ಚಿನ್ನದ ಸರ ದೋಚಲು ಬಂದವನಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ.

ಆರೋಪಿ ಗಗನ್ ಗೆ ಸಾರ್ವಜನಿಕರಿಂದ ತಳಿತ.

ಚನ್ನರಾಯಪಟ್ಟಣ: ಕುತ್ತಿಗೆಗೆ ಹಾಕಿದ್ದ ಚಿನ್ನದ ಸರವನ್ನು ಕಸಿಯಲು ಹೋಗಿ ಸಾರ್ವಜನಿಕರಿಂದ ಗೂಸಾ ತಿಂದ ಪ್ರಕರಣ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಗಗನ್ (31) ಚಿನ್ನ ಕದಿಯಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆರೋಪಿ.

ಏನಿದು ಪ್ರಕರಣ:


ಪಟ್ಟಣದ ಬಿ.ಎಮ್ ರಸ್ತೆಯಲ್ಲಿರುವ ಕಿಂಗ್ಸ್ ಕಂಫರ್ಟ್ ಎಂಬ ಅತಿಥಿ ಗೃಹ ಒಂದಕ್ಕೆ ಭೇಟಿ ಕೊಟ್ಟ ಇಬ್ಬರು ಯುವಕರು ರೂಮ್ ಕೇಳುವ ನೆಪದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ನಡುವೆ ಗೂಸ ತಿಂದ ಆರೋಪಿ ಗಗನ್ ಏಕಾಏಕಿ ಮಾಲೀಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿ ಅದನ್ನ ಎಗರಿಸಲು ಪ್ರಯತ್ನ ಪಟ್ಟಿದ್ದಾನೆ. ಬಳಿಕ ಮಾಲೀಕ ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ ಆರೋಪಿ ಗಗನ್, ಲಾಡ್ಜ್ ಮಾಲೀಕ ರವಿಗೆ ಹಲ್ಲೆ ನಡೆಸಿದ್ದಾನೆ.

ಏನೋ ಗಲಾಟೆ ನಡೆಯುತ್ತಿದೆ ಎಂದು ರೂಮಿನಲ್ಲಿದ್ದ ಗ್ರಾಹಕ ರವಿ ಗಲಾಟೆ ನಡೆಯುತ್ತಿದ್ದನ್ನು ಕಂಡು ಹೊರಗೆ ಬಂದಾಗ ಮತ್ತೊಬ್ಬ ಆರೋಪಿ ಅಭಿ ಅಲಿಯಾಸ್ ಲೋಕೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನು ಪರಾರಿಯಾಗಲು ಯತ್ನಿಸಿದಾಗ, ಸಿನಿಮಾ ರೀತಿಯಲ್ಲಿ ಅಲ್ಲಿ ನೆರೆದಿದ್ದ ಸ್ಥಳೀಯರು ಹಿಂಬಾಲಿಸಿಕೊಂಡು ಆತನನ್ನ ಹಿಡಿದಿದ್ದಾರೆ.

ಚಿನ್ನದ ಸರವನ್ನು ದೋಚಲು ಬಂದ ಹಿನ್ನೆಲೆ, ಆತ ನನ್ನ ಪ್ರಶ್ನೆ ಮಾಡಿದಾಗ ಉದ್ಧಟತನದ ಮಾತನಾಡಿದ್ದಾನೆ. ಹೀಗಾಗಿ ಖಾಸಗಿ ಲಾಡ್ಜ್ ಮಾಲಿಕ ರವಿ ಮತ್ತು ಸ್ಥಳೀಯರು ಇಗ್ಗಾ ಮುಗ್ಗ ಗೂಸ ಕೊಟ್ಟಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಆತನನ್ನು ಒಪ್ಪಿಸಿದ್ದಾರೆ.

ಸ್ಥಳಕ್ಕೆ ಬಂದಾಗ ಪೊಲೀಸರು ವಿಚಾರಣೆ ನಡೆಸಿ ಆತನನ್ನ ಪೊಲೀಸ್ ಠಾಣೆಗೆ ಕರೆದಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಇನ್ನು ಈ ಸಂಬಂಧ ರವಿ ಎಂಬವರು ದೂರ ನೀಡಿದ್ದು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು

Leave a Reply

Your email address will not be published. Required fields are marked *