Share this... Whatsapp Facebook Pinterest Twitter Linkedin Gmail Printಚಿಕ್ಕಮಗಳೂರು ಮೂಡಿಗೆರೆ ಭಾಗದಲ್ಲಿ ನಿರಂತರ ಮಳೆಯಾದರೂ. ಬಯಲು ಮತ್ತು ಅರೆಮಲೆನಾಡಿನಲ್ಲಿ ರಾಗಿ ಬಿತ್ತನೆಗೆ ಹಿನ್ನಡೆ. ಹಾಸನ: ಕಳೆದ ಮೂರು ನಾಲ್ಕು ದಿನಗಳಿಂದ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದರು ಅರೇಮಾಲೆನಾಡು ಭಾಗದಲ್ಲಿ ಮಾತ್ರ ಮುಂಗಾರು ಮತ್ತು ರಾಗಿ ಬಿತ್ತನೆಗೆ ಹಿನ್ನಡೆಯಾಗಿದೆ ತಾಲ್ಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಎರಡೇ ದಿನದಲ್ಲಿ ಸರಿ ಸುಮಾರು 2.042 ಟಿಎಂಸಿ ನೀರು ಹರಿದು ಬಂದಿದೆ. ಜಲಾಶಯಕ್ಕೆ 12,859 ಕ್ಯುಸೆಕ್ ಒಳಹರಿವು ದಾಖಲಾಗಿದೆ. 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 28.022 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳಾಗಿದ್ದು, ಸದ್ಯ 2911.75 ಅಡಿಗಳಷ್ಟು ನೀರಿದೆ. 500 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಿಲ್ಲೆಯ ಮಲೆನಾಡು ಭಾಗಗಳಾದ ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಈ ವರ್ಷ ಸ್ವಲ್ಪ ಮಳೆಯಾಗಿದೆ. ಆದರೆ, ಬಯಲು ಸೀಮೆಯ ತಾಲ್ಲೂಕುಗಳಾದ ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಮಳೆಗಾಗಿ ರೈತರು ಇನ್ನು ಆಕಾಶದತ್ತ ಮುಖ ಮಾಡಿದ್ದಾರೆ. ಅರೆ ಮಲೆನಾಡು ಪ್ರದೇಶಗಳಾದ ಹಾಸನ,ಹೊಳೆನರಸೀಪುರ, ಅರಕಲಗೂಡು ತಾಲ್ಲೂಕುಗಳಲ್ಲಿ ಆಗಾಗ ಸಾಧಾರಣ ಮಳೆಯಾಗಿದೆ. ಇದೀಗ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕಿನ ಕೆಲವೆಡೆ ಭತ್ತದ ಬಿತ್ತನೆ ಮಾಡಲಾಗುತ್ತಿದೆ. ಆದರೆ, ಅರಸೀಕೆರೆ, ಚನ್ನರಾಯಪಟ್ಟಣದ ಪ್ರಮುಖ ಬೆಳೆಯಾದ ರಾಗಿ ಬಿತ್ತನೆಗೆ ಹಿನ್ನಡೆ ಉಂಟಾಗಿದೆ. ಇನ್ನೊಂದೆಡೆ ಹಾಸನ, ಅರಕಲಗೂಡು,ಹೊಳೆನರಸೀಪುರ ತಾಲ್ಲೂಕಿನಲ್ಲಿಯೂ ಬಿತ್ತನೆ ಚುರುಕಾಗಿಲ್ಲ. ಪ್ರಮುಖವಾಗಿ ಅರಸೀಕೆರೆ, ಅರಕಲಗೂಡು, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಹೇಮಾವತಿ ಜಲಾಶಯದ ನೀರನ್ನೇ ನಂಬಿಕೊಂಡು ಕೃಷಿ ಮಾಡಲಾಗುತ್ತಿದೆ. ಈ ಬಾರಿ ಹೇಮಾವತಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುವುದಾಗಿ ಜಲಾಶಯದ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಇದರಿಂದಾಗಿ ಮಳೆಯಾಶ್ರಿತ ಬೇಸಾಯ ಮಾಡುವುದು ಅನಿವಾರ್ಯವಾಗಿದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳೂ ಹಾಳಾಗಿದ್ದು, ಮುಂದಿನ ಕೃಷಿ ಚಟುವಟಿಕೆ ನಡೆಸುವುದು ಅನಿಶ್ಚಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎನ್ನುವುದು ರೈತರ ಚನ್ನರಾಯಪಟ್ಟಣ ಭಾಗದ ರೈತರುಗಳ ಒತ್ತಾಯವಾಗಿದೆ. ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ : ಜಲಾಶಯಕ್ಕೆ ಒಳಹರಿವು : 5041 ಜಲಾಶಯದ ಗರಿಷ್ಠ ಮಟ್ಟ : 2922.00 ಜಲಾಶಯ ಇಂದಿನ ಮಟ್ಟ : 2912.24 ಗರಿಷ್ಠ ನೀರಿನ ಸಂಗ್ರಹ ಪ್ರಮಾಣ : 37.103 ಟಿಎಂಸಿ ಇಂದಿನ ನೀರಿನ ಗರಿಷ್ಠ ಪ್ರಮಾಣ : 28.409 ಟಿಎಂಸಿ ಹೊರಹರಿವು : 500 ಕ್ಯೂಸೆಕ್ ಈಟಿವಿ ಭಾರತದ ವರದಿಗಾರರೊಂದಿಗೆ ಆಲೂರು ತಾಲೂಕು ರೈತ ಘಟಕದ ಅಧ್ಯಕ್ಷ ಮಾತನಾಡಿ ಮಾರ್ಚ್‌ನಿಂದಲೇ ಬೆಳೆ ಹಾನಿ ಎದುರಿಸುತ್ತಿದ್ದರೂ, ರೈತರಿಗೆ ನ್ಯಾಯ ಸಿಕ್ಕಿಲ್ಲ. ಅನ್ನ ಬೆಳೆಯುವ ಸಣ್ಣ, ಅತಿಸಣ್ಣ ರೈತರಿಗೂ ಬೆಂಬಲ ನೀಡಬೇಕು. ಜಿಲ್ಲೆಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿ, ತಕ್ಷಣ ಆರ್ಥಿಕ ನೆರವು ನೀಡಬೇಕು. ಮಧು, ಕರವೇ ಅಧ್ಯಕ್ಷ ಆಲೂರು. “ಕರ್ನಾಟಕದ ಉತ್ತರ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ನಮ್ಮ ಭಾಗದಲ್ಲಿ ಕೇವಲ ವಾರಕ್ಕೋ 15 ದಿವಸಕ್ಕೂ ಸೋನೆಮಳೆ 5 ರಿಂದ 10 ನಿಮಿಷ ಬಂದು ಹೋಗುತ್ತಿದೆ. ಈ ಬಾರಿ ಕೆರೆಕಟ್ಟೆಗಳು, ಒಣಗಿ ಹೋಗಿದ್ದು ಜಾನುವಾರುಗಳಿಗೂ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ ಇದನ್ನ ಅರಿತು ಕೂಡಲೇ ಸರ್ಕಾರ ರೈತರ ಹಿತ ಕಾಪಾಡಲು ಮುಂದಾಗಬೇಕು. ಹಾಸನ ಜಿಲ್ಲೆಯ ಕೆಲವು ತಾಲೂಕನ್ನ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು” ಎಚ್ಎಂಜಿ ರವಿ, ರೈತ ಪರ ಹೋರಾಟಗಾರ, ಚನ್ನರಾಯಪಟ್ಟಣ Share this... Whatsapp Facebook Pinterest Twitter Linkedin Gmail Print Post navigation ಬೆಳ್ಳುಳ್ಳಿಗೆ ಉತ್ತಮ ದರ ಫಸಲನ್ನೇ ಕದ್ದೊಯ್ದ ಖದೀಮರು ಸರ್ಕಾರಿ ಶಾಲೆಗಳಲ್ಲಿ ಓದಿದವರು ಜೀವನವನ್ನು ಹೇಗೆ ಬೇಕಾದರು ಎದುರಿಸುವರು ರಮೇಶ್ ಅಡಿಗ