ಶಾಸಕ‌ ಶ್ರೀನಿವಾಸ ಮಾನೆ ಹುಟ್ಟುಹಬ್ಬಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳಿಗೆ ರಕ್ತ ತುಲಾಭಾರ

ಹಾವೇರಿ: ಸಾಮಾನ್ಯವಾಗಿ ದವಸ-ಧಾನ್ಯಗಳು‌ ಮತ್ತು ನಾಣ್ಯಗಳನ್ನಿಟ್ಟು ತುಲಾಭಾರ ಮಾಡುವುದನ್ನು ನೋಡಿದ್ದೇವೆ. ಆದರೆ ಹಾನಗಲ್ ಕ್ಷೇತ್ರದ ಶಾಸಕ‌ ಶ್ರೀನಿವಾಸ ಮಾನೆ ಅವರ 52ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮ ಗುರುಗಳಿಗೆ ರಕ್ತದ ತುಲಾಭಾರ ಮಾಡಿ ಗಮನ ಸೆಳೆದರು.

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
Advt: ಶಾಲಾ ಶಿಕ್ಷಣ ಇಲಾಖೆಯು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ. ಪ್ರಸ್ತಾವನೆಗಳನ್ನು ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸುವ ದಿನಾಂಕವನ್ನು 12.08.2026 ರವರೆಗೆ ವಿಸ್ತರಿಸಲಾಗಿದೆ. ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ಪರಿಶೀಲನೆ ನಡೆಸಿ ಆಯ್ಕೆ ಮಾಡಿದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಪಟ್ಟಿಯನ್ನು ನಿಧಿಗಳ ಕಚೇರಿಗೆ ಕಳುಹಿಸಲು 02.09.2026 ಕೊನೆಯ ದಿನಾಂಕವಾಗಿರುತ್ತದೆ. ಹಾಗೂ ದಿನಾಂಕ 05.09.2026 ರಂದು ನಡೆಯುವ ಜಿಲ್ಲಾ ಹಂತದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆಯ್ಕೆಯಾದ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುತ್ತದೆ.

ತುಲಾಭಾರ ರಕ್ತದಾನ ಶಿಬಿರದಲ್ಲಿ ಸುಮಾರು 901 ಜನರು ರಕ್ತದಾನ ಮಾಡಿದರು. ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಮತ್ತು ಕ್ರೈಸ್ತ ಧರ್ಮ ಗುರುಗಳಿಗೆ ತುಲಾಭಾರ ಮಾಡಿ, ಭಾವೈಕ್ಯತೆ ಮೆರೆಯಲಾಯಿತು.

 

 

 

 

901 ಮಂದಿಯಿಂದ ರಕ್ತದಾನ:

ಹಾನಗಲ್ ತಾಲೂಕಿನ ವಿವಿಧಡೆ ಬೆಳಗ್ಗೆಯಿಂದಲೇ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾನಗಲ್ ಪಟ್ಟಣದಲ್ಲಿ 82 ಮಂದಿ, ಬೊಮ್ಮನಹಳ್ಳಿಯಲ್ಲಿ 100 ಮಂದಿ, ಹಿರೂರು 115 ಮಂದಿ, ಬೆಳಗಾಲಪೇಟೆ 74, ಅಕ್ಕಿಆಲೂರು 136, ಆಡೂರು 148, ತಿಳವಳ್ಳಿ 109, ಕಿಮ್ಸ್ ಹುಬ್ಬಳ್ಳಿ 101, ಧಾರವಾಡ 36 ಹೀಗೆ ಒಟ್ಟು 901 ಮಂದಿ ರಕ್ತದಾನ ಮಾಡಿದರು.

Leave a Reply

Your email address will not be published. Required fields are marked *