Share this... Whatsapp Facebook Pinterest Twitter Linkedin Gmail Printಅರ್ಚಕರ ಸಮಾಜದ ಬಲವಿದ್ದರೆ ಮುಂದಿನ ಸರ್ಕಾರವೂ ನಮ್ಮದೇ ಮುಖ್ಯಮಂತ್ರಿ ಡಿಕೆಶಿ. ಬೆಂಗಳೂರು: ರಾಮಲಿಂಗಾರೆಡ್ಡಿಯವರಿಗೆ ಈಗಾಗಲೇ ಜಲ ಸಂಪನ್ಮೂಲ ಖಾತೆಯನ್ನ ನಮ್ಮ ಪಕ್ಷ ನೀಡಿದೆ ಆದರೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಖಾತೆ ಕೊಡುವ ಬಗ್ಗೆ ಪಕ್ಷದ ಹೈಕಮಾಂಡ್ ಗಮನಕ್ಕೆ ತಂದು ನಿಮ್ಮ ಗಳ ಬೇಡಿಕೆಯನ್ನು ಈಡೇರಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಉಪಾಧ್ಯಕ್ಷರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬಳಿಕ ಅವರು ಮಾತನಾಡಿ, ಸರ್ಕಾರ ಮತ್ತು ಪ್ರಜೆಗಳ ನಡುವೆ ಮಂತ್ರಿಗಳು ಶಾಸಕರು ಇರುವ ಹಾಗೆ ದೇವರು ಮತ್ತು ಭಕ್ತರ ಮಧ್ಯೆ ಅರ್ಚಕರು ಇದ್ದಾರೆ. ಇವತ್ತಿನ ದಿನದಲ್ಲಿ ದೇವರಲ್ಲಿಯೂ ತಾರತಮ್ಯ ಶುರುವಾಗಿದೆ ಇವತ್ತು ಭಕ್ತಿ ಭಾವ ಸಮರ್ಪಣಗಿಂತ ಬಲಿಯ ಸಮರ್ಪಣೆ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು. ಹಿಂದೆ ರಾಜ್ಯದಲ್ಲಿ ಸಿ ದರ್ಜೆಯ ದೇವಾಲಯಗಳ ಅರ್ಚಕರುಗಳು ಸಂಕಷ್ಟವನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಈಗಿನ ನಮ್ಮ ಸರ್ಕಾರ ಮೂರು ಬಾರಿ ಅರ್ಚಕರ ಸ್ವಸ್ತಿಕ್ ಹೆಚ್ಚಳ ಮಾಡಿದ್ದು, ಅದನ್ನು ಹೊರತುಪಡಿಸಿದರೆ ಹಿಂದಿನ ಯಾವ ಸರ್ಕಾರವು ಅರ್ಚಕರಿಗೆ ತಸ್ತಿಕ್ ಹಣವನ್ನು ಹೆಚ್ಚಳ ಮಾಡಿರುವ ಸಾಕ್ಷಿ ಗುಡಿಯನ್ನು ತೋರಿಸಲಿ ಎಂದು ವಿರೋಧ ಪಕ್ಷದವರಿಗೆ ಪ್ರಶ್ನೆ ಮಾಡುವ ಮೂಲಕ, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರವಿದ್ದರೆ ಮತ್ತಷ್ಟು ಅರ್ಚಕರ ಕುಟುಂಬಕ್ಕೆ ಮೂಲಸೌಕರ್ಯ ಹಾಗೂ ವಸತಿ ಸೌಕರ್ಯ ಕಟ್ಟಿಕೊಡುವ ಕಾರ್ಯಕ್ಕೆ ಸರ್ಕಾರ ಮುಂದಾಗುತ್ತದೆ ಎಂದು ಭರವಸೆ ನೀಡಿದರು . ಕಳೆದ ಚುನಾವಣೆಯಲ್ಲಿ ಜನರ ಹಿತಕ್ಕಾಗಿ ಪಂಚ ಗ್ಯಾರಂಟಿಗಳ ಕಾರ್ಡನ್ನು ಚಾಮುಂಡಿಯ ಪಾದಕ್ಕೆ ಇಟ್ಟು ಈ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗಾಗಿ ರೂಪಿಸಿದ್ದೇವೆ. ನಮ್ಮ ಪಕ್ಷಕ್ಕೆ ಗೆಲುವು ತಂದು ಕೊಟ್ಟರೆ ಎಲ್ಲಾ ಭರವಸೆಗಳನ್ನ ಈಡೇರಿಸುವ ವಾಗ್ದಾನವನ್ನು ಕೂಡ ತಾಯಿಯ ಮುಂದೆ ಮಾಡಿದ್ದು, ಅದರಂತೆ ಪಂಚ್ ಗ್ಯಾರಂಟಿಗಳನ್ನ ನಮ್ಮ ಸರ್ಕಾರ ಬಂದ ಬಳಿಕ ಜನರಿಗಾಗಿ ನೀಡಿದ್ದೇವೆ. ಇದು ನಾವು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ . ಹಾಗೆ ಹಿಂದಿನ ಸರ್ಕಾರದವರು ನಿಮ್ಮ ಸಮಾಜಕ್ಕೆ ಏನಾದರೂ ಯೋಜನೆಗಳನ್ನ ರೂಪಿಸಿ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು. ಇನ್ನು ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ಪ್ರಜೆಗೂ 15 ಲಕ್ಷ ಕೊಡುವ ಭರವಸೆಯನ್ನು ನೀಡಿತ್ತು ಆದರೆ 15 ವರ್ಷವಾದರೂ 5 ಪೈಸೆಯಿಂದ ಜನರ ಖಾತೆಗೆ ಹಾಕಿಲ್ಲ ಹಾಗಾಗಿ ನಿಮ್ಮೆಲ್ಲರ ಆಶೀರ್ವಾದವಿದ್ದರೆ ಮುಂದಿನ ಬಾರಿಯೂ ನಮ್ಮ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಬಡವರ ಪರ, ಜನಪರ ಸಮಾಜದ ಪರ ಕೆಲಸ ಮಾಡಲು ಮತ್ತಷ್ಟು ಶಕ್ತಿ ಬರುತ್ತದೆ. ನಮ್ಮೆಲ್ಲ ಅರ್ಚಕರ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಇರಲಿ ಎಂದು ಮನವಿ ಮಾಡಿದರು. ಇನ್ನು ಕಳೆದ ಬಾರಿ ಮುಜರಾಯಿ ಖಾತೆಯನ್ನು ರಾಮಲಿಂಗಾರೆಡ್ಡಿ ಅವರಿಗೆ ಕೊಟ್ಟಿದ್ದೆ ನಾನು. ಆದರೆ ಅವರ ಕಾರ್ಯವೈಕರಿ ಇಷ್ಟೊಂದು ದೊಡ್ಡದು ಎಂಬುದು ನಿಮ್ಮೆಲ್ಲರ ಮುಖಾಂತರ ಗೊತ್ತಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಗಮನಕ್ಕೆ ಈ ವಿಚಾರವನ್ನು ತರುವ ಮೂಲಕ ಮತ್ತು ನಿಮ್ಮ ಹಾಗೂ ಸ್ನೇಹಿತರ ರಾಮಲಿಂಗಾರೆಡ್ಡಿ ಅವರ ನಡುವಿನ ಮಾತುಕತೆಯ ಮೂಲಕ ಹೆಚ್ಚುರಿಯಾಗಿ ಮುಜರಾಯಿ ಖಾತೆ ಕೊಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಮುಜರಾಯಿ ಅರ್ಚಕರ ಆಗಮಿಕರ ಮತ್ತು ಉಪಾದಿವಂತರ, ರಾಜ್ಯಾಧ್ಯಕ್ಷ ಶ್ರೀ ವತ್ಸ, ಧಾರ್ಮಿಕ ಪರಿಷತ್ ಸದಸ್ಯರಾದ ದ್ವಾರಕನಾಥ್, ರಾಜ್ಯ ಉಪಾಧ್ಯಕ್ಷ ಒಳಗೇರಹಳ್ಳಿ ಶ್ರೀಧರ ಮೂರ್ತಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಅರ್ಚಕರು ಆಗಮಿಕರು ಮತ್ತು ಉಪಾದಿವಂತರು ಹಾಜರಿದ್ದರು Share this... Whatsapp Facebook Pinterest Twitter Linkedin Gmail Print Post navigation ಹಿಂದೂ ರಾಷ್ಟ್ರ’ ಮಾಡುವುದೆಂದರೆ ಶೋಷಣೆಯ ವ್ಯವಸ್ಥೆ ಮರಳಿ ತರುವಂತೆ: ಯತೀಂದ್ರ ಸಿದ್ದರಾಮಯ್ಯ ಬರಗಾಲ ಎಂದು ಘೋಷಣೆ ಮಾಡಿ ಪರಿಹಾರಕ್ಕೆ ಕೆಪಿಆರ್ಎಸ್ ಅಗ್ರಹಾರ