Share this... Whatsapp Facebook Pinterest Twitter Linkedin Gmail Printಅರಕಲಗೂಡಿನಲ್ಲಿ ಶಂಕಿತ ಉಗ್ರನ ಬಂಧನ : ಬೆಚ್ಚಿಬಿದ್ದ ಹಾಸನ ಜನತೆ ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಕೂಲಿ ಕಾರ್ಮಿಕರ ಜೊತೆ ಅಡಗಿ ಕುಳಿತಿದ್ದ, ಶಂಕಿತ ಉಗ್ರನೊಬ್ಬನನ್ನ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಮತ್ತು ಹಾಸನದಲ್ಲಿ ಶಂಕಿತ ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಚಿಕ್ಕಬಳ್ಳಾಪುರದ ಶಬ್ಬಿರ್ ಹಾಗೂ ಹಾಸನದ ಸಿಕಂದರ್ ಶೇಕ್ ಎಂಬವರ ಹೆಸರುಗಳು ಈ ಪ್ರಕರಣದಲ್ಲಿ ಕೇಳಿಬಂದಿದೆ. ಗುಪ್ತಚರ ಇಲಾಖೆಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದು, ಸಾಮಾಜಿಕ ಜಾಲತಾಣ ಹಾಗೂ ಟೆಲಿಗ್ರಾಂ ಚಟುವಟಿಕೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಆರೋಪಿಗಳು ಯಾವುದೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆಯೇ ಎಂಬುದನ್ನು ತನಿಖೆ ಮೂಲಕ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇಂದು ಬೆಳಗ್ಗೆ ಮಫ್ತಿಯಲ್ಲಿ ಬಂದ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಪೊಲೀಸರು, ಅರಕಲಗೂಡಿನ ಸಮೀಪದ ಹಳ್ಳಿಯೊಂದರಲ್ಲಿ ಡಾಂಬರ್ ಕೆಲಸ ಮಾಡುತ್ತಿದ್ದ ಸಿಕಂದರ್, ಹಾಗೂ ಆತನ ಜೊತೆಗಿದ್ದ ಶಂಕಿತ ಉಗ್ರ ಶಬ್ಬೀರ್ ಎಂಬ ಇಬ್ಬರನ್ನ ಸದ್ಯಕ್ ಪೊಲೀಸರು ವಶಕ್ಕೆ ಪಡೆದು, ಬೆಂಗಳೂರಿನ ಕಡೆ ಕರೆದೊಯ್ದಿದ್ದಾರೆ. ಎಂದು ಅರಕಲಗೂಡು ತಾಲೂಕಿನ ಪೊಲೀಸ್ ಅಧಿಕಾರಿಯೊಬ್ಬರು ಅಕ್ಷರಮಿತ್ರ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. Share this... Whatsapp Facebook Pinterest Twitter Linkedin Gmail Print Post navigation ದೊಡ್ಡಗದ್ದವಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕಳ್ಳತನ ರೈತರ ಬಾಳು ಹಸನಾದರೆ ದೇಶ ಪ್ರಗತಿ ಕಾಣುತ್ತದೆ: ಡಾ. ರಮೇಶ್