Share this... Whatsapp Facebook Pinterest Twitter Linkedin Gmail Printಮೋಟೋ ಹೌಸ್ ಶೋರೂಮ್ ನಲ್ಲಿ ಯುವಕರ ಮನಸೂರೆ ಗೊಳ್ಳುತ್ತಿರುವ BRIXTON ಬೈಕ್ ಹಾಸನ: ನಗರದಲ್ಲಿ ಪ್ರಾರಂಭವಾದ ಮೋಟೋ ಹೌಸ್ ನೂತನ ಬೈಕ್ ಶೋರೂಮ್ ನ್ನ ಹಾಸನ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉದ್ಘಾಟನೆ ಮಾಡಿದರು. ಹಾಸನ ನಗರದ ರಿಂಗ್ ರೋಡ್ ರಸ್ತೆಯಲ್ಲಿ ಮೋಟೋ ಹೌಸ್ ಎಂಬ ನೂತನ ಮಳಿಗೆಯನ್ನು ಟೇಪ್ ಕತ್ತರಿಸಿ ಬಳಿಕ ಕಂಪನಿಯ ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ಅನಾವರಣ ಮಾಡಿದರು. ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಧಿಕಾರಿ ಕೃಷ್ಣಮೂರ್ತಿ, ಆಸ್ಟ್ರೇಲಿಯ ಮತ್ತು ಇಟಲಿಯ ಅತ್ಯುನ್ನತ ಮಾದರಿಯ ಬೈಕಿಗಾ ಭಾರತದಲ್ಲಿ ಲಭ್ಯವಿದ್ದು ಹಾಸನ ಜಿಲ್ಲೆಯಲ್ಲಿ ಮೊದಲ ಶೋರೂಮ್ ಇದಾಗಿದ್ದು ವಾಹನಗಳು ತುಂಬಾ ಆಕರ್ಷಣೀಯವಾಗಿದೆ ಯುವಕರ ಮನಸೂರೆಗೊಳ್ಳುವ ದ್ವಿ ಚಕ್ರವಾಹನ ಇದಾಗಿದೆ ಎಂದರು ಇನ್ನು ಶೋರೂಮ್ ಮಾಲಿಕ ಲೋಹಿತ್ ಮಾತನಾಡಿ ಯುವಜನತೆಯ ನೆಚ್ಚಿನ ದ್ವಿ ಚಕ್ರವಾಹನ ಇದಾಗಿದ್ದು, ಇದನ್ನು ನಾವು ಕಳೆದ ಒಂದುವರೆ ವರ್ಷಗಳಿಂದ ಹಾಸನದಲ್ಲಿ ಕೆಲ ಯುವಕರುಗಳ ಅಭಿಪ್ರಾಯವನ್ನು ಸಂಗ್ರಹಿಸಿ ನಂತರ ಈ ನೂತನ ಶೋರೂಮ್ ಪ್ರಾರಂಭಿಸಿದ್ದೇವೆ. ನಮ್ಮಲ್ಲಿ ವಿದ್ಯುತ್ ಚಾಲಿತ ಹಾಗೂ ಮೋಟಾರ್ ಸೈಕಲ್ ಕೂಡ ಲಭ್ಯವಿದ್ದು ಒಂದು ಲಕ್ಷದಿಂದ 10 ಲಕ್ಷದವರೆಗೆ ವಿವಿಧ ಮಾದರಿಯ ಪ್ರೀಮಿಯಂ ವೆಹಿಕಲ್ ಗಳು ಲಭ್ಯವಿದೆ ಎಂದರು. ಇನ್ನು ಕಂಪನಿಯ ನಿರ್ದೇಶಕರು ಮಾತನಾಡಿ ಭಾರತದಲ್ಲಿ ಈಗ ಇದು ಮಹಾರಾಷ್ಟ್ರದಲ್ಲಿ ತನ್ನ ಉತ್ಪಾದನಾ ಕಂಪನಿಯನ್ನ ಪ್ರಾರಂಭ ಮಾಡಿದ್ದು, ಈಗ ಭಾರತದ ಯುವಕರುಗಳ ಮನಸ್ಸನ್ನು ಗೆದ್ದಿದೆ ಹಾಸನದಲ್ಲಿ ಮೊದಲ ಶೋರೂಮ್ ಇದಾಗಿದ್ದು ವಿವಿಧ ಮಾದರಿಯ ಬೈಕುಗಳು ಲಭ್ಯವಿದ್ದು, ವಿದ್ಯುತ್ ಚಾಲಿತ ಬೈಕು ಕೇವಲ ರೂ.40 ಕರ್ಚಿಗೆ 150 ಕಿಲೋ ಮೀಟರ್ ದೂರ ಪ್ರಯಾಣಿಸುವ ವಾಹನವನ್ನು ಬಿಡುಗಡೆಗೊಳಿಸಿದ್ದು ಇದು ಗ್ರಾಹಕರಿಗೆಅಚ್ಚುಮೆಚ್ಚಿನ ವಾಹನಗಳಲ್ಲಿ ಒಂದಾಗಲಿದೆ ಎಂದರು. ಅಕ್ಷರ ಮಿತ್ರ ನ್ಯೂಸ್ ಹಾಸನ, Share this... Whatsapp Facebook Pinterest Twitter Linkedin Gmail Print Post navigation ಘನತ್ಯಾಜ್ಯ ನಿರ್ವಹಣೆಗೆ ಸಹಕರಿಸಿ: ಆಯುಕ್ತ ಕೃಷ್ಣಮೂರ್ತಿ ಕರಾಟೆ ಸ್ಪರ್ಧೆ ಸಿದ್ದಾರ್ಥ್ ಎಂ ಚಕ್ರವರ್ತಿ ಗೆ ದ್ವಿತೀಯ ಸ್ಥಾನ