Share this... Whatsapp Facebook Pinterest Twitter Linkedin Gmail Print30 ವರ್ಷದ ರಾಜಕೀಯದಲ್ಲಿ ಇಂತಹ ಜಿಲ್ಲಾಧಿಕಾರಿಯನ್ನು ನೋಡಿಲ್ಲ ; ಎಚ್.ಡಿ.ರೇವಣ್ಣ ಹಾಸನ: ಜಿಲ್ಲಾಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ತಮ್ಮ 30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಜಿಲ್ಲಾಧಿಕಾರಿಯನ್ನು ನೋಡಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಹಾಸನದಲ್ಲಿ ಇಂದು ಜೆಡಿಎಸ್ ಶಾಸಕರಾದ ಎ.ಮಂಜು ಹಾಗೂ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವೇಳೆ ಗ್ರಾಮ ಪಂಚಾಯಿತಿ ಚುನಾವಣೆಯ ಮೀಸಲಾತಿ ಪ್ರಕ್ರಿಯೆ ಹಾಗೂ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ಕಾರ್ಯವೈಖರಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮೀಸಲಾತಿ ಮಾಡಿದ ಬಳಿಕ ಸಮಯಾವಕಾಶ ನೀಡಿ ಆಕ್ಷೇಪಣೆಗಳನ್ನು ಕೇಳಬೇಕಿತ್ತು, ಆದರೆ ಯಾವುದೇ ಆಕ್ಷೇವಣೆಗಳನ್ನು ಕೇಳದೆ ಏಕಾಏಕಿ ಜಿಲ್ಲೆಯಲ್ಲಿ ಕಾನೂನುಬದ್ದವಾಗಿ ಮಾಡದೆ ಮೀಸಲಾತಿಯನ್ನು ಘೋಷಿಸಲಾಗಿದೆ ಎಂದು ದೂರಿದರು. ಜಿಲ್ಲಾಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ತಮ್ಮ 30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಜಿಲ್ಲಾಧಿಕಾರಿಯನ್ನು ನೋಡಿಲ್ಲ ಎಂದು ಹೇಳಿದರು. ಈ ಜಿಲ್ಲೆಯಲ್ಲಿ ಸತತವಾಗಿ ಈ ರೀತಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಇವೆಲ್ಲ ನಡೆಯುತ್ತಿದೆ ಈ ಜಿಲ್ಲಾಧಿಕಾರಿ ‘ಡ್ರಾಮಾ ಮಾಸ್ಟರ್ ಇದ್ದಂತೆ ಎಲ್ಲೂ ಹೊರಗಡೆ ಹೋಗುವುದಿಲ್ಲ, ಬರೀ ಸಭೆ ಮಾಡುತ್ತಾರೆ. ಯಾವ ಆಧಾರದ ಮೇಲೆ ಜಿಲ್ಲಾಧಿಕಾರಿ ಮೀಸಲಾತಿಯನ್ನು ಬದಲಾಯಿಸಿದರು ಎಂದು ಪ್ರಶ್ನಿಸಿದ ಅವರು, ಕರಡು ಪ್ರತಿಯನ್ನು ಹಾಕಬೇಕಿತ್ತು. ಕೇಂದ್ರದ ಚುನಾವಣಾ ಆಯುಕ್ತರನ್ನು ಬಿಜೆಪಿ ಏಜೆಂಟ್ ಎಂದು ಕರೆಯುತ್ತಾರೆ. ಆದರೆ ಇಲ್ಲಿ ನಡೆಯುತ್ತಿರುವುದನ್ನು ನಾವು ಪ್ರಶ್ನಿಸಬೇಕಾಗಿದೆ ಎಂದು ಹೇಳಿದರು. ಅದು ಎಲ್ಲಿಂದ ಹಿಡಿದುಕೊಂಡು ಬಂದಿದ್ದಾರೋ ಈ ಡಿಸಿನಾ” ಎಂದು ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದರು. ನಮ್ಮ ಮತದಾರರು ಹೆಚ್ಚು ಇರುವ ಕಡೆಗಳಲ್ಲಿ ಮೀಸಲಾತಿಯನ್ನು ಬದಲಾಯಿಸಿದ್ದಾರೆ. ತಹಶೀಲ್ದಾರ್ ಕಳುಹಿಸಿರುವ ಮೀಸಲಾತಿ ಪಟ್ಟಿಯನ್ನೂ ಬದಲಾಯಿಸಿದ್ದಾರೆ. ಸರ್ಕಾರದ ಕುಮ್ಮಕ್ಕು ಇದೆ ಅಂತ ಅಧಿಕಾರ ಮಾಡುತ್ತಿದ್ದೀರಾ? ನನ್ನ ಜೀವನದಲ್ಲಿ ಇವೆಲ್ಲಾ ಎಷ್ಟೋ ನೋಡಿದ್ದೀನಿ. ನನ್ನನ್ನು ಹೆದರಿಸಲು ಬರ್ತೀರಾ? ಹಾಸನ ತಹಶೀಲ್ದಾರ್ ಗೀತಾ ಅವರನ್ನು ಲೂಟಿ ಮಾಡಲು ಕರೆದುಕೊಂಡು ಬಂದಿದ್ದಾರೆ” ಎಂದು ಆರೋಪಿಸಿದ ರೇವಣ್ಣ, ಕಡೂರಿನಲ್ಲಿ ಸಸ್ಪೆಂಡ್ ಆಗಿದ್ದರು. ಚುನಾವಣಾ ಆಯೋಗ ಸತ್ತಿದೆಯೋ ಬದುಕಿದೆಯೋ ಎಂಬುದನ್ನು ಕೇಳುತ್ತೇವೆ. ಬಳಿಕ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ರೇವಣ್ಣ ಹೇಳಿದರು. ಈ ಡಿಸಿ ಬರೀ ಸೈಕಲ್ ಓಡಿಸೋದು ಬಿಟ್ಟರೇ ಬೇರೆ ಏನಾದ್ರು ಗೊತ್ತಾ..? ಎಂದು ವ್ಯಂಗ್ಯವಾಡಿ, ಪೊಲೀಸ್ ಇಡ್ಕೊಂಡು ದಬ್ಬಾಳಿಕೆ ಮಾಡ್ತೀವಿ ಅಂದರೆ ಜಿಲ್ಲಾಧಿಕಾರಿಯೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿ, ತಾಲೂಕು ದಂಡಾಧಿಕಾರಿ ಕಳುಹಿಸಿದ ಮೀಸಲಾತಿ ಪಟ್ಟಿಯನ್ನು ಯಾವ ಆಧಾರದ ಮೇಲೆ ಬದಲಾವಣೆ ಮಾಡಲಾಗಿದೆ ಎಂದು ಮತ್ತೊಮ್ಮೆ ಪ್ರಶ್ನಿಸಿ, ಇನ್ನೊಂದು ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ. ಈ ಜಿಲ್ಲಾಧಿಕಾರಿ ಹಾಸನ ಜಿಲ್ಲಾಧಿಕಾರಿಯಾಗಿಯೇ ಇರಲಿ, 2028ಕ್ಕೆ ಏನಾಗುತ್ತದೆ ನೋಡೋಣ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಅಧಿಕಾರಿಗಳಿಗೆ ಹೇಳುತ್ತೇನೆ, ಎಲ್ಲಿ ಹೋಗ್ತಿರಾ? ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಬರ ಇದೆ, ಆದರೆ ಇದನ್ನು ಕೇಳುವವರು ಯಾರೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಕಳೆದ ವರ್ಷದ ಬೆಳೆ ವಿಮೆ ಇನ್ನೂ ಬಂದಿಲ್ಲ. ಒಂದು ರೂಪಾಯಿ ಲಂಚ ಮುಟ್ಟಿದ್ರೆ ಹೂತು ಹಾತ್ತಿನಿ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ ಜಿಲ್ಲೆಯಲ್ಲಿ ಸಮಸ್ಯೆಗಳು ಮುಂದುವರಿದಿವೆ. ಈ ಜಿಲ್ಲಾಧಿಕಾರಿ ಶಾಶ್ವತವಾಗಿ ಕಾಂಗ್ರೆಸ್ ಸರ್ಕಾರವೇ ಇರುತ್ತದೆ ಎಂದು ಅಂದುಕೊಂಡಿದ್ದಾರಾ..? ಎಂದು ಟೀಕಿಸಿದ ಅವರು, ಎಸಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಲೂಟಿ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು. ಗ್ರಾ.ಪಂ.ಮೀಸಲಾತಿ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂಬುದು ಜೆಡಿಎಸ್ ನಾಯಕರ ಪ್ರಮುಖ ಆಗ್ರಹವಾಗಿದ್ದು, ಈ ವಿಚಾರವಾಗಿ ಪ್ರತಿಭಟನೆ, ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆಯನ್ನು ನೀಡಿದ್ದಾರೆ. Share this... Whatsapp Facebook Pinterest Twitter Linkedin Gmail Print Post navigation ಮೀಸಲಾತಿ ಬದಲಾವಣೆ ಖಂಡಿಸಿ ಜೆಡಿಎಸ್ ಪ್ರತಿಭಟನೆ ಎಚ್ಚರಿಕೆ New Nutrition Rehabilitation Centres approved in four taluks of the district