Share this... Whatsapp Facebook Pinterest Twitter Linkedin Gmail Printಚರ್ಚೆಗೆ ಗ್ರಾಸವಾಯಿತು ಲಿಂಗೇಶ್ ಸಂಸದರ ಗೌಪ್ಯ ಮಾತುಕತೆ ಹಾಸನ: ಬಗರ್ ಹುಕುಂ ಹಗರಣದಲ್ಲಿ ಜೈಲುಪಾಲಾಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಮಾಜಿ ಶಾಸಕ, ಬೇಲೂರಿನ ಲಿಂಗೇಶ್ ಕೆ.ಎಸ್., ಜಾತ್ಯಾತೀತ ಜನತಾ ದಳವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಅದಕ್ಕೆ ಇಂಬು ಕೊಡುವಂತೆ ಈ ಫೋಟೋ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಹಳೇಬೀಡಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಹಾಗೂ ಮಾಜಿ ಬಿ ಶಿವರಾಂ ಆಮೇಲೆ ಅವರನ್ನ ಭೇಟಿ ಮಾಡಿ ಗೌಪ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಜೈಲು ಪಾಲಾಗಿದ್ದ ಮಾಜಿ ಶಾಸಕ: ಬಗರ್ ಹುಕ್ಕುಂ ಭೂ ಹಗರಣದಲ್ಲಿ ಜೂನ್ 19,2026 ರಂದು ಜೈಲು ಪಾಲಾಗಿದ್ದ ಮಾಜಿ ಶಾಸಕ ಕೆ ಎಸ್ ಲಿಂಗೇಶ್, ನಿರೀಕ್ಷಣಾ ಜಾಮೀನುವಿನ ಮೇಲೆ ಹೊರ ಬಂದಿದ್ದರು. ಇದಾದ ಕೆಲವು ದಿನಗಳ ನಂತರ ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಬೇಲೂರು ತಾಲೂಕಿನ ನಟರಾಜ್ ಎಂಬುವರಿಗೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನದ ಪಟ್ಟಲಾಗಿತ್ತು. ಇದು ಲಿಂಗೇಶ್ ರಾಜಕೀಯ ಜೀವನಕ್ಕೆ ಮೊದಲನೇ ಕೊಡಲಿ ಪೆಟ್ಟು ಬಿದ್ದಂತಾಗಿದ್ದು, ಇದರಿಂದ ಹತಾಶಗೊಂಡಿದ್ದ ಲಿಂಗೇಶ್ ಈಗ ಕಾಂಗ್ರೆಸ್ ಪಕ್ಷದ ಕೈಹಿಡಿದ್ದಾರೆ ಎಂಬ ಊಹಾಪೋಹಗಳು ಕೇಳುತ್ತಿದ್ದ ಸಂದರ್ಭದಲ್ಲಿಯೇ ಈಗೊಂದು ಫೋಟೋ ವೈರಲ್ ಆಗಿದೆ. ಚುನಾವಣೆಯಲ್ಲಿ ಸೋತಿದ್ದ ಲಿಂಗೇಶ್ : 2018ರ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಗೆದ್ದಿದ್ದ ಕೆ ಎಸ್ ಲಿಂಗೇಶ್ 2023ರ ಚುನಾವಣೆಯಲ್ಲಿ ಬಿಜೆಪಿಯ ಎಚ್ ಕೆ ಸುರೇಶ್ ವಿರುದ್ಧ ಸೋಲನ್ನ ಅನುಭವಿಸಿದ್ದರು. ಜಿಲ್ಲಾಧ್ಯಕ್ಷ ಪಟ್ಟ ಕಟ್ಟಿದ್ದರು, ಪಕ್ಷ ಸಂಘಟನೆ ಮಾಡುವಲ್ಲಿ ಎಡವಿದ ಕಾರಣ ಅಧ್ಯಕ್ಷ ಸ್ಥಾನದಿಂದ ಕೆಳಗಡೆ ಇಳಿಸುವ ಪ್ರಯತ್ನವನ್ನು ಜೆಡಿಎಸ್ ಮಾಡಿದೆ ಎನ್ನಲಾಗಿದೆ. ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದಂತೆ ಕೆ ಎಸ್ ಲಿಂಗೇಶ್ ಹಾಸನ ಸಂಸದ ಶ್ರೇಯಸ್ ಎಂ ಪಟೇಲ್ ಜೊತೆ ಮಾತುಕತೆ ನಡೆಸಲು ಬಿ ಶಿವರಾಂ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ ಇದರ ಬಗ್ಗೆ ಕೆ ಎಸ್ ಲಿಂಗೇಶ್ ಅವರೇ ಸ್ಪಷ್ಟಪಡಿಸಬೇಕಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ಕೈ ತಪ್ಪಿದ ಕಾರಣಕ್ಕೆ, ಸಂಸದರಾದ ಶ್ರೇಯಸ್ ಪಟೇಲ್ ರವರನ್ನು ಭೇಟಿ ಮಾಡಿ, ದೇವೇಗೌಡರು ಕುಟುಂಬದಿಂದ ನನಗೆ ಮೋಸ ಆಗಿದೆ, ಕಳೆದ ಲೋಕಸಭಾ ಚುನಾವಣೆಯಲ್ಲಿಯು ಸಹ ನಾನು ನಿಮ್ಮಗೆ ಪರೋಕ್ಷವಾಗಿ ಸಹಕಾರ ನೀಡಿದ್ದೇನೆ ಎಂದು ಸಂಸದರಿಗೆ ಲಿಂಗೇಶ ಹೇಳಿದ್ದಾರೆ ಎನ್ನಲಾಗಿದ್ದು. ಅದಕ್ಕೆ ಧ್ವನಿಗೂಡಿಸಿದ ಶ್ರೇಯಸ್ ಪಟೇಲ್ ನಿಮ್ಮಿಂದ ನಮಗೆ ಸಹಕಾರ ದೊರೆತಿದೆ, ಮುಂದಿನ ದಿನಗಳಲ್ಲಿ ಮತ್ತೆ ನಿಮ್ಮ ಸಹಕಾರ ನನಗೆ ಬೇಕು ಎಂದು ಹೇಳಿದ್ದು, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯ ಚರ್ಚೆ ನಡೆದಿದ್ದು, ಸಂಸದ ಶ್ರೇಯಸ್ ಎಂ ಪಟೇಲ್ ತಮ್ಮ ಮಾತನ್ನ ಮುಂದುವರೆಸಿ, ಲಿಂಗೇಶಣ್ಣನವರೇ ಚುನಾವಣೆಯಲ್ಲಿ ಶಿವರಾಮ್ ಅಥವಾ ನಿಮಗೆ ಟಿಕೆಟ್ ಕೊಡುವ ವ್ಯವಸ್ಥೆ ಮಾಡಿಸೋಣ ನಮ್ಮ ಜೊತೆ ಸಹಕಾರ ನೀಡಿ ಎಂದು ಹೇಳಿದರಂತೆ ಸಂಸದರು. ಒಟ್ಟಿನಲ್ಲಿ ಪಕ್ಷ ಕಟ್ಟುವಲ್ಲಿ ಎಡವಿದ್ದ ಲಿಂಗೇಶ್ ಇತ್ತೀಚೆಗಷ್ಟೇ ಜೈಲು ಪಾಲಾಗಿದ್ದರು. ಜೊತೆಗೆ ಇದು ಜೆಡಿಎಸ್ ಪಕ್ಷಕ್ಕೆ ಇರಿಸು ಮರುಸು ತಂದಂತಾಗಿದ್ದು ಇದಾದ ಬೆನ್ನಲಿಯೇ ಜಿಲ್ಲಾಧ್ಯಕ್ಷ ಸ್ಥಾನ ಕವಿತಪ್ಪಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಖ ಮಾಡಿದ್ದಾರೆ. ಆದರೆ ಬಿ ಶಿವರಾಂ ಕೂಡ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೋದರು ಅಲ್ಲಿಯೂ ಕೂಡ ಟಿಕೆಟ್ ವಂಚಿತರಾಗುವುದರಲ್ಲಿ ಎರಡು ಮಾತಿಲ್ಲ. ಪಕ್ಷ ನಿಷ್ಠೆ ಮತ್ತು ದೇವೇಗೌಡರ ಅನುಯಾಯಿ ಎಂದು ಹೇಳುತ್ತಿದ್ದ ಕೆ ಎಸ್ ಲಿಂಗೇಶ್ ಅವರ ಈ ನಿರ್ಧಾರ ಮುಂದೆ ರಾಜಕೀಯ ಭವಿಷ್ಯದ ಮೆಟ್ಟಿಲಾಗುತ್ತದೆ ಅಥವಾ ರಾಜಕೀಯಕ್ಕೆ ಇತಿಶ್ರೀ ಹಾಡುತ್ತಾ ಕಾದುನೋಡಬೇಕಿದೆ – ಅಕ್ಷರ ಮಿತ್ರ ಹಾಸನ. Share this... Whatsapp Facebook Pinterest Twitter Linkedin Gmail Print Post navigation ಗಾಂಧೀಜಿ ಮತ್ತು ಶಾಸ್ತ್ರಿಜಿ ಅವರು ಭಾರತ ದೇಶದ ಅನಾಗ್ರ ರತ್ನಗಳು ಜಿಲ್ಲಾ ಜೆಡಿಎಸ್ ವಕ್ತಾರರಾಗಿ ರಘು ಹೊಂಗೆರೆ ಅವಿರೋಧ ಆಯ್ಕೆ