ಚೆಸ್ಕಾಂ ಮತ್ತು ಕೆಪಿಟಿಸಿಎಲ್ ಇಲಾಖೆ ಅಧಿಕಾರಿಗಳ ಜೊತೆ ಶಾಸಕ ಸ್ವರೂಪ್ ಪ್ರಕಾಶ್ ಮಹತ್ವದ ಸಭೆ

ಹಾಸನ: ಹಾಸನದ ಸಂತೆಪೇಟೆ ಚೆಸ್ಕಾಂ ಆವರಣದಲ್ಲಿ 100 ಎಂ.ವಿ ಟ್ರಸ್ಪರ್ಮರ್ ನಲ್ಲಿ ನಡೆದ ವಿದ್ಯುತ್ ಅವಘಡದ ಬೆನ್ನಲ್ಲೇ ಶಾಸಕ ಸ್ವರೂಪ್ ಪ್ರಕಾಶ್ ಇಂದು ಚೆಸ್ಕಾಂ ಮತ್ತು ಕೆಪಿಟಿಸಿಎಲ್ ಇಲಾಖೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.

ವಿದ್ಯುತ್ ಸರಬರಾಜಿನಲ್ಲಿ ಯಾವುದೇ ರೀತಿ ವ್ಯತ್ಯಾಯವಾಗಬಾರದು, ಇದರಿಂದ ರೈತರ ಸಾರ್ವಜನಿಕರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ನಿಟ್ಟಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮದಾಗಿದೆ. ಯಾವುದೇ ರೀತಿಯ ತಾಂತ್ರಿಕ ಸಮಸ್ಯೆ ಇದ್ದಲ್ಲಿ ತನ್ನ ಗಮನಕ್ಕೆ ತಂದಲ್ಲಿ ಸರ್ಕಾರದ ಮಟ್ಟದಲ್ಲಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.

ಇತ್ತೀಚೆಗೆ ಸಂತೆಪೇಟೆ ಬಳಿ 100 ಎಂ.ವಿ ಟ್ರಸ್ಪರ್ಮರ್ ಆಕಸ್ಮಿಕ ಬೆಂಕಿಯಿಂದ ಹಾನಿಯಾಗಿದ್ದು ಇದೀಗ ಅದಕ್ಕೆ ಪರ್ಯಾಯವಾಗಿ 150 ಎಂ.ವಿ ಟ್ರಾನ್ಪಾರ್ಮರ್ ಅಳವಡಿಸಲಾಗಿದೆ, ಈ ಮೂಲಕ ಗೊರೂರಿನಿಂದ ಸರಬರಾಜಾಗುವ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಗಿದೆ. ಇದರ ಜೊತೆಗೆ ಕಾಂಚೀಪುರಂ ನಿಂದ ಹೊಸ ಟ್ರಾನ್ಪರ್ಮರ್ ತರಿಸಿ ಅತೀ ಶೀಘ್ರವಾಗಿ ಅಳವಡಿಸಲು ಯೋಜಿಸಲಾಗಿದೆ ಎಂದರು.

ಸರ್ಕಾರದ ನಿಯಮಾನುಸಾರ ರೈತರ ಕೃಷಿ ಬೆಳೆಗಳಿಗೆ ನೀರು ಒದಗಿಸಲು ಕನಿಷ್ಠ ಏಳು ಗಂಟೆ ವಿದ್ಯುತ್ ಪೂರೈಕೆ ಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದೀಗ ಹಾಸನ ನಗರಭಾಗಕ್ಕೆ ದುದ್ದ ಮತ್ತು ಸಕಲೇಶಪುರ ಚಿಕ್ಕ ನಗರದಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು. ಕ್ಯಾತನಹಳ್ಳಿ ಏತನೀರಾವರಿ ಯೋಜನೆಗೆ ಚೆಸ್ಕಾಂ ಮತ್ತು ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು ಅಲ್ಲಿ ಹಲವಾರು ವರ್ಷಗಳಿಂದ ಚಾಲನೆ ನಿಲ್ಲದೆ ನಿಂತಿದ್ದ ಯಂತ್ರಗಳಿಗೆ ಮರುಜೀವ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.

ಅಕ್ಟೋಬರ್ 10 ರಂದು ಯಗಚಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಗುರಿ ಹೊಂದಲಾಗಿದೆ ಈ ಮೂಲಕ ನೀರಿನ ಸಮಸ್ಯೆಗೆ ತಕ್ಕ ಮಟ್ಟ್ರಿಗೆ ಪರಿಹಾರ ದೊರೆಯಲಿದೆ ಎಂದರು.

ನಿರಂತರ ಜ್ಯೋತಿ ವಿದ್ಯುತ್ ಪೂರೈಕೆಯಲ್ಲಿ ಕೂಡ ಯಾಗಿದೆ ರೀತಿಯ ಏರಿಳಿತ ಆಗಬಾರದು, ವೋಲ್ಟೇಜ್ ಪ್ರಾಬ್ಲಂ ಅದಾಗ ಗ್ರಾಮೀಣ ಪ್ರದೇಶದ ಜನರಿಗೆ ಅನಾನುಕೂಲ ಆಗಲಿದೆ ಇವ್ವುಗಳನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮೀಟರ್ ಬೋರ್ಡ್ ಅಳವಡಿಕೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಚೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *