳಜಿಯನ್ನು ಮತ್ತೊಮ್ಮೆ ತೋರಿಸಿದ ಕರುಣಾಮಯಿ. Share this... Whatsapp Facebook Pinterest Twitter Linkedin Gmail Print Post navigation ಪ್ರಜೆಗಳ ಕುಂದುಕೊರತೆ ಪರಿಹಾರಕ್ಕೆ ಪ್ರಜಾಸೇವಾ ಉತ್ತಮ ವೇದಿಕೆ ದೊಡ್ಡಗದ್ದವಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕಳ್ಳತನ