ಅರ್ಥಪೂರ್ಣವಾಗಿ ಆಚರಣೆಗೊಂಡ 80ನೇ ಸ್ವಾತಂತ್ರ್ಯ ದಿನಾಚರಣೆ

ವರದಿ: ಚನ್ನಬಸವೇಶ್ವರ, ಆಲೂರು 

ಆಲೂರು: ಮಗ್ಗೆ ಗ್ರಾಮ ಪಂಚಾಯಿತಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಗ್ಗೆ ಗ್ರಾಮ ಪಂಚಾಯಿತಿಯ ಪಿಡಿಒ ಪರಮೇಶ್ ಧ್ವಜಾರಾಗೋಣ ಮಾಡುವ ಮೂಲಕ 80ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಲಾಯಿತು.

ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅತಿ ಹೆಚ್ಚು ಅಂಕ ಪಡೆದ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಜಾಹೀರಾತು

ಸನ್ಮಾನಿತರಾದ ವಿದ್ಯಾರ್ಥಿಗಳ ಪಟ್ಟಿ:

ಪ್ರೌಢಶಾಲಾ ವಿಭಾಗ: ಫಾತಿಮತ್, ಜೋಯಲಿ, ಪುಷ್ಪಕ್

ವಿಜ್ಞಾನ ವಿಭಾಗ: ಶಬನ್ ಮುದ್ದಪ್ಪ, ತನುಜ ಬಲ್ಲೂರುಪುರ ಮತ್ತು ವೇದಾಂತ್ ಡಿ ಪಿ

ವಾಣಿಜ್ಯ ವಿಭಾಗ: ಶೈನಿ ಸಿಯೋ, ಧನಲಕ್ಷ್ಮಿ, ಯಶಸ್ವಿನಿ

ಕಲಾ ವಿಭಾಗ : ನಿಶಾಶ್ರೀ ಎನ್

ಜಾಹೀರಾತು

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಪಂಚಾಯತಿ ಸಿಬ್ಬಂದಿಗಳಾದ ನಾಗಣ್ಣ ಮಮತಾ ಹಾಗೂ ನೀರು ಗಂಟಿ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *