Share this... Whatsapp Facebook Pinterest Twitter Linkedin Gmail Printದೆಹಲಿಯಿಂದ ಕುಗ್ರಾಮದ ಹಳ್ಳಿಯ ಕಲಾಸಕ್ತರನ್ನ ಗುರುತಿಸಿ ರಂಗ ಶಿಕ್ಷಣ ನೀಡಿದ ಜಂಬೆ ಹೌದು ಅವರೊಂದಿಕೆ ಕಳೆದ ದಿನಗಳು ಕ್ಷಣಗಳ ವಿಷಯಗಳು ಬಹಳಷ್ಟು ಇದೆ ಆದರೆ ಕೆಲವೊಂದನ್ನ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ನಾನು ಕೆಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿ ಇನ್ನೂ ಕಲಿಯ ಬೇಕು ಎಂಬ ಕಾಲವದು. ಮತ್ತಷ್ಟು ಕಲಿಯ ಬೇಕು ಎಂಬ ದೃಷ್ಟಿಯಿಂದ ನಾನು ಮೈಸೂರು ರಂಗಾಯಣಕ್ಕೆ ಮೂರು ತಿಂಗಳ ತರಬೇತಿಗೆ ಅರ್ಜಿ ಹಾಕಿದೆ. ಆಗ ಇದೇ ಜಂಬೆ ಸರ್ ರಂಗಾಯಣದ ನಿರ್ದೇಶಕರಾಗಿದ್ದರು. ಶಿಬಿರ ನಿರ್ದೇಶಕರಾಗಿ ನಮ್ಮ ದೂರ್ವಾಸ ಮುನಿಗಳಾದ ರಘುನಂದನ್ ಅವರು. ಮೊದ ಮೊದಲಿಗೆ ನಮಗೆ ಎಲ್ಲವು ಸಹಜವಾಗಿಯೇ ಇತ್ತು ನಂತ ಆರಂಭವಾಗಿದ್ದೆ ಬೇರೆ, ರಘುನಂದನ್ ಅವರ ಕಲಿಕೆಯ ಟಾರ್ಚ್ ತಡೆಯಲು ಸಾಧ್ಯವಾಗದ ನಮ್ಮ ತಂಡದ ಕೆಲವರು ಬಿಟ್ಟು ಹೋಗಿದ್ದು ಉಂಟು. ಕೊನೆಗೆ ಉಳಿದವರು ನಾವು ಜಂಬೆ ಸರ್ ಹತ್ತಿರ ಹೋಗಿ ರಘುನಂದನ್ ಅವರ ಟಾರ್ಚ್ ತಡಿಯೊದಿಕ್ಕೆ ಆಗ್ತಾ ಇಲ್ಲ ನಾವು ಬಿಟ್ಟು ಹೋಗ್ತಿವಿ ಎಂದಾಗ ಎಲ್ಲರನ್ನು ಕೂರಿಸಿಕೊಂಡು ನಗು ಮುಖದಲ್ಲೆ ನೋಡ್ರೋ ನೀವು ಈಗ ಚೆನ್ನಾಗಿ ಕಲಿತ್ರೆ ತಾನೆ ಮುಂದೆ ನೀವು ರಂಗಭೂಮಿ ಕೆಲಸ ಮಾಡೊಕ್ಕೆ ಆಗೋದು ಅವರಿಗೆ ಸ್ವಲ್ಪ ಮುಗೋಪ ಜಾಸ್ತಿ ಸ್ವಲ್ಪ ಸಹಿಸಿಕೊಳ್ಳಿ. ಆ ಮೇಲೆ ನಿಮಗೆ ಗೊತ್ತಾಗುತ್ತೆ ಅವರ ಬೆಲೆ ಏನು ಅಂತ. ಜಾಸ್ತಿ ತಲೆ ಕೆಡಿಸಿಕೊಳ್ಳ ಬೇಡಿ ಬನ್ನಿ ಈಗ ನನಗೆ ನಿಮ್ ಜೊತೆಗೆ ಕಾಫಿ ಕುಡಿಬೇಕು ಅನ್ನಿಸುತ್ತೆ ಎಂದು ಎಲ್ಲರನ್ನು ಕರೆದುಕೊಂಡು ರಂಗಾಯಣದ ಕ್ಯಾಂಟಿನ್ಗೆ ಹೊರಟರು. ನಮಗೆ ಸ್ವಲ್ಪ ಜಂಬೆ ಸರ್ ಮೇಲೂ ಕೋಪ ಬಂತು. ಆ ಮನಷ್ಯನ್ ಟಾರ್ಜ ತಡಿಯದಿಕ್ಕೆ ಆಗಲ್ಲ ಸರಿ ಮಾಡಿ ಅಂತ ಬಂದ್ರೆ ಈ ಮನಷ್ಯ ನೋಡಿದ್ರೆ ನಮ್ ಜೊತೆ ಕಾಫಿ ಕುಡಿ ಬೇಕಂತೆ. ಇವರೇಲ್ಲಾ ಒಂದೆ, ಅಂತ ಒಳಗೊಳಗೇ ಗೊಣಗಿಕೊಂಡೆ ಕ್ಯಾಂಟಿನ್ ಒಳಗೆ ಹೋದೆವು. ನಮ್ಮ ಈ ಗೊಣಗು ಅವರಿಗೇನು ಅರ್ಥವಾಗದೇ ಇರಲಿಲ್ಲ. ಆದರೂ ಏನು ತಿಳಿಯದವರಂತೆ. ಒಬ್ಬೊಬ್ಬರನ್ನೆ ಮಾತನಾಡಿಸುತ್ತ ನೀವು ಕಲಿತು ನಿಮ್ಮೂರಿನಲ್ಲಿ ರಂಗ ಚಟುವಟಿಕೆ ಮಾಡಿ ನಮ್ಮನ್ನ ಕರಿಬೇಕು, ಊಟ ಕೊಡುಸ್ತಿದ್ರು ಪರವಾಗಿಲ್ಲ ಕಾಫಿನಾದ್ರು ಕೊಡಿಸಿ ಎಂದು ನಗು ನಗುತ್ತಲೇ ಹೇಳುತ್ತ ನಮ್ಮನ್ನ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ರು. ನೀವು ಕಾಫಿ ಕುಡುದ್ರೆ ಸಾಕ ಹೋಗಿ ನಿಮ್ ಗುರುಗಳನ್ನು ಕರ್ಕೊಂಡು ಬನ್ನಿ ಅಂದ್ರು. ತಕ್ಷಣ ನಮ್ಮ ಜೀವವೇ ಹೋದಂತಾಯಿತು. ನಾವೆಲ್ಲ ಎಷ್ಟೇ ಬೇಡ ಸರ್ ಎಂದರೂ ಕೇಳಲೇ ಇಲ್ಲ. ಕರಸೀಯೇ ಬಿಟ್ಟರು. ನಾವು ಹೇಳಿದ್ದನ್ನ ಇವರು ಹೇಳಿ ಎಲ್ಲಿ ರಂಪ ಮಾಡ್ತರೋ ಎಂಬ ಭಯ ಕಾಡುತಿತ್ತು. ಆದರೆ ಜಂಬೆ ಸರ್ ಕಾಫಿ ಕುಡಿಯುತ್ತಲೇ ನೋಡಿ ರಂಘುನಂದ್ ಮಕ್ಕಳಿಗೆ ಅಷ್ಟೊಂದು ತೊಂದ್ರೆ ಕೊಡುಬೇಡಿ ಸ್ವಲ್ಪ ನಿಧಾನವಾಗಿ ಕಲಿತರೆ ಎಂದು ಅದೇ ನಗುಮುಖದಲ್ಲಿ ಹೇಳಿದರು. ತಕ್ಷಣ ರಘುನಂದನ್ ಗುರಾಯಿಸುತ್ತಲೇ ಏನು ಕಂಪ್ಲೀಟಾ ಎಂದಾಗ ತಕ್ಷಣ ಜಂಬೆ ಹಾಗೇನು ಇಲ್ವೋ ನಾನು ನೀನ್ ಕ್ಲಾಸ್ ಮಾಡುವಾಗ ನೋಡ್ದೆ ಸ್ವಲ್ಪ ನಿಧಾನ ಎಂದು ಕಣ್ ಸನ್ನೆ ಮಾಡಿದರು. ಅವತ್ತಿನ ದಿನಕ್ಕೆ ಆ ಕಣ್ ಸನ್ನೆ ನಮಗೆ ಅರ್ಥವಾಗಲಿಲ್ಲ. ಸದ್ಯಕ್ಕೆ ಇವರಿಬ್ಬರ ಕಾಟ ಮುಗಿದರೆ ಸಾಕು ಇವರ ಸಹವಾಸವೇ ಬೇಡ ನಮ್ಮ ಊರಿಗೆ ಹೋಗಿ ವ್ಯವಸಾಯ ಮಾಡಿಕೊಂಡೋ ಅಥವಾ ಬೇರೆ ಕೆಲಸ ಮಾಡಿಕೊಂಡು ಇದ್ದರಾಯಿತು ಎಂಬ ನಿರ್ಧಾರವನ್ನು ಮಾಡಿಕೊಂಡೆ. ಜೊತೆಗೆ ಎಲ್ಲಾ ಗೆಳೆಯರು ಮಾತನಾಡಿಕೊಂಡಿದ್ದು ಉಂಟು. ನನಗೆ ಇನ್ನೂ ಚೆನ್ನಾಗಿ ನೆನಪಿದೆ ಪ್ರತಿ ದಿನ ಯೋಗ ಕೋಲಾಟದಿಂದ ದಿನ ಚರಿ ಆರಂಭವಾಗುತಿತ್ತು. ಆ ದಿನ ಬೆಳಗ್ಗೆ ಆರು ಗಂಟೆಗೆ ಯೋಗದಿಂದ ಆರಂಭವಾಗಿತ್ತು ನಾವು ನಾಲ್ಕೈದು ಜನರು ತಡವಾಗಿ ಎದ್ದಿದ್ದರಿಂದ ಸ್ನಾನ ಮಾಡಿದೆ ಯೋಗ ಕ್ಲಾಸಿಗೆ ಬಂದೆವು. ತಿಂಡಿ ಸಮಯಕ್ಕೆ ಸ್ನಾನಕ್ಕೆ ಹೋದೆವು. ರಘುನಂದನ್ ಸರ್ ಎಲ್ಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ತಿಂಡಿಗೆ ಹೋಗಿದ್ದರು. ನಾವು ನಾಲ್ಕೈದು ಜನ ಲೇಟಾದರೆ ಆ ಹುಚ್ಚು ಮೇಷ್ಟ್ರುತವಾ ಬೈಯಿಸಿಕೊಳ್ಳದಿಕ್ಕೆ ಆಗಲ್ಲ ಇನ್ನೇನು ಸ್ವಲ್ಪ ದಿನ ನಮಗೆ ದೊಡ್ಡ ಕಂಟಕ ತಪ್ಪುತ್ತೆ ಎಂದು ತರಾ ತುರಿಯಲ್ಲಿ ಸ್ನಾನ ಮುಗಿಸಿ ಕ್ಯಾಂಟೀನ್ಗೆ ಓಡಿ ಬಂದೆವು ಅಷ್ಟು ಹೊತ್ತಿಗೆ ರಘುನಂದನ್ ಮತ್ತು ಉಳಿದವರು ತಿಂಡಿ ಮುಗಿಸಿ ಹೋಗಿದ್ದರು. ನಾವು ತಿಂಡಿಗೆ ಕೂತಾಗ ದೋಸೆಗೆ ಚಟ್ನಿ ಕಾಲಿಯಾಗಿತ್ತು ತಕ್ಷಣ ಭಟ್ಟರು ಸ್ವಲ್ಪ ತಡಿರಿ ಚಟ್ನಿ ಕಾಲಿಯಾಗಿದೆ ಮಾಡಿಕೊಡ್ತಿನಿ ಎಂದರು. ಆ ಭಟ್ಟರಿಗೂ ಈ ರಘುನಂದನ್ ಏನು ಅಂತ ಗೊತ್ತಿತ್ತು ಅಯ್ಯೋ ಭಟ್ರೆ ಲೇಟಾದ್ರೆ ನಮ್ ಕಥೆ ಮುಗಿತು ಬೇಗ ಕೊಡಿ ಎಂದು ಅವರು ಚಟ್ನಿ ಮಾಡಿ ನಾವು ದೊಸೆ ತಿಂದು ಮುಗಿಸುವ ಹೊತ್ತಿಗೆ ಹತ್ತು ನಿಮಿಷ ತಡವಾಯಿತು. ತಕ್ಷಣ ಎದ್ನೊ ಬಿದ್ನೊ ಎಂದು ತರಗತಿಗೆ ಓಡಿ ಬಂದೆವು. ನಮ್ಮ ನಾಲ್ಕು ಜನರನ್ನ ಹೊರಗೆ ನಿಲ್ಲಿಸಿ ಗುರಾಯಿಸುತ್ತಲೆ ಯಾಕೆ ಲೇಟು ಎಂದು ಹಲ್ಲು ಕಡಿದರು ತಕ್ಷಣ ಹೆದರಿದ ನಮ್ಮ ಪಕ್ಕದಲ್ಲಿ ಇದ್ದ ರೇವಣ್ಣ ತಿಂಡಿ ಬೇಗ ಕೊಡ್ಲಿಲ್ಲ ಸರ್ ಅದಕ್ಕೆ ತಡವಾಯಿತು ಅಂದೇ ಬಿಟ್ಟ. ರಘುನಂದನ್ ಪಿತ್ತ ನತ್ತಿಗೇರಿತು. ಪಾಠ ನಿಲ್ಲಿಸಿ ನಮಗೆ ಹಿಗ್ಗಾ ಮುಗ್ಗ ಬೈಯುವದರ ಜೊತೆಗೆ ಎಲ್ಲರನ್ನು ಕರೆದುಕೊಂಡು ರಂಗಾಯಣ ಕ್ಯಾಂಟೀನ್ ಹತ್ತಿರ ಬಂದು ಭಟ್ಟರಿಗೂ ಪೂಜೆ ಮಾಡಿಯೇ ಬಿಟ್ಟರು. ಸಮಯಕ್ಕೆ ಸರಿಯಾಗಿ ತಿಂಡಿಕೊಡದಿದ್ದ ಮೇಲೆ ನೀನು ಬಾಗಿಲು ಮುಚ್ಚಿಕೊಂಡು ಹೋಗು ಎಂದರು. ತಕ್ಷಣ ಭಟನ ತಾಳ್ಮೆ ಕಟ್ಟೆ ಹೊಡೆಯಿತು. ಏನ್ ಸರ್ ನನು ಬೇಕು ಅಂತ ಮಾಡ್ಲಿಲ್ಲ ಚಟ್ನಿ ಕಾಲಿಯಾಗಿತ್ತು. ಅದಕ್ಕೆ ಮಾಡಿಕೊಡದಿಕ್ಕೆ ಹತ್ತು ನಿಮಿಷ ತಡವಾಯಿತು ಅದಕ್ಕೆ ಇಷ್ಟೊಂದು ರೇಗ್ತಿರಾ ಎಂದ. ತಕ್ಷಣ ರಘುನಂದನ್ ಹಿಂದು ಮುಂದು ಯೋಚಿಸಿದ ರಂಗಾಯಣದ ಮುಂದೆ ನಮ್ಮನ್ನು ಪ್ರತಿಭಟನೆಗೆ ಕೂರಿಸಿಯೇ ಬಿಟ್ಟರು. ನಮ್ಮ ದುರದೃಷ್ಟಕ್ಕೆ ಆ ದಿನ ಜಂಬೆ ಸರ್ ಇರಲಿಲ್ಲ ಅದರ ಜೊತೆಗೆ ಒಬ್ಬ ಪತ್ರಕರ್ತ ದಾರಿ ಹೊಕನಂತೆ ನಗುತ್ತ ಬಂದು ಏನು ಸಮಸ್ಯೆ ಎಂದ ಒಬ್ಬ ಶಿಬಿರಾರ್ಥಿ ತಿಂಡಿ ಸಮಸ್ಯೆ ಎಂದ ಅಷ್ಟೇ. ಕೆಲವು ರಂಗಾಯಣ ಕಲಾವಿದರು ಮತ್ತು ಆಡಳಿತ ಸಿಬ್ಬಂದಿ ಬಂದು ರಘುನಂದನ್ ಅವರನ್ನ ಸಮಾಧಾನ ಮಾಡಿ ಒಳಗೆ ಕರೆದುಕೊಂಡು ಹೋದರು. ಸದ್ಯಕ್ಕೆ ಎಲ್ಲವೂ ಮುಗಿಯಿತು ಅಂದುಕೊಂಡೆವು. ದಿನಪತ್ರಿಕೆಯಲ್ಲಿ ರಂಗಾಯಣದ ಬಗ್ಗೆ ಕೆಟ್ಟ ಸುದ್ದಿ ಬಂದಿತು. ಬೆಳಗ್ಗೆ ಜಂಬೆ ಸರ್ ಮುಖದಲ್ಲಿ ನುಗು ಇದ್ದರೂ ಕಣ್ಣಿನಲ್ಲಿ ಕೋಪ ಇತ್ತು. ನಿಮಗೆ ಏನೇ ಸಮಸ್ಯೆ ಇದ್ದರೆ ನಮಗೆ ಹೇಳ ಬೇಕು ನೀವು ಯಾಕೆ ಹೊರಗಡೆ ಹೋದ್ರಿ ಎಂದು ನಮಗೆ ತರಾಟೆಗೆ ತೆಗೆದುಕೊಂಡರು. ನಾನು ನಿಮಗೆ ಬೇಕಾದರೆ ಬೇರೆ ವ್ಯವಸ್ಥೆ ಮಾಡುತ್ತಿದ್ದೆ ನಿಮಗೆ ಯಾರು ಹೇಳಿದ್ದು ಹೊರಗಡೆ ಪ್ರತಿಭಟನೆ ಮಾಡಿ ಅಂತ ನಮ್ಮ ಮೇಲೆ ರೇಗಿದರು. ನಮ್ಮ ಸ್ಥಿತಿ ಹಿಕ್ಕಳಕ್ಕೆ ಸಿಕ್ಕಿಕೊಂಡ ಅಡಿಕೆ ಕಾಯಿಯಂತಾಯಿತು. ರಘುನಂದನ್ ಈಗ ಏನಾಯಿತು ಎಂದಾಗ ಜಂಬೆ ಸರ್ ತುಂಬಾ ಗಂಭೀರವಾಗಿ ಎಲ್ಲಾ ಪತ್ರಿಕೆಯಲ್ಲಿ ರಂಗಾಯಣದಲ್ಲಿ ಶಿಬಿರಾರ್ಥಿಗಳಿಗೆ ಸರಿಯಾಗಿ ತಿಂಡೆ ವ್ಯವಸ್ಥೆ ಮಾಡದೆ ಶಿಬಿರಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ ಎಂದು ಪತ್ರಿಕೆಯಲ್ಲಿ ಬಂದಿದೆ ನಾವು ಏನು ಮಾಡಬೇಕು ರಂಗಾಯಣದ ಗೌರವ ಏನಾಗಬೇಕು ಎಂದು ನಮಗೆ ತರಾಟೆಗೆ ತೆಗೆದುಕೊಂಡರು. ರಘುನಂದನ್ ಇಲ್ಲ ಇದು ಸುಳ್ಳು ಸುದ್ದಿ ನಾವು ಆ ಭಟ್ಟರ ವರ್ತನೆಗೆ ಹಾಗೆ ಮಾಡಿದ್ದು ಅಷ್ಟೇ ಎಂದರು. ಆ ದಿನ ಜಂಬೆ ಸರ್ ನಮ್ಮನ್ನು ಕೂರಿಸಿ ಕೊಂಡು ಕೇಳಿದರು ನಡೆದ ವಿಷಯ ಹೇಳಿದವು. ನಂತರ ಅವರು ಹೇಳಿದ ಮಾತು ಇನ್ನೂ ಚೆನ್ನಾಗಿ ನೆನಪಿದೆ. ನಿಮ್ಮ ಕಲಿಕೆಗೆ ಏನಾದರೂ ಕೊರತೆ ಇದ್ದರೆ ಹೇಳಿ ನಾನು ಎಷ್ಟೇ ಕಷ್ಟವಾದರೂ ಪರವಾಗಿಲ್ಲ ನಾನು ವ್ಯವಸ್ಥೆ ಮಾಡುತ್ತೇನೆ ನೀವು ನಿಮ್ಮ ನಿಮ್ಮ ಊರಿನಲ್ಲಿ ಒಂದೊಂದು ತಂಡ ಕಟ್ಟಿ ರಂಗ ಚಟುವಟಿಕೆ ಮಾಡಬೇಕು. ಅಷ್ಟೇ ಅಲ್ಲ ನೀವು ಒಂದೊಂದು ರಂಗ ಮಂದಿರ ಕಟ್ಟಿ ಯಾರನ್ನೂ ಅವಲಂಬಿಸಿದೆ ನಿರಂತರವಾಗಿ ರಂಗ ಚಟುವಟಿಕೆ ಮಾಡಬೇಕು ಅದು ನನ್ನ ಆಸೆ. ಅದಕ್ಕೆ ನಿಮಗೆ ಕಠಿಣ ತಾಲೀಮು, ಶಿಬಿರದ ಆಯೋಜನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದ್ದರೆ ನನ್ನ ಬಳಿ ಹೇಳಿ ಎಂದು ಆ ದಿನದಂದ ಪ್ರತಿ ದಿನ ನಮ್ಮೊಂದಿಗೆ ಊಟ ತಿಂಡಿ ಮತ್ತು ಪ್ರತಿ ತರಗತಿಯಲ್ಲಿ ಬಂದು ಕೂರುತಿದ್ದರು. ಪತ್ರಿಕೆಯ ಸುದ್ದಿ ತಿಳಿದು ಬಹಳಷ್ಟು ಅಧಿಕಾರಿಗಳು ಬಂದರು. ಅದನ್ನೆಲ್ಲ ಜಂಬೆ ಸರ್ ನಿಭಾಯಿಸಿದರು. ನಾವು ಕೇಳಿದಾಗ ಅವರು ನಗುತ್ತಲೆ ಏನು ಆಗಿಲ್ಲ ಬಿಡ್ರೋ ನೀವು ಕಲಿಕೆಯ ಕಡೆ ಗಮನ ಕೊಡಿ ಎಂದರು. ಎಷ್ಟೋ ಭಾರಿ ಬೆಳಗ್ಗೆ ಬಂದು ಹೇಳಿಸುವುದು, ಆರೋಗ್ಯ ಕೆಟ್ಟರೆ ಅವರನ್ನು ಆಸ್ಪತ್ರೆಯ ಜೊತೆಗೆ ಆರೈಕೆಯನ್ನು ಮಾಡುತ್ತಿದ್ದರು. ಸಂಜೆ ಬಂದು ಎಲ್ಲಾ ತರಗತಿಗಳು ಹೇಗೆ ನಡದೆವು ನಿಮಗೆ ಎಷ್ಟು ಅರ್ಥವಾಯಿತು, ಮತ್ತೆ ಅರ್ಥವಾಗದನ್ನ ವರಂಗದಲ್ಲಿ, ಭೂಮಿ ಗೀತದಲ್ಲಿ ಕೂರಿಸಿಕೊಂಡು ನಮಗೆ ಅರ್ಥವಾಗುವಂತೆ ಕಲಿಸುತ್ತಿದ್ದರು. ಆಗಲು ರಂಗಾಯಣದಲ್ಲಿ ಬಹಳಷ್ಟು ಹಣ ಕಾಸಿನ ಸಮಸ್ಯಗಳು ಇರುತ್ತಿದ್ದವು ಅದರೆ ಜಂಬೆ ಸರ್ ಅದನ್ನು ಯಾವುದನ್ನೂ ನಮ್ಮ ಕಡೆಗೆ ಬರದಂತೆ, ಕಲಿಕೆಗೂ ಏನೂ ಕೊರತೆಯಾಗದಂತೆ ನೋಡಿಕೊಂಡರು. ಕಲಿಕಾತ್ಮಕವಾಗಿಯೂ, ಆಡಳಿತಾತ್ಮಕವಾಗಿಯೂ ಜಂಬೆ ಸರ್ ಬೆಸ್ಟ್ ಟೀಚರ್. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಚಾಪ್ಟರ್ಗೆ ಇನ್ನಷ್ಟು ಕಲಿಕೆಗೆ ಹೋದೆ ಅಲ್ಲಿಯೂ ಜಂಬೆ ಸರ್ ಡೈರೆಕ್ಟರ್. ನನಗೆ ಚೆನ್ನಾಗಿ ನೆನಪಿದೆ. ನನಗೆ ಇಂಟರ್ ಇವೂ ಮಾಡಿದ್ದು ಬಿ. ಜಯಶ್ರೀ ಮತ್ತು ಚಂದ್ರಶೇಖರ ಕಂಬಾರ್. ಅವರು ನನ್ನ ಅಭಿನಯ ಮತ್ತು ರಂಗ ಚಟುವಟಿಕೆ ಎಲ್ಲವನ್ನೂ ಮೆಚ್ಚಿಕೊಂಡರು. ಆದರೆ ಒಂದು ವಿಷಯಕ್ಕೆ ಮಾತ್ರ ಒಪ್ಪಲಿಲ್ಲ. ನಾನು ಆಗ ತಾನೆ ಮದುವೆಯಾಗಿ ಕೇವಲ ಎರಡು ತಿಂಗಳಾಗಿತ್ತು. ಮದುವೆ ಯಾಗಿದ್ದೀರಿ ಇಲ್ಲಿ ಒಂದು ದಿನವೂ ರಜೆ ಕೊಡುವುದಿಲ್ಲ ಹೇಗಿ ಇರ್ತಿರಿ ಅದು ನಿಮ್ಮಿಂದ ಸಾಧ್ಯವಿಲ್ಲ ನೀವು ಬೇಡ ಎಂದರು. ತಕ್ಷಣ ಜಂಬೆ ಪ್ರವೇಶಿಸಿ ನೋಡಿ ಉಮೇಶ್ ತೆಂಕನಹಳ್ಳಿ ನೀವು ಮದುವೆಯಾಗಿ ಎರಡು ತಿಂಗಳಾಗಿದೆ ನಾನೊಂತು ಒಂದು ದಿನ ರಜೆ ಕೊಡಲ್ಲ ಇರ್ತಿರಾ ? ಅದು ನಿಮ್ಮಿಂದ ಸಾಧ್ಯನಾ ಎಂದಾಗ, ನಾನು ಖಂಡಿತ ಇರ್ತಿನಿ ಸರ್ ನಾನು ಒಂದು ದಿನವೂ ರಜೆ ಕೇಳಲ್ಲ ಎಂದೆ ಕೊನೆಯ ಜಂಬೆ ಸರ್ ಒಪ್ಪಿಗೆ ಮೇರೆಗೆ ನನ್ನನ್ನು ಆಯ್ಕೆ ಮಾಡಿದರು. ನಾನೂ ಕೂಡ ಅವರನ್ನ ಯಾವತ್ತೂ ರಜೆ ಕೇಳಲಿಲ್ಲ. ನನ್ನ ಕಲಿಕೆ ಮುಗಿಸಿ ಹೊರಟಾಗ ನಿನ್ನ ಕಲಿಕೆ ನೋಡಿ ತುಂಬಾ ಖುಷಿಯಾಗುತ್ತೆ ಕಣಯ್ಯ ನಿನಗೆ ರಂಗಭೂಮಿ ಬಗ್ಗೆ ತುಂಬಾ ಆಸಕ್ತಿ ಇದೆ. ಹೀಗೆಯೇ ಮುಂದುವರಿಸು. ನಿಮ್ಮ ಊರಿಗೆ ನಾವೆಲ್ಲ ಬರ್ತಿವಿ ಎಲ್ಲರಿಗೂ ನಿಮ್ಮ ತೋಟದ ಎಳನೀರು ಕುಡಿಸು ಎಂದರು. ಅದರಂತೆ ನಮ್ಮ ಊರಿಗೆ ಎಲ್ಲಾ ಶಿಬಿರಾರ್ಥಿಗಳನ್ನು ಕರೆದುಕೊಂಡು ಬಂದು ಎಳೆನೀರು ಕುಡಿದು ಹಿಂದಿರುಗಿದರು. ನನ್ನಂತಹ ಕುಗ್ ಗ್ರಾಮದವರನ್ನು ಗುರುತಿಸಿ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದವರು ಜಂಬೆ. ರಂಗಭೂಮಿ ಬಹಳಷ್ಟು ಗುರುಗಳನ್ನು ನೋಡಿದ್ದೇನೆ ತಮ್ಮ ತೆವಲಿನ ಸಿದ್ದಾಂತಕ್ಕೆ ಅಥವಾ ಅವರ ಅವಕಾಶಕ್ಕೆ ಜೊತು ಬಿದ್ದು ಅವರ ಸಿದ್ದಾಂತವನ್ನು ಒಪ್ಪುವ ಮೆಚ್ಚುವ ಶಿಷ್ಯರು ಮಾತ್ರ ಹತ್ತಿ ಇಟ್ಟುಕೊಂಡು ಉಳಿದವರನ್ನ ದೂರ ಇಡುವ ಗುರುಗಳನ್ನು ನೋಡಿದ್ದೇನೆ. ಆದರೆ ಜಂಬೆ ಸರ್ ಯಾವತ್ತೂ ನಮ್ಮ ಮೇಲೆ ಅವರ ಸಿದ್ದಾಂತಗಳನ್ನಾ ಹೇರಲಿಲ್ಲ ಅವರು ಹೇಳುತ್ತಿದದ್ದು ಒಂದು ಶಿಸ್ತು ಬದ್ಧ ಕಲಿಕೆ ಆಳವಾದ ಅಧ್ಯಯನ ಮತ್ತು ಹಳ್ಳಿ ಹಳ್ಳಿಗಳಲ್ಲಿ ನಮ್ಮ ರಂಗ ಚಟುವಟಿಕೆ ನಡೆಯಬೇಕು ಆ ನಿಟ್ಟಿನಲ್ಲಿ ನೀವು ಕೆಲಸ ಮಾಡಿ ಎಂದು ಅದರಂತೆ ನಾನು ನಮ್ಮ ಊರಿನಲ್ಲಿ ರಂಗ ಚಟುವಟಿಕೆ ಆರಂಭ ಮಾಡಿದೆ ಬಹಳಷ್ಟು ಕಾರ್ಯಕ್ರಮಕ್ಕೆ ಗುರುಗಳನ್ನು ಕರೆದುಕೊಂಡು ಬಂದಿದ್ದು ಉಂಟು. ಬಹಳ ಮುಖ್ಯವಾಗಿ ಶಿವಮೊಗ್ಗದಿಂದ ಮೈಸೂರು ಹೋಗುವಾಗ ಚನ್ನರಾಯಪಟ್ಟಣಕ್ಕೆ ಬಂದಾಗ ನನ್ನನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು. ನಮ್ಮ ರಂಗ ಲೋಕ ಭೇಟಿ ನೀಡಿ ತುಂಬಾ ಖುಷಿ ಪಟ್ಟು ನನಗೆ ಆಶೀರ್ವಾದ ಮಾಡಿ ಹೋಗಿದ್ದರು. ಒಬ್ಬ ಗುರು ಉತ್ಸಾಹಿ ಮತ್ತು ಆಸಕ್ತಿ ಶಿಷ್ಯನ ಬೆನ್ನಿಗೆ ನಿಂತರೆ ಶಿಷ್ಯನಲ್ಲಾಗುವಾ ಬದಲಾವಣೆಗಳೇನು ಎಂದು ಅನುಭವಿಸಿದವನು ನಾನು. ಅದಕ್ಕೆ ಅವರು ನನ್ನ ಅಚ್ಚು ಮೆಚ್ಚಿನ ಗುರುಗಳು. ಹೇಳಲು ಇಂತಹ ಬಹಳಷ್ಟು ಘಟನೆಗಳು ಇವೆ ಮತ್ತೊಮ್ಮೆ ಹಂಚಿಕೊಳ್ಳುವೆ. ತುಂಬಾ ನೆನಪಾಗುತ್ತಿದ್ದೀರಾ ಗುರುಗಳೆ ಜೊತೆಗೆ ನೀವು ನಮ್ಮ ಜೊತೆಗೆ ಇರುತ್ತೀರಾ. ಉಮೇಶ್ ತೆಂಕನಹಳ್ಳಿ, ಚನ್ನರಾಯಪಟ್ಟಣ. Share this... Whatsapp Facebook Pinterest Twitter Linkedin Gmail Print Post navigation ಕನ್ನಡದ ಮೇರು ನಟನಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ