ಸಭಾಪತಿ ಸ್ಥಾನ ಖಾಲಿ ಇರುವ ಬಗ್ಗೆ ಅಧಿಸೂಚನೆ ಹೊರಡಿಸಿದ ವಿಧಾನ ಪರಿಷತ್ ಕಾರ್ಯದರ್ಶಿ .

ಬೆಂಗಳೂರು: ಸಭಾಪತಿ ಹುದ್ದೆಗೆ ಬಸವರಾಜ್ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ. ವಿಧಾನಪರಿಷತ್ ನಲ್ಲಿ ಸರ್ಕಾರಕ್ಕೆ ಬಹುಮತ ಇರುವ ಹಿನ್ನೆಲೆಯಲ್ಲಿ ಬಸವರಾಜ್ ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಮೊದಲು ಅವರು, ಆ.14ರಂದು ರಾಜೀನಾಮೆ ಕೊಡಲು ತೀರ್ಮಾನಿಸಿದ್ದರು. ಆದರೆ ಇಂದು ಮತ್ತೆ ಸಿಎಂ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲಿನ ಸಭಾಪತಿ ಚೇಂಬರ್ಗೆ ಆಗಮಿಸಿ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರು ಇಂದೇ ರಾಜೀನಾಮೆ‌ ಸಲ್ಲಿಕೆ ಮಾಡಿದ್ದಾರೆ.

ನಿಯಮದ ಪ್ರಕಾರ ಯಾವಾಗಲೂ ರಾಜೀನಾಮೆ ಕೊಡುವಾಗ ಉಪಸಭಾಪತಿಗೆ ರಾಜೀನಾಮೆಗೆ ಸಲ್ಲಿಸಬೇಕು‌. ಉಪಸಭಾಪತಿ ಸ್ಥಾನ ಖಾಲಿ ಇದ್ದರೂ ಉಪಸಭಾಪತಿಗೆ ಸಭಾಪತಿ ರಾಜೀನಾಮೆ ಪತ್ರ ಸಲ್ಲಿಸಬೇಕು. ಅದನ್ನು ಕಾರ್ಯದರ್ಶಿ ರಾಜ್ಯಪಾಲರಿಗೆ ರವಾನಿಸಿ ಅಂಗೀಕಾರ ಪಡೆದುಕೊಳ್ಳುತ್ತಾರೆ.

ರಾಜೀನಾಮೆ ಕೊಡು ಅಂದರು ಕೊಟ್ಟೆ: 

ರಾಜೀನಾಮೆ ಬಳಿಕ ಹೇಳಿಕೆ ನೀಡಿರುವ ಬಸವರಾಜ ಹೊರಟ್ಟಿ, ಇಂದೇ ರಾಜೀನಾಮೆ‌ ಕೊಡಿ ಅಂದರು.‌ ಅದಕ್ಕಾಗಿ ಇಂದೇ ಕೊಟ್ಟೆ ಎಂದು ಹೇಳಿದ್ದಾರೆ. ಈ ಮೊದಲು ಆ.14ರಂದು ರಾಜೀನಾಮೆ ಕೊಡಬೇಕಿತ್ತು. ಇಂದೇ ಕೊಟ್ಟೆ.‌ ಆಗಲೇ ರಾಜೀನಾಮೆ ಕೊಡಲು ತೀರ್ಮಾನಿಸಿದ್ದೆ. ಸ್ವಲ್ಪ ಬೇಸರ ಆಗಿದೆ. ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ಪಡೆದಿರುವುದು ಸ್ವಲ್ಪ ಬೇಸರ ಆಗಿದೆ. ಇಲ್ಲಿ ಸರ್ಕಾರದ ಒತ್ತಡ ಅಂತ ಬರಲ್ಲ. ರಾಜೀನಾಮೆ ಕೊಡಬೇಕು ಎಂದು ಹೇಳಿದರು. ಅದಕ್ಕೆ ಕೊಟ್ಟೆ ಎಂದು ರಾಜೀನಾಮೆ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

ಕಾಂಗ್ರೆಸ್ ಗೆ ವಿಧಾನ ಪರಿಷತ್ತಿನಲ್ಲಿ ಬಹುಮತ:

ಇತ್ತೀಚಿಗೆ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ನಂತರ ಪರಿಷತ್‌ನಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದೆ. ಅಂತೆಯೇ ತನ್ನ ಸದಸ್ಯನನ್ನು ಸಭಾಪತಿಯನ್ನಾಗಿ ನೇಮಿಸಲು ನಿರ್ಧರಿಸಿದ್ದು, ಈಗಾಗಲೇ ಆ ಸ್ಥಾನಕ್ಕೆ ಹಿರಿಯ ಸದಸ್ಯ ಸಲೀಂ ಅಹ್ಮದ್ ಅವರ ಹೆಸರನ್ನು ಅಂತಿಮಗೊಳಿಸಿದೆ.

 

Leave a Reply

Your email address will not be published. Required fields are marked *