ಭಾರತೀಯ ಸೈನಿಕನೆಂದರೇ ದೇಶ ರಕ್ಷಣೆಗಾಗಿ ಸೇವೆ ಸಲ್ಲಿಸುವ ಹೆಮ್ಮೆಯ ಯೋಧ

ಶ್ರವಣಬೆಳಗೊಳ: ಭಾರತೀಯ ಸೈನಿಕ ಎಂದರೆ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸುವ ಹೆಮ್ಮೆಯ ಯೋಧ. ಭಾರತದ ಗಡಿಗಳನ್ನು ಕಾಯುವ, ನಾಗರಿಕರನ್ನು ಬಾಹ್ಯ ಆಕ್ರಮಣಗಳಿಂದ ರಕ್ಷಿಸುವ ಮತ್ತು ಆಪತ್ತಿನ ಸಮಯದಲ್ಲಿ ಜನರಿಗೆ ನೆರವಾಗುವ ನಿಸ್ವಾರ್ಥ ರಕ್ಷಕರು ಎಂದು ಆಗಸ್ಟಿನ್ ಹೇಳಿದರು.

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಸಹೃದಯಿ ಸಾಹಿತ್ಯ ಬಳಗದ ವತಿಯಿಂದ ಸಾಹಿತ್ಯಸೌಧದಲ್ಲಿ ರಾಜ್ಬಾನ್ ರವರ ಪ್ರಾಯೋಜಕತ್ವದ ಮೂಲಕ ನಡೆದ 52ನೇ ಆಯೋಜಿಸಲಾಗಿದ್ದ ಮಾಸದ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಿಲಿಟರಿಗೆ ಸೇರಿದ ಯಶೋಗಾಥೆಯನ್ನು ವಿವರಿಸಿದರು.

ನನ್ನ ಜೀವನದಲ್ಲಿ ಉತ್ತಮ ಅವಕಾಶ ಹೇಗೆ ಸಿಕ್ಕಿತು ಎಂಬುದನ್ನು ಹೇಳುತ್ತಾ ಕಠಿಣ ಹವಾಮಾನ ಮತ್ತು ಕಠಿಣ ಪರಿಸ್ಥಿತಿಗಳಲ್ಲೂ ದೇಶದ ಗಡಿಯನ್ನು ಹಗಲಿರುಳು ಕಾಯುತ್ತೇವೆ. ಉದಾಹರಣೆಗೆ ಸಿಯಾಚಿನ್‌ನಂತಹ ಮೈನಸ್ ಡಿಗ್ರಿ ಚಳಿಯ ಪ್ರದೇಶ ಅಥವಾ ರಾಜಸ್ಥಾನದ ಸುಡುವ ಮರುಭೂಮಿಯಾಗಿರಲಿ,  ತಮ್ಮ ಸ್ವಂತ ಸುಖ, ಕುಟುಂಬ ಮತ್ತು ಪ್ರಾಣವನ್ನು ಲೆಕ್ಕಿಸದೆ “ದೇಶವೇ ಮೊದಲು” ಎಂಬ ತತ್ವದೊಂದಿಗೆ ಬದುಕುತ್ತೇವೆ. ಪ್ರವಾಹ, ಭೂಕಂಪದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಜನರ ಪ್ರಾಣ ರಕ್ಷಿಸಲು ನಾವು ಸದಾ ಮುಂಚೂಣಿಯಲ್ಲಿರುತ್ತೇವೆ.  ಕಠಿಣ ತರಬೇತಿಯ ಮೂಲಕ ಉನ್ನತ ಮಟ್ಟದ ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ ಮತ್ತು ಅಪ್ರತಿಮ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ದೇಶಸೇವೆಯನ್ನು ಮಾಡುತ್ತೇವೆ ಎಂದರು.

ನಾನು ಕೂಡಾ ಒಬ್ಬ ರೈತಾಪಿ ಕುಟುಂಬದಿಂದ ಬಂದ ವ್ಯಕ್ತಿ. ನಾನು ರೈತನ ಮಗನಾದರೂ ಕೂಡ ನನಗೆ ಆಸಕ್ತಿ ಇದ್ದರಿಂದ ಮಿಲಿಟರಿಗೆ ಹೋದೆ. ಸೈನಿಕರಾಗಿ ಸೇರುವಾಗ ನಮ್ಮ ವಿದ್ಯಾಭ್ಯಾಸವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಯಾವ ಪ್ರದೇಶದಲ್ಲಿ ನಮ್ಮನ್ನು ಕೆಲಸಕ್ಕೆ ಹಾಕುತ್ತಾರೋ ಅಲ್ಲಿಯ ಮಣ್ಣಿನ ಬಣ್ಣದ ಬಟ್ಟೆಗಳನ್ನು ತೊಡಬೇಕಾಗುತ್ತದೆ. ಶತ್ರು ದೇಶಗಳಿಗೆ ನಾವು ಕಾಣದಂತೆ ಸುರಕ್ಷಿತವಾಗಿರಬೇಕು. ಆಹಾರ ಪದ್ದತಿ ಅವರ ವೈಯಕ್ತಿಕ ವಿಚಾರವಾಗಿದೆ.  ನಾನು ದೇಶ ಸೇವೆ ಮಾಡಿದ ಅಷ್ಟು ವರ್ಷಗಳು ನನಗೆ ಖುಷಿಯ ಜೊತೆಗೆ ಹೆಮ್ಮೆ ತಂದಿದೆ ಎಂದರು.

ಇದೇ ಸುಸಂದರ್ಭದಲ್ಲಿ ಸಹೃದಯಿ ಸಾಹಿತ್ಯ ಬಳಗದ ಸದಸ್ಯ  ಪ್ರಶಾಂತ್ ಕುಮಾರ್ ರವರ ಚೊಚ್ಚಲ ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಈ ವೇಳೆ ಪುಸ್ತಕದ ಮುನ್ನುಡಿ ಬರೆದ ಪ್ರೇಮಪ್ರಶಾಂತ್ ಮಾತನಾಡಿ ಪುಸ್ತಕದ ಹಿನ್ನಲೆ ಹೊರಬಂದ ಬಗೆಯನ್ನು ವಿವರವಾಗಿ ತಿಳಿಸಿದರು. ಹೇಮಲತಾ ಮತ್ತು ಗಿರೀಶ ಚುಟುಕು ವಾಚಿಸಿದರೆ, ಕುಮಾರ್, ಜಯಲಕ್ಷ್ಮಿ ರವರು ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಚಾರ್ವಿ, ಯಾಶ್ಮಿತ ಹಾಡು ಹೇಳಿದರು. ಇತಿಹಾಸ ತಜ್ಞರಾದ ವೀರೇಂಧ್ರ ಕುಮಾರ್ , ಜನಿವಾರ ಗ್ರಾಮದ  ಇತಿಹಾಸವನ್ನು  ವಿವರಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾಕರ್ ಮಾತನಾಡಿ, ಶ್ರವಣಬೆಳಗೊಳದಲ್ಲಿ ನಾನು ಸೇವೆ ಸಲ್ಲಿಸಿದ್ದು, ಇಂತಹ ಪ್ರತಿಭಾನ್ವಿತರ ಪರಿಚಯ ನನಗೆ ಇರಲಿಲ್ಲ. ಈ ಕಾರ್ಯಕ್ರಮದಿಂದ ನನಗೆ ಹಲವಾರು ಪ್ರತಿಭಾನ್ವಿತರ ಪರಿಚಯವಾಯ್ತು. ಕಾರ್ಯಕ್ರಮ ತುಂಬಾ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ದೇಶಸೇವೆಯಲ್ಲಿ ಸೇವೆ ಸಲ್ಲಿಸಿದ ಆಗಸ್ಟಿನ್ ನಿತ್ಯದ ಬದುಕು ಶಿಸ್ತುಪಾಲನೆ ಸಮಯಪಾಲನೆ ಇವುಗಳನ್ನು ನಾವು ಹತ್ತಿರದಿಂದ ಕಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಸಹೃದಯಿ ಸಾಹಿತ್ಯ ಬಳಗದ ಕಿರು ಸನ್ಮಾನ ಸ್ವೀಕರಿಸಿದ ಸಾಧಕರಾದ ನಿರ್ಮಲಾ, ಮತ್ತು ಡಾ.ವೃಷಬೇಂದ್ರ ಕುಮಾರ್   ಮಾತನಾಡಿದರು. ಇದನ್ನು ಓದಿರಿ : ಶಿಕ್ಷಕ ಸಮೂಹದ ಚಿರಧ್ರುವತಾರೆ : ಡಾ. ಎಸ್ ರಾಧಾಕೃಷನ್

ಪ್ರಜ್ಞಾ ಪ್ರಣತಿ ಮ್ಯಾಜಿಕ್ ಮೊಬೈಲ್ ನಂಬರ್ ಕಂಡುಹಿಡಿದು ಅದರ ರಹಸ್ಯವನ್ನು ತಿಳಿಸಿದರು. ಕನಕ ಪ್ರಶಸ್ತಿಗೆ ಭಾಜನರಾದ ಶ್ರೀಯುತ ಶಂಕರಾಚಾರ್ಯರಿಗೆ ವೇದಿಕೆಯಿಂದ ಕಿರು ಸನ್ಮಾನ ಮಾಡಲಾಯ್ತು. ಇದೇ ಸಮಯದಲ್ಲಿ ಕುಮಾರಣ್ಣ , ಅಪೋಲಿಯ ಮೇಡಂ, ಸಂಜಯ್ ಶೆಟ್ಟಿ , ನಿವೃತ್ತ ಶಿಕ್ಷಕರಾದ ರಾಜಬಾನ್ ಸರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಣಮ್ಯ ಜೈನ್ ನಿರುಪಿಸಿದರು. ಜಯಂತಿ ಸ್ವಾಗತಿಸಿದರು. ಶೋಭಾ ಪ್ರಾರ್ಥನೆ ಮಾಡಿದರು. ಆಶಾ ಪ್ರಾಸ್ತಾವಿಕ ನುಡಿಯನ್ನಾಡಿದರು. ಪ್ರಶಾಂತ್ ಕುಮಾರ್ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *