Share this... Whatsapp Facebook Pinterest Twitter Linkedin Gmail Print ವರದಿ: ಕಣಕಟ್ಟೆ ಕುಮಾರ್ ಅರಸೀಕೆರೆ: ತಾಲೂಕಿನ ಹೊರವಲಯದ ಜಾಜೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾಯೋಜನೆ ವತಿಯಿಂದ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹರ್ ಘರ್ ತಿರಂಗ ಅಭಿಯಾನದಡಿ ತಿರಂಗ ಜಾಥಾವನ್ನು ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಗೀತಾ ಅವರು ಜಾಥಕ್ಕೆ ಹಸಿರು ನಿಶಾನೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ದೇಶ ಪ್ರಪಂಚದಲ್ಲೇ ಅಗ್ರಮಾನ್ಯದಲ್ಲಿ ಇದ್ದು ಸ್ವಾತಂತ್ರ ಬಂದು 80 ವರ್ಷಗಳು ಕಳೆಯಿತಾದರು ಪ್ರಪಂಚದಲ್ಲೇ ಎಲ್ಲಾ ವಿಷಯದಲ್ಲೂ ಮೇಲುಗೈ ಸಾಧಿಸಿರುವ ನಮ್ಮ ದೇಶದ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಆದ್ದರಿಂದ ಈ 80ರ ದಶಕದಲ್ಲಿ ನಾವೆಲ್ಲರೂ ತಮ್ಮ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವುದರ ಮೂಲಕ ಸ್ವತಂತ್ರೋತ್ಸವವನ್ನು ಆಚರಿಸೋಣ ಎಂದು ಹೇಳಿದರು. ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪ್ರಾರಂಭವಾದ ಜಾಥಾ, ಜಾಜೂರು ಮಾರ್ಗವಾಗಿ ಹೊರಟು ಅರಸೀಕೆರೆ ತಾಲೂಕು ಆಡಳಿತ ಕಚೇರಿಯ ಮುಂಭಾಗದವರೆಗೆ ಸಾಗಿತು. ತಿರಂಗ ಯಾತ್ರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಬಾವುಟಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಹಿಡಿದು ವಿವಿಧ ರೀತಿಯ ರಾಷ್ಟ್ರಭಕ್ತಿಯನ್ನು ಮೂಡಿಸುವ ನಾಮಫಲಕಗಳನ್ನು ಹಿಡಿದು ರಾಷ್ಟ್ರ ಪ್ರೇಮವನ್ನ ಎತ್ತಿ ಹಿಡಿಯುವ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಜೊತೆಗೆ ವಿಶೇಷ ರೀತಿಯಲ್ಲಿ ತಿರಂಗ ಜಾತಾವನ್ನು ಉತ್ಸಾಹದಿಂದ ನಡೆಸಿದರು. ಜಾಜೂರು ಗ್ರಾಮ ಪಂಚಾಯತಿಯ ಮುಂಭಾಗದಲ್ಲಿ ಜಮಾವಣಿಗೊಂಡು ದೇಶಭಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಯ ಅಧಿಕಾರಿಗಳಾದ ಪ್ರೊ. ಕುಮಾರ್ ಅವರು ವಿಶೇಷ ಉಪನ್ಯಾಸ ನೀಡಿದರು ಈ ಅಭಿಯಾನದಲ್ಲಿ ಕಾಲೇಜಿನ ಸಿ.ಡಿ.ಸಿ ಸದಸ್ಯರಾದ ಓಂಕಾರ್ ಮೂರ್ತಿ ಪ್ರಾಧ್ಯಾಪಕರಾದ ಡಾ. ಶಿವಕುಮಾರ್ ಡಾ.ವಿಶ್ವನಾಥ್ ಡಾ. ಹರೀಶ್ ಮಂಜುನಾಥ್ ಪ್ರೊ.ರಾಜಶೇಖರ್ ಲೋಕೇಶ್ ಉಮಾಶಂಕರ್ ಡಾ. ಸುನಿಲ್ ಹರೀಶ್ ಮೋಹನ್ ವೀಣಾ ಪ್ರತಿಭಾ ಸೇರಿದಂತೆ ಎಲ್ಲಾ ಬೋಧಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. Share this... Whatsapp Facebook Pinterest Twitter Linkedin Gmail Print Post navigation ಈಶ್ವರಹಳ್ಳಿ ಕೊಡುಗೆ ದರೋಡೆ ಪ್ರಕರಣ 8ಮಂದಿ ಬಂಧನ ಕೆನರಾ ವಿದ್ಯಾ ಜ್ಯೋತಿ : (CVJ) ವಿದ್ಯಾರ್ಥಿವೇತನ ಪ್ರಮಾಣ ಪತ್ರ ವಿತರಣೆ