Share this... Whatsapp Facebook Pinterest Twitter Linkedin Gmail Printಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗುತ್ತಿದ್ದು ನೀರನ್ನ ಮಿತವಾಗಿ ಬಳಸಿ ಆಯುಕ್ತ ಕೃಷ್ಣಮೂರ್ತಿ ಅಕ್ಷರಮಿತ್ರ ನ್ಯೂಸ್ , ಹಾಸನ: ಹಾಸನ (ಅರಸೀಕೆರೆ): ಘನತ್ಯಾಜ್ಯ ವಸ್ತು ನಿರ್ವಹಣಾ ನಿಯಮಗಳು-2026 ಅನ್ವಯ ಮನೆಗಳಲ್ಲಿ ಕಸವನ್ನು ಕಡ್ಡಾಯವಾಗಿ ಹಸಿಕಸ, ಒಣಕಸ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಕಾಳಜ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವುದು ಕಡ್ಡಾಯವಾಗಿರುತ್ತದೆ ಎಂದು ಅರಸೀಕೆರೆ ನಗರ ಸಭೆಯ ಆಯುಕ್ತ ಎಚ್ ಟಿ ಕೃಷ್ಣಮೂರ್ತಿ ಹೇಳಿದರು. ಹಾಸನ ಜಿಲ್ಲಾಡಳಿತ ಮತ್ತು ಅರಸೀಕೆರೆ ಅರಸೀಕೆರೆ ನಗರಸಭೆ ಕಾರ್ಯಾಲಯ ವತಿಯಿಂದ ರಾಜ್ಯ ಸರ್ಕಾದ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಅರಸೀಕೆರೆ ನಗರಕ್ಕೆ ಆಗಮಿಸುತ್ತಿರುವ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ನೂತನ ಸಚಿವ ಸಂಪುಟದ ಸಚಿವ ಕೆ.ಎಂ.ಶಿವಲಿಂಗೇಗೌಡರವರಿಗೆ ಹೃತ್ತೂರ್ವಕ ಸ್ವಾಗತ ಕೋರುವ ಕಾರ್ಯಕ್ರಮ ಮುನ್ನ ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. https://aksharamitra.com/wp-content/uploads/2026/08/ARSIKERE-ADS.mp4 ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ನಗರಸಭೆಯ ವಾಹನಗಳಿಗೆ ಕಡ್ಡಾಯವಾಗಿ ವಿಂಗಡಿಸಿ ನಗರಸಭೆಯ ಕಸದ ವಾಹನಕ್ಕೆ ನೀಡಿ ನಗರದ ಸ್ವಚ್ಛತೆ ಕಾಪಾಡಬೇಕು. ರಾಜ್ಯದಲ್ಲಿ ಈ ಬಾರಿ ಪ್ರತಿವರ್ಷದಂತೆ ಮಳೆಯಾಗದೆ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದುರಾಗುತ್ತಿದೆ. ಹೇಮಾವತಿ ಜಲಾಶಯದಲ್ಲಿ ಕುಡಿಯುವ ನೀರಿಗೆ ಮಾತ್ರ ಬೆಳಗ್ಗೆ ಮಾಡುವಷ್ಟು ನೀರಿದ್ದು, ಸಾರ್ವಜನಿಕರು ಇದನ್ನ ಮನಗಂಡು, ಕುಡಿಯುವ ನೀರು ಅತ್ಯಮೂಲ್ಯವಾದದ್ದು. ನೀರನ್ನು ಮಿತವಾಗಿ ಬಳಸಬೇಕು. ಅನಗತ್ಯವಾಗಿ ನೀರು ವ್ಯರ್ಥವಾಗುವುದನ್ನು ನಿಲ್ಲಿಸಿ ಕಾಲಕಾಲಕ್ಕೆ ನಗರಸಭೆಗೆ ಪಾವತಿಸಬೇಕಾದ ಮನೆ ಕಂದಾಯ, ನೀರಿನ ಕಂದಾಯ ಹಾಗೂ ಇತರೆ ಶುಲ್ಕಗಳನ್ನು ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸಲು ಕೋರಿದೆ. ಎಂದು ಮನವಿ ಮಾಡಿದರು. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಟೈರು, ತೆಂಗಿನ ಚಿಪ್ಪು ಕುಂಡಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಡೆಂಗ್ಯೂ ಜ್ವರದಿಂದ ತಪ್ಪಿಸಿಕೊಳ್ಳಿ.’ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಚಾಲ್ತಿಯಲ್ಲಿದ್ದು ಮತದಾರರು ಕಡ್ಡಾಯವಾಗಿ ನಿಮ್ಮ ಮತಗಟ್ಟೆ ಅಧಿಕಾರಿ (BLO) ಗಳನ್ನು ಭೇಟಿ ಮಾಡಿ ತಮಗೆ ನೀಡಿರುವ ಎನ್ಯೂಮರೇಷನ್ ಫಾರಂ ಭರ್ತಿ ಮಾಡಿ ತಮ್ಮ ಮತದಾರರ ಹಕ್ಕನ್ನು ಉಳಿಸಿಕೊಳ್ಳಲು ಈ ಮೂಲಕ ಮನವಿ ಮಾಡಿದರು ಜಿಲ್ಲೆಯಲ್ಲಿ ಬರಗಾಲ ಎದುರಾಗುತ್ತಿದ್ದು, ಪ್ರತಿ ದಿನ ತಮ್ಮ ಮನೆಗಳಲ್ಲಿ ನೀರನ್ನು ಮಿತವಾಗಿ ಬಳಸಿ. ಘನತ್ಯಾಜ್ಯ ನಿರ್ವಹಣೆಗೆ ನಗರಸಭೆಯೊಂದಿಗೆ ಕೈಜೋಡಿಸಿ ಅರಸೀಕೆರೆ ನಗರಸಭೆಯನ್ನು ಸ್ವಚ್ಛ ನಗರಸಭೆ ಮಾಡಲು ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು. ಎಚ್.ಟಿ.ಕೃಷ್ಣಮೂರ್ತಿ ಆಯುಕ್ತರು, ನಗರಸಭೆ ಅರಸೀಕೆರೆ. Share this... Whatsapp Facebook Pinterest Twitter Linkedin Gmail Print Post navigation ಒಂಟಿ ಕಾಡಾನೆಯ ಪುಂಡಾಟಕ್ಕೆ ಕಿತ್ತಾವರ ಗ್ರಾಮ ತಲ್ಲಣ ಆಸ್ಟ್ರೇಲಿಯಾ ಮತ್ತು ಇಟಾಲಿಯದ ಆಕರ್ಷಕ ಬೈಕ್ ಈಗ ಹಾಸನದಲ್ಲಿ..!