Share this... Whatsapp Facebook Pinterest Twitter Linkedin Gmail Printಮೀಸಲಾತಿ ಪಟ್ಟಿ ಪ್ರಕಟ ಅವೈಜ್ಞಾನಿಕ ಸರಿಪಡಿಸದಿದ್ದರೆ ಹೋರಾಟ ಸಿಎನ್ ಬಾಲಕೃಷ್ಣ ಚನ್ನರಾಯಪಟ್ಟಣ: ತಾಲೂಕಿನ ಹಲವು ಗ್ರಾಮ ಪಂಚಾಯತಿಯ ಮೀಸಲಾತಿ ಪಟ್ಟಿ ವೈಜ್ಞಾನಿಕವಾಗಿದ್ದು ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಶ್ರವಣಬೆಳಗೊಳ ಶಾಸಕ ಸರ್ಕಾರಕ್ಕೆ ಅಗ್ರಹಿಸಿದ್ದಾರೆ. ಸುದ್ದಿಗೋಷ್ಠಿ ಮೂಲಕ ಆಗ್ರಹಿಸಿದ ಅವರು, ಹಾಸನ ಜಿಲ್ಲಾಧಿಕಾರಿ ಮೀಸಲಾತಿ ಪಟ್ಟಿ ಪ್ರಕಟ ಮಾಡುವ ಮುನ್ನ ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಲು ಒಂದು ಅವಕಾಶ ಕೊಡಬಹುದಿತ್ತು. ಆದರೆ ಜಿಲ್ಲಾಧಿಕಾರಿಗಳು ಆ ಕೆಲಸವನ್ನು ಮಾಡದೆ ಏಕ ಪಕ್ಷಿಯ ನಿರ್ಧಾರ ಕೈಗೊಂಡು ಅವೈಜ್ಞಾನಿಕ ಪಟ್ಟಿ ತಯಾರಿಸುವುದು ಹಲವು ಸಮುದಾಯದ ವರ್ಗಕ್ಕೆ ಅನ್ಯಾಯವಾಗಿದೆ ಎಂದರು. ವಿಡಿಯೋ ನೋಡಲು: ಅವೈಜ್ಞಾನಿಕ ಮೀಸಲಾತಿ ಪಟ್ಟಿ ಸರಿಪಡಿಸಿ ಸಿಎನ್ ಬಾಲಕೃಷ್ಣ ಮೀಸಲಾತಿ ಪಟ್ಟಿ ಅವೈಜ್ಞಾನಿಕವಾಗಿ ತಯಾರಿಸಿರುವ ಹಿನ್ನೆಲೆಯಲ್ಲಿ ಮಾಜಿ ಮಂತ್ರಿ ಎಚ್ ಡಿ ರೇವಣ್ಣ, ಎ ಮಂಜು, ಶಾಸಕರುಗಳಾದ ಹೆಚ್ ಕೆ ಕುಮಾರಸ್ವಾಮಿ, ಸ್ವರೂಪ್ರಕಾಶ್ ಪತ್ರಿಕಾಗೋಷ್ಠಿಯ ಮೂಲಕ ಇದನ್ನ ಖಂಡಿಸಿದ್ದಾರೆ ಕಾರಣ ತಪ್ಪಾಗಿರುವುದನ್ನ ಸರಿಪಡಿಸದಿದ್ದರೆ ಹಲವು ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕೆ ಟಿಸಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಈಗಲೂ ಕಾಲಾವಕಾಶವಿದ್ದು ಕೂಡಲೇ ಅದನ್ನು ಸರಿಪಡಿಸುವ ಮೂಲಕ ವೈಜ್ಞಾನಿಕ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕಳಿಸಿಕೊಡಬೇಕು ಎಂದು ಅಗ್ರಹ ಮಾಡಿದರು. Share this... Whatsapp Facebook Pinterest Twitter Linkedin Gmail Print Post navigation ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು ಸೈನಿಕ ಎಂದರೆ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸುವ ಹೆಮ್ಮೆಯ ಯೋಧ