ಕರ್ನಾಟಕ ರಾಜ್ಯ ಚೆಸ್ ಚಾಂಪಿಯನ್‌ಶಿಪ್: ನಿವಾನ್ ರಾಘವೇಂದ್ರ, ಕೃಪಾ ಉಕ್ಕಲಿ ಚಾಂಪಿಯನ್

ಹಾಸನ: ಕರ್ನಾಟಕ ರಾಜ್ಯ ಅಂಡರ್-15 ಚೆಸ್ ಚಾಂಪಿಯನ್‌ಶಿಪ್-2026ರಲ್ಲಿ ಬಾಲಕರ ವಿಭಾಗದಲ್ಲಿ ನಿವಾನ್ ರಾಘವೇಂದ್ರ ಹಾಗೂ ಬಾಲಕಿಯರ ವಿಭಾಗದಲ್ಲಿ ಕೃಪಾ ಎಸ್. ಉಕ್ಕಲಿ ಅವರು ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.

ಬಾಲಕರ ವಿಭಾಗದಲ್ಲಿ ನಿವಾನ್ ರಾಘವೇಂದ್ರ 7 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು 8,೦೦೦ ನಗದು ಬಹುಮಾನ ಪಡೆದರು. ಯಶಸ್ ಎಚ್.7 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು 6,೦೦೦, ಇಂದ್ರಜಿತ್ ಮಜುಂದಾರ್ 7 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು 5,೦೦೦ ಬಹುಮಾನ ಗಳಿಸಿದರು. ವೆಂಕಟ ನಾಗ ಕಾರ್ತಿಕ್ ಮಲ್ಲಾಡಿ ಹಾಗೂ ಅಧ್ರಿತ್ ದಾಸ್ ಪುರಕಾಯಸ್ಥ ತಲಾ 6ಳಿ ಅಂಕಗಳೊಂದಿಗೆ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ಬಾಲಕಿಯರ ಅಂಡರ್ –15 ವಿಭಾಗದಲ್ಲಿ ಕೃಪಾ ಎಸ್. ಉಕ್ಕಲಿ 7 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು 8,೦೦೦ ಬಹುಮಾನ ಪಡೆದರೆ. ಸಿಮ್ರಾ ನಾದಾ 6 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು 6,೦೦೦, ಇಂದುಶೀತಲಾ 64 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು 5,೦೦೦ ಬಹುಮಾನ ಪಡೆದರು. ಆರಾಧ್ಯ ಎಸ್. ಶೆಟ್ಟಿ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು 4,5೦೦ ಹಾಗೂ ರಿಷ್ವಿತಾ ಮಹಾಜನ್6 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದು 3,೦೦೦ ಬಹುಮಾನ ಪಡೆದರು.

ಅಂಡರ್-13 ಬಾಲಕಿಯರ ವಿಭಾಗದಲ್ಲಿ ಹರ್ಷಿತಾ ಎಚ್‌ಎಸ್, ರಿಜೆಲ್ ಅಲಿಡಾ ಡಿಸೋಜಾ, ಆದ್ಯಾ ಕೃಷ್ಣವಜಾಲ, ಅಸಿನಿ ಪ್ರಿಯಾ ಹಾಗೂ ಶ್ರೀಜಾ ದಾಲಿಪಾರ್ಥಿ ಅವರು ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದು ಟ್ರೋಫಿಗೆ ಭಾಜನರಾದರು.ಅಂಡರ್-11 ಬಾಲಕಿಯರ ವಿಭಾಗದಲ್ಲಿ ದಿಶಿ ಮಖಿಜಾ, ತ್ರಿಶಿಕಾ ಆರ್. ಮರ್ಬಳ್ಳಿ, ಲಕ್ಷ್ಯಾ ಪಿ, ಚಾರುಶಿ ಬಿ. ಹಾಗೂ ಮಿಶಿತಾ ಅಭಿಲಾಷ್ ಅವರು ಉತ್ತಮ ಸಾಧನೆ ಮಾಡಿದರು.ಅಂಡರ್-9 ಬಾಲಕಿಯರ ವಿಭಾಗದಲ್ಲಿ ಅಮೈರಾ ಅರೋರಾ, ದಿಶಿತಾ ಎಚ್. ರಾಜ್, ಶರ್ಮೆ ವಿ.ಎಂ, ಕಿಯಾರಾ ಅಗರ್ವಾಲ್ ಹಾಗೂ ಖುಷಿ ಕಾಂಬ್ಳೆ ಅವರು ಮೊದಲ ಐದು ಸ್ಥಾನ ಗಳಿಸಿದರು.

ಇದೇ ವೇಳೆ ಬಾಲಕರ ಅಂಡರ್ – 13 ವಿಭಾಗದಲ್ಲಿ ಈಶ್ವರ್ ವೀರಪ್ಪನ್ ಅಯ್ಯಪ್ಪನ್, ಅಥರ್ವ್ ವೆಂಕಟೇಶ್, ಶೌರ್ಯ ಜೈಸ್ವಾಲ್, ಧನ್ವಂತ್ ಬಾಲಚಂದ್ರನ್ ಹಾಗೂ ತರುಣ್ ಬಿ. ಅವರು ಉತ್ತಮ ಸಾಧನೆ ಮಾಡಿ ಟ್ರೋಫಿ ಪಡೆದರು. ಅಂಡರ್- 11 ವಿಭಾಗದಲ್ಲಿ ಕೋಶಿವರ್ಧ್ ಸೆಂಥಿಲ್ ಕುಮಾರ್, ವಿಹಾನ್ ಸಿನ್ಹಾ, ರಕ್ಷಿತ್ ವಿ, ವಿವಾನ್ ಪಾಂಡೆ ಹಾಗೂ ಅರವಿಂದ್ ಎಸ್.ಆರ್ ಉತ್ತಮ ಪ್ರದರ್ಶನ ನೀಡಿದರು. ಅಂಡರ್-9 ವಿಭಾಗದಲ್ಲಿ ವಿಯಾನ್ ಶ್ರೀಕಾಂತಪ್ಪ, ವಿವಾನ್ ವರ್ಧನ್ ಸಾಹು, ಅಭಯ್ ವಾಧ್ವಾ, ಗಹನ್ ಸಿ.ಡಿ ಹಾಗೂ ಅರಿನ್ ಕವಾಲ ಅವರು ಪ್ರಶಸ್ತಿಗೆ ಭಾಜನರಾದರು.ಸಮಾರೋಪ ಸಮಾರಂಭ ಪಂದ್ಯಾವಳಿಯ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಅಭಿನಂದಿಸಿದರು.

ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ರಶ್ಮಿ ಕಿರಣ್ ಅವರು ಮಾತನಾಡಿ, ಚೆಸ್ ಕ್ರೀಡೆಯು ಮಕ್ಕಳಲ್ಲಿ ಏಕಾಗ್ರತೆ, ತಾಳ್ಮೆ, ತಾರ್ಕಿಕ ಚಿಂತನೆ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ. ರಾಜ್ಯಮಟ್ಟದ ಇಂತಹ ಪಂದ್ಯಾವಳಿಗಳು ಯುವ ಚೆಸ್ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬಾಲಕ-ಬಾಲಕಿಯರು ಚಾಂಪಿಯನ್‌ಶಿಪ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಚದುರಂಗ ಕೌಶಲ್ಯವನ್ನು ಪ್ರದರ್ಶಿಸಿದರು. ವಿಜೇತರು ಹಾಗೂ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಆಟಗಾರರನ್ನು ಗಣ್ಯರು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ನವೀನ್ ಸಿ.ಆರ್, ಹಾಸನ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ರಶ್ಮಿ ಕಿರಣ್, ಕದಂಬ ಚೆಸ್ ಅಕಾಡೆಮಿ ಸಂಸ್ಥಾಪಕ ತ್ಯಾಗರಾಜ್ ಎಂ.ಟಿ, ಮುಖ್ಯ ತೀರ್ಪುಗಾರ ಅನಿಲ್ ಎನ್.ಜೆ ಹಾಗೂ ಕರ್ನಾಟಕ ಚೆಸ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಚೇತನ್ ರಾಮ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *