Share this... Whatsapp Facebook Pinterest Twitter Linkedin Gmail Printಆಲೂರು ದರೋಡೆ ಪ್ರಕರಣ 8ಮಂದಿ ಆರೋಪಿಗಳ ಬಂದನ ಹಾಸನ: ಆಲೂರು ತಾಲೂಕಿನ ಈಶ್ವರಳ್ಳಿ ಕೂಡಿಗೆ ಬಳಿ ನಡೆದಿದ್ದ ಒಂಟಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ಮಂದಿ ಆರೋಪಿಯನ್ನ ಎಡೆಮುರಿ ಕಟ್ಟುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪುರ ಮತ್ತು ಹೊನ್ನವಳ್ಳಿ ಗ್ರಾಮಗಳಲ್ಲಿ ನಡೆದ ದರೋಡೆ ಪ್ರಕರಣಗಳ ಪತ್ತೆ- ಆರೋಪಿಗಳ ಬಂಧನ ಆಲೂರು ತಾಲೂಕಿನ ಈಶ್ವರಳ್ಳಿಕೂಡಿಗೆ ಬಳಿಯ ಮಣಿಪುರ ಮತ್ತು ಹೊನ್ನವಳ್ಳಿ ನಡೆದಿದ್ದ ಎರಡು ಒಂಟಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ಮಂದಿ ಆರೋಪಿಯನ್ನ ಒಡೆಮೂರು ಕಟ್ಟುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಆಲೂರು ಠಾಣಾ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ನಡೆದ ದರೋಡೆ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಸದರಿ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳು, ತಾಂತ್ರಿಕ ಮಾಹಿತಿ. ಮೊಬೈಲ್ ಕರೆ ವಿವರಗಳು ಹಾಗು ಇತರೆ ಸಾಕ್ಷಾಧಾರಗಳ ಆಧಾರದ ಮೇಲೆ ಎಂಟು ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿವರ: ದಕ್ಷಿಣ ಕನ್ನಡ ಜಿಲ್ಲೆಯ ಅಶ್ರಫ್ (31), ಇಬ್ರಾಹಿಂ ಕಲೀಲ್ (42) ಹಾವೇರಿ ಮೂಲದ ಈರಣ್ಣ (23) ಬೆಳ್ತಂಗಡಿ ತಾಲೂಕಿನ ಹಮೀದ್ (49) ಮತ್ತು ರಘು@ ಮುದ್ದ , ಸಂಕೇತ್ (27), ಹಾಸನ ಜಿಲ್ಲೆಯ ಆಲೂರು ತಾಲೂಕಿನ ಭರತ್ @ ಅಪ್ಪಿ ಹಾಗೂ ಸುಲೈಮಾನ್ (52) ಬಂದಿತ ಆರೋಪಿಗಳು. ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಗ್ರಾಮದ ಮಂಜೇಗೌಡ ಎಂಬುವರ ಮನೆಗೆ ದರೋಡೆ ಮಾಡಲು ಮುಂದಾಗಿ ಲಾಂಗು ಮಚ್ಚಿಗಳನ್ನ ತೋರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಆರೋಪಿಗಳನ್ನ ಬೆನ್ನು ಹತ್ತಿದ ಪೊಲೀಸರು ಕೆಲವು ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಆಧಾರದ ಹಿನ್ನೆಲೆಯಲ್ಲಿ ಆರೋಪಿಗಳಿಂದ, ಈ ಕೆಳಕಂಡ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಮಾಡಿದ್ದ ಪ್ರಕರಣಗಳಲ್ಲಿ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಲೂರು ಪೊಲೀಸ್ ಠಾಣೆ ಮೊ.ನಂ: 128/2026 ಕಲಂ 309 BNS 1. 40 ಗ್ರಾಂ ಚಿನ್ನದ ಮಾಂಗಲ್ಯ ಸರ, 2. 8 ಗ್ರಾಂ ನ ಒಂದು ಜೊತೆ ಚಿನ್ನದ ಓಲೆ, 3. 6 ಗ್ರಾಂ ಒಂದು ಜೊತೆ ಚಿನ್ನದ ಓಲೆ. 4. 20 ಗ್ರಾಂ ತೂಕದ ಚಿನ್ನದ ಒಂದು ಕೊರಳ ಚೈನು ಮತ್ತು 5. 2 ಗ್ರಾಂ ತೂಕದ ಚಿನ್ನದ ಮಕ್ಕಳ ಉಂಗುರ ಆಲೂರು ಪೊಲೀಸ್ ಠಾಣೆ ಮೊ.ನಂ:172/2026 ಕಲಂ 309(4) BNS 01. 01 ಸ್ಯಾಮ್ ಸಂಗ್ ಮೊಬೈಲ್, 02. 38 ಗ್ರಾಂ ತೂಕದ ಒಂದು ಚಿನ್ನದ ಮಾಂಗಲ್ಯ ಸರ 03. 6 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ 04. 32 ಗ್ರಾಂ ತೂಕದ ಒಂದು ಬೆಳ್ಳಿ ಕೊರಳ ಚೈನು ವಶಪಡಿಸಿಕೊಂಡಿದ್ದಾರೆ ಒಟ್ಟಾರೆಯಾಗಿ 120 ಗ್ರಾಂ ಚಿನ್ನಾಭರಣ ಹಾಗೂ 32 ಗ್ರಾಂ ಬೆಳ್ಳಿ ಆಭರಣಗಳು ಸೇರಿದಂತೆ ಸರಿಸುಮಾರು 15,50,000 /- ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಡಿಮೆ ಅವಧಿಯಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಮುಂಚೂಣಿ ಪಾತ್ರ ವಹಿಸಿದ ಸಕಲೇಶಪುರ ಹಾಗೂ ಆಲೂರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಹಾಸನ ಎಸ್ಪಿ ಮೆಚ್ಚಿದ ವ್ಯಕ್ತಪಡಿಸಿದರು. Share this... Whatsapp Facebook Pinterest Twitter Linkedin Gmail Print Post navigation ನರಹಂತಕ ಕೆ ಪಿ ಕಾಲರ್-2 ಕಾಡಾನೆ ಸೆರೆ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸಾರ್ ಘರ್ ತಿರಂಗ ಅಭಿಯಾನ