ಹಾಸನದಿಂದ ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್

ಅಕ್ಷರಮಿತ್ರ ಸುದ್ದಿ:

ಹಾಸನ ಆ.7: ಮಳೆಗಾಲ ಪ್ರಾರಂಭವಾಗಿರುವುದರಿಂದ ಈ ಹಿಂದೆ ಪ್ರಾರಂಭಿಸಿದ್ದ ಹಾಸನ-ಜೋಗ ಪ್ಯಾಕೇಜ್ ಪ್ರವಾಸವನ್ನು ಪುನಃ ಪ್ರಾರಂಭಿಸಲಾಗಿದ್ದು, ಸದರಿ ಪ್ಯಾಕೇಜ್‌ನ್ನು ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಕಾರ್ಯಾಚರಿಸುತ್ತಿದ್ದು, ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸುವ ಅವಕಾಶವಿರುತ್ತದೆ ಎಂದು ಹಾಸನ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

 

ವೇಳಾಪಟ್ಟಿ:

ನಿರ್ಗಮನ ಹಾಸನದಿಂದ 5.30 ಕ್ಕೆ, ಆಗಮನ ಜೋಗ 12 ಗಂಟೆ ಕಿ.ಮೀ 251, 07.30 ರಿಂದ 7.50 ರವರೆಗೆ ಕಡೂರಿನಲ್ಲಿ 20 ನಿಮಿಷ ಲಘು ಉಪಹಾರಕ್ಕೆ ಮತ್ತು ಶೌಚಾಲಯಕ್ಕೆ ವಿರಾಮ ಹಾಗೂ 9.50 ರಿಂದ 10 ಶಿವಮೊಗ್ಗದಲ್ಲಿ ಶೌಚಾಲಯಕ್ಕೆ 10 ನಿಮಿಷ ವಿರಾಮ.

ನಿರ್ಗಮನ ಜೋಗದಿಂದ 4 ಗಂಟೆ, ಆಗಮನ ಹಾಸನ 10.30 ಕ್ಕೆ ಕಿ.ಮೀ 251, 6 ರಿಂದ 6.10 ರವರೆಗೆ ಶಿವಮೊಗ್ಗದಲ್ಲಿ ಶೌಚಾಲಯಕ್ಕೆ 10 ನಿಮಿಷ ವಿರಾಮ ಮತ್ತು 8 ರಿಂದ 8.30 ರವರೆಗೆ ಕಡೂರಿನಲ್ಲಿ 20 ನಿಮಿಷ ಊಟಕ್ಕೆ ಮತ್ತು ಶೌಚಾಲಯಕ್ಕೆ ವಿರಾಮ.

ಕರ್ನಾಟಕ ಸಾರಿಗೆ ವೇಗದೂತ ದರ :

ಹಾಸನ-ಜೋಗ, 251, ಜಿ.ಎಸ್.ಓ ದರ 311, ಜೋಗ-ಹಾಸನ, 251, ಜಿ.ಎಸ್.ಓ ದರ 311 ಒಟ್ಟು 502 ಕಿ.ಮೀ ಜಿ.ಎಸ್.ಒ ಒಟ್ಟು ದರ 622, ಪ್ರಸ್ತಾಪಿಸಿರುವ ವಿಶೇಷ ದರ ವಯಸ್ಕರಿಗೆ ₹.700, ಮಕ್ಕಳಿಗೆ ₹.350 ಆಗಿರುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *