Share this... Whatsapp Facebook Pinterest Twitter Linkedin Gmail Printಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ: ಆ.10 ಕಡೆ ದಿನ ಅಕ್ಷರಮಿತ್ರ ನ್ಯೂಸ್: ಹಾಸನ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಹಾಸನ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ 2026-27ನೇ ಸಾಲಿನ (ಜುಲೈ ಆವೃತ್ತಿ) ಶ್ಯೆಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಸ್ನಾತಕ ಹಾಗೂ ಸ್ನಾತಕೋತ್ತರ ಓ.ಡಿ.ಎಲ್ ಕೋರ್ಸ್ ಗಳಾದ ಬಿ.ಎ/ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಎಲ್.ಐ.ಸಿ, ಬಿ.ಎಸ್.ಡಬ್ಲ್ಯೂ, ಎಂ.ಎ/ಎಂ.ಕಾಂ, ಎಂ.ಎಸ್.ಡಬ್ಲ್ಯೂ, ಎಂ.ಸಿ.ಎ, ಎಂ. ಎಲ್.ಐ.ಸಿ, ಎಂ.ಎಸ್ಸಿ, ಪಿ.ಜಿ ಡಿಪ್ಲೋಮಾ, ಯು.ಜಿ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್ ಪ್ರವೇಶಾತಿಯು ಪ್ರಾರಂಭವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ. ಹಾಸನ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ. ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ (ಮುಸ್ಲಿಂ, ಜೈನ್, ಕ್ರಿಶ್ಚಯನ್, ಸಿಖ್, ಬುದ್ದಿಸ್ಟ್ ಹಾಗೂ ಪಾರ್ಸಿ)ಕರಾಮುವಿಯ ಹಾಸನ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಸಂಬಂಧ ಪಟ್ಟ ದಾಖಲಾತಿಗಳನ್ನು ನೀಡಿದ್ದಲ್ಲಿ ಈ ಮೇಲಿನ ಕೋರ್ಸುಗಳಿಗೆ ಉಚಿತ ಪ್ರವೇಶಾತಿಯನ್ನು ನೀಡಲಾಗುವುದು. ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಆ.10 ಕಡೆಯ ದಿನಾಂಕವಾಗಿರುತ್ತದೆ, ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಿದ್ಧಾರ್ಥ್ ಬಿ.ಎನ್, ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ ಪ್ರಾದೇಶಿಕ ಕೇಂದ್ರ, ಅರಸೀಕೆರೆ ರಸ್ತೆ, ಕೇಂದ್ರಿಯ ವಿದ್ಯಾಲಯ ಹಾಗೂ ಬಿ.ಟಿ.ಕೊಪ್ಪಲು ಹತ್ತಿರ, ದೊಡ್ಡಪುರ ಅಂಚೆ, ಎಸ್.ಎಂ. ಕೃಷ್ಣನಗರ ಹಾಸನ, ದೂರವಾಣಿ ಸಂಖ್ಯೆ :08172-262726, 8618929376, 9035378321, 9739402474, 7760494941, 7760546404, 9844242644, 8861655037, 9900787174, 8453378713, 7760014047, 7022887201 ಗೆ ಸಂಪರ್ಕಿಸಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ. Share this... Whatsapp Facebook Pinterest Twitter Linkedin Gmail Print Post navigation ರಂಗಭೂಮಿಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ-ಗೊರೂರು ಅನಂತರಾಜ ನಾಳೆ ನೈಸ್ ರಸ್ತೆ ಮೂಲಕ ಪಾದಯಾತ್ರೆ ಆರಂಭ