Share this... Whatsapp Facebook Pinterest Twitter Linkedin Gmail Printಕಂಡ ಕಂಡವರ ಮೇಲೆ ಅಟ್ಯಾಕ್, ವಾಹನಗಳ ಮೇಲೂ ದಾಳಿ ಜೀವಭಯದಲ್ಲಿ ಗ್ರಾಮಸ್ಥರು! ಒಂಟಿ ಕಾಡಾನೆಯ ಪುಂಡಾಟಕ್ಕೆ ಕಿತ್ತಾವರ ಗ್ರಾಮ ತಲ್ಲಣ ಕಾರನ್ನು ಕೋರೆಯಿಂದ ಎತ್ತಿ ತಳ್ಳಿದ ಕಾಡಾನೆ ಕಾರಿನೊಳಗಿದ್ದ ಕುಟುಂಬ ಪಾರು ವರದಿ: ರಂಜಿತ್ ಅರೇಹಳ್ಳಿ, ಬೇಲೂರು ಹಾಸನ (ಅರೇಹಳ್ಳಿ): ಹಗಲು ಕಾಫಿ ತೋಟಗಳಲ್ಲಿ ವಿಶ್ರಾಂತಿ… ರಾತ್ರಿ ವೇಳೆ ಗ್ರಾಮಗಳತ್ತ ಹೆಜ್ಜೆ… ಕಂಡ ಕಂಡವರ ಮೇಲೆ ದಾಳಿಗೆ ಯತ್ನ… ವಾಹನ ಹಿಂಭಾಗ ಸಂಪೂರ್ಣ ಜಖಂ. ಇದು ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತಾವರ ಗ್ರಾಮದ ಸುತ್ತಮುತ್ತ ಒಂಟಿ ಕಾಡಾನೆಯ ಆಟಾಟೋಪಕ್ಕೆ ಇಲ್ಲಿನ ನಿವಾಸಿಗಳು ಅಕ್ಷರಶಃ ಬೆಚ್ಚಿಬಿದ್ದಿರುವ ಸ್ಥಿತಿ. ಕೆ.ಪಿ.ಕಾಲರ್-2 ಒಂಟಿಯಾಗಿ ಓಡಾಟ: https://aksharamitra.com/wp-content/uploads/2026/08/VID-20260809-WA0011-1.mp4 ಯಾವುದೇ ಕಾಡಾನೆ ಗುಂಪಿಗೆ ಸೇರದೆ ಒಂಟಿಯಾಗಿ ಓಡಾಡುತ್ತಿರುವ ಈ ಕಾಡಾನೆಯನ್ನು ಕೆ.ಪಿ.ಕಾಲರ್-2 ಎಂದು ಗುರುತಿಸಲಾಗಿದೆ. ಹಲವು ದಿನಗಳ ಹಿಂದೆ ಈ ಗಂಡಾನೆಯನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಇದೀಗ ರೇಡಿಯೋ ಕಾಲರ್ ಇಲ್ಲದಿರುವುದರಿಂದ ಕಾಡಾನೆ ಕಣ್ಣಿಗೆ ಬಿದ್ದಾಗ ಮಾತ್ರ ಅದರ ಲೊಕೇಶನ್ ಹಂಚಿಕೊಳ್ಳಲು ಸಾಧ್ಯವಾಗುತ್ತಿದೆ. ಕಿತ್ತಾವರ ಗುಡ್ಡ ಹಾಗೂ ಕಿತ್ತಾವರ ಕಾಫಿ ಎಸ್ಟೇಟ್ ಪ್ರದೇಶದಲ್ಲಿ ಹಗಲು ವೇಳೆ ವಿಶ್ರಾಂತಿ ಪಡೆಯುತ್ತಾ, ರಾತ್ರಿ ಆಗುತ್ತಿದ್ದಂತೆ ಕಾಫಿ ತೋಟಗಳ ಮೂಲಕ ಗ್ರಾಮಗಳತ್ತ ನುಗ್ಗಿ ಪುಂಡಾಟ ಮೆರೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ದಾಳಿಗೊಳಗಾದ ಐಷಾರಾಮಿ ಕಾರು ಶೆಡ್ಗೆ ನಿಲ್ಲಿಸುತ್ತಿದ್ದ ಕಾರಿನ ಮೇಲೆ ದಾಳಿ: ಅನುಘಟ್ಟ ಪಂಚಾಯಿತಿ ವ್ಯಾಪ್ತಿಯ ದೊಲಮನೆ ಗ್ರಾಮದ ಕಾಫಿ ಬೆಳೆಗಾರ ಮೊಹಮ್ಮದ್ ಝಾಯಿದ್ ಕುಟುಂಬ ಬೆಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ ತಮ್ಮ ಸ್ವಗ್ರಾಮಕ್ಕೆ ಮರಳಿತ್ತು. https://aksharamitra.com/wp-content/uploads/2026/08/VID-20260809-WA0013.mp4 ಆ.2ರಂದು ತಡರಾತ್ರಿ ಕಾರನ್ನು ಶೆಡ್ ಒಳಗೆ ನಿಲ್ಲಿಸಿ ಇಳಿಯಬೇಕೆನ್ನುವಷ್ಟರಲ್ಲಿ ಮನೆಯ ಬಳಿ ಅಡಗಿ ನಿಂತಿದ್ದ ಕಾಡಾನೆ ಏಕಾಏಕಿ ಕಾರಿನ ಹಿಂಭಾಗಕ್ಕೆ ದಾಳಿ ಮಾಡಿದೆ. ಕೋರೆಯಿಂದ ಚುಚ್ಚಿ ಕಾರನ್ನು ಎತ್ತಿ ಎಸೆಯಲು ಪ್ರಯತ್ನಿಸಿದೆ. https://aksharamitra.com/wp-content/uploads/2026/08/VID-20260809-WA0011.mp4 ಇದರಿಂದ ಕಾರಿನಲ್ಲಿದ್ದ ತಂದೆ, ತಾಯಿ, ಅಕ್ಕ ಹಾಗೂ ಮಕ್ಕಳು ಭಯಭೀತರಾಗಿ ಕಾರಿನೊಳಗೇ ಜೋರಾಗಿ ಕಿರುಚಾಡಿದ್ದಾರೆ. ಅದೃಷ್ಟವಶಾತ್ ಎರಡನೇ ಬಾರಿ ದಾಳಿ ಮಾಡದೆ ಕಾಡಾನೆ ತೋಟದೊಳಗೆ ತೆರಳಿದ ಬಳಿಕ ಕುಟುಂಬದ ಸದಸ್ಯರು ಎಚ್ಚರಿಕೆಯಿಂದ ಮನೆಯೊಳಗೆ ಪ್ರವೇಶಿಸಿದ್ದಾರೆ. https://aksharamitra.com/wp-content/uploads/2026/08/VID-20260809-WA0016.mp4 ಧರ್ಮರಾಜು ಸಾವಿಗೆ ಕಾರಣವಾದ ಕಾಡಾನೆಯೇ? ಜು.29ರಂದು ಕಣಗುಪ್ಪೆ ಗ್ರಾಮದ ರೈತ ಧರ್ಮರಾಜು ಅವರನ್ನು ಬಲಿ ಪಡೆದ ಕಾಡಾನೆಯೇ ಇದೀಗ ಕಿತ್ತಾವರ ಭಾಗದಲ್ಲಿ ಓಡಾಡುತ್ತಿರುವ ಒಂಟಿ ಕಾಡಾನೆಯಾಗಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. https://aksharamitra.com/wp-content/uploads/2026/08/VID-20260809-WA0009.mp4 ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯ ಹೆಜ್ಜೆ ಗುರುತು, ಚಲನ-ವಲನ ಹಾಗೂ ಇತರೆ ಮಾಹಿತಿಯನ್ನು ಪರಿಶೀಲಿಸಿದ್ದಾರೆ. ಈಗಾಗಲೇ ಮಾನವ ಜೀವ ಬಲಿಯಾಗಿರುವ ಪ್ರದೇಶದಲ್ಲಿ ಮತ್ತೊಮ್ಮೆ ಅಪಾಯಕಾರಿ ಒಂಟಿ ಕಾಡಾನೆಯ ಓಡಾಟ ಹೆಚ್ಚಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಡಾನೆಯನ್ನು ಸೆರೆ ಹಿಡಿಯುವಂತೆ ಬಿಗಿಪಟ್ಟು: ಸಂಜೆಯಾದ ಬಳಿಕ ಮನೆಯಿಂದ ಹೊರಬರಲು ಭಯದ ವಾತಾವರಣ ಸೃಷ್ಟಿಯಾಗಿದೆ. ಕಿತ್ತಾವರದ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕರ ಮೇಲೆಯೂ ದಾಳಿಗೆ ಯತ್ನಿಸಿರುವ ಕಾಡಾನೆ, ಕಂಡ ಕಂಡವರ ಮೇಲೆಯೇ ಎರಗಲು ಯತ್ನಿಸುತ್ತಿರುವ ನರಹಂತಕ ಕಾಡಾನೆಯಾಗಿದೆ. https://aksharamitra.com/wp-content/uploads/2026/08/VID-20260809-WA0015.mp4 ಹೀಗಾಗಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದು, ಕಾಡಾನೆಯನ್ನು ಶೀಘ್ರವಾಗಿ ಕಾರ್ಯಾಚರಣೆ ಮೂಲಕ ಸೆರೆಹಿಡಿದು ಸ್ಥಳಾಂತರ ಮಾಡಬೇಕು. ಗುಂಪಿನಿಂದ ಬೇರ್ಪಟ್ಟಿರುವ ಎಲ್ಲ ಒಂಟಿ ಕಾಡಾನೆಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ತಕ್ಷಣ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ. https://aksharamitra.com/wp-content/uploads/2026/08/VID-20260809-WA0014.mp4 ಇನ್ನು ದೂರವಾಣಿ ಸಂಪರ್ಕದ ಮೂಲಕ ಅಕ್ಷರಮಿತ್ರ ಪ್ರತಿನಿಧಿಯೊಂದಿಗೆ ಮಾತನಾಡಿದ, ಅರಣ್ಯ ಇಲಾಖೆಯ ಆರ್ ಎಫ್ ಒ, ಕಿತ್ತಾವರದ ಭಾಗದಲ್ಲಿ ಓಡಾಡುತ್ತಿರುವ ಕಾಡಾನೆ ಸದ್ಯ ಮಸ್ತಿಯಲ್ಲಿದೆ. ಈ ವಿಚಾರವನ್ನು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರವಾಗಿ ಕೆ.ಪಿ.ಕಾಲರ್-2ಕ್ಕೆ ರೇಡಿಯೋ ಕಾಲರ್ ಅಳವಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಯತೀಶ್ ಬಿ.ಜಿ., ಆರ್ಎಫ್ಒ, ಬೇಲೂರು Share this... Whatsapp Facebook Pinterest Twitter Linkedin Gmail Print Post navigation ಮೂರು ದಿನ ನೈಸ್ ರಸ್ತೆಯಲ್ಲಿ ಪಾದಯಾತ್ರೆ ಘನತ್ಯಾಜ್ಯ ನಿರ್ವಹಣೆಗೆ ಸಹಕರಿಸಿ: ಆಯುಕ್ತ ಕೃಷ್ಣಮೂರ್ತಿ