Share this... Whatsapp Facebook Pinterest Twitter Linkedin Gmail Printಅರಸೀಕೆರೆ : ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಜಾಹೀರಾತು ಈ ಸಂದರ್ಭದಲ್ಲಿ ಅರಸೀಕೆರೆ ಜೈನ ಸಮಾಜದ ವತಿಯಿಂದ ಮಕ್ಕಳಿಗೆ ಟೀ ಶರ್ಟ್ ಹಾಗೂ ಸಿಹಿ ಹಂಚುವುದರ ಮೂಲಕ ಅರ್ಥಪೂರ್ಣವಾದ ದಿನಾಚರಣೆಯನ್ನು ಆಚರಿಸಲಾಯಿತು. ಜೈನ ಸಮಾಜದ ಉಪಾಧ್ಯಕ್ಷ ಚೇತನ್ ಜೈನ್ ಮಾತನಾಡಿ ಅಹಿಂಸೆ ಮತ್ತು ಶಾಂತಿಯ ತತ್ವದಿಂದ ನಮಗೆ ಸ್ವತಂತ್ರ ಸಿಕ್ಕಿದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಹಿಂಸೆ ಹಾಗೂ ಶಾಂತಿಯ ತತ್ವವನ್ನು ಅಳವಡಿಸಿಕೊಂಡರೆ ಏನನ್ನಾದರೂ ಸಾಧಿಸಬಹುದು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಒಳ್ಳೆಯ ಸಂಸ್ಕಾರಗಳನ್ನು ಪಡೆಯಬಹುದೆಂದು ಶುಭ ಹಾರೈಸಿದರು. ಜಾಹೀರಾತು ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಿತೇಂದ್ರ ಜೈನ್,ಚೇತನ್ ಬೋಹರ,SDMC ಅಧ್ಯಕ್ಷರಾದ ಚಂದ್ರಶೇಖರ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಸರೋಜಮ್ಮ, ಮುಖ್ಯೋಪಾಧ್ಯಾಯ ರಮೇಶ್,ನಾಗರಾಜಪ್ಪ ಹೇಮಂತ್, ಶಿವರಾಜ್, ತುಳಸಿ ಮಾಲ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು Share this... Whatsapp Facebook Pinterest Twitter Linkedin Gmail Print Post navigation 80ನೇ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ಪ್ರಾಣ ತ್ಯಾಗ: ಲಕ್ಷ್ಮಣ್