ಸನ್ಮಾನಕ್ಕಾಗಿ ವಿವಿಧ ಸಾಧಕರಿಂದ ಅರ್ಜಿ ಆಹ್ವಾನ

ಹಾಸನ ಆ.6 (ಅಕ್ಷರಮಿತ್ರ ಸುದ್ದಿ): ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳಿಗೆ 2026 ನೇ ಆಗಸ್ಟ್ 15 ರಂದು ಜಿಲ್ಲಾಡಳಿತ ವತಿಯಿಂದ ಸನ್ಮಾನಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಸಾಧಕರು ಅಥವಾ ಸಾಧಕರ ಬಗ್ಗೆ ಮಾಹಿತಿ ಹೊಂದಿರುವ ವ್ಯಕ್ತಿಗಳು ಸಾಧಕರ ಮಾಹಿತಿಯನ್ನು ಕರಾರುವಕ್ಕಾದ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಅರ್ಜಿ ಸಲ್ಲಿಸುತ್ತಿರುವ ಕ್ಷೇತ್ರದ ಬಗ್ಗೆ ಸ್ಪಷ್ಟವಾಗಿ ನಮೂದಿಸಿ ಅಗತ್ಯ ದೃಢೀಕೃತ ದಾಖಲೆಗಳನ್ನು ಆ. 11 ರಂದು ಸಂಜೆ 4.30 ಗಂಟೆಯೊಳಗೆ ಸಹಾಯಕ ಆಯುಕ್ತರು ಹಾಸನ ಉಪ ವಿಭಾಗ ಹಾಸನ ಇವರ ಕಚೇರಿಗೆ ಸಲ್ಲಿಸಲು ಹಾಸನ ಉಪ ವಿಭಾಗ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

ಸನ್ಮಾನಕ್ಕಾಗಿ ಪರಿಗಣಿಸಲಾಗುವ ಕ್ಷೇತ್ರಗಳ ವಿವರ:

ಸ್ವಾತಂತ್ರ್ಯ ಹೋರಾಟಗಾರರ ವಿಧವಾ ಪತ್ನಿಯರು, ಸಮಾಜ ಸೇವೆ, ಪತ್ರಿಕೋದ್ಯಮ, ಹೋಂ ಗಾರ್ಡ್ಸ್, ಅಗ್ನಿಶಾಮಕ, ರಕ್ತದಾನಿಗಳು, ಪೌರಕಾರ್ಮಿಕರು, ಪೊಲೀಸ್ ಇಲಾಖೆ, ಮಾಜಿ ಸೈನಿಕರಿಗೆ, ಕಂದಾಯ ಇಲಾಖೆ (ಪ್ರತಿ ಉಪ ವಿಭಾಗದಿಂದ ಒಬ್ಬರು), ಆರೋಗ್ಯ ಇಲಾಖೆ, ಸೌಟ್ಸ್ & ಗೈಡ್ಸ್, ಭಾರತ ಸೇವಾದಳ,. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು, ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *