Share this... Whatsapp Facebook Pinterest Twitter Linkedin Gmail Print ಮೆದುಳಿನ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮ ಹಾಸನ : ಶಾಂತಿಗ್ರಾಮದ ಪ್ರದೀಪ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮಕ್ಕಳು ಮತ್ತು ಪೋಷಕರಿಗಾಗಿ ಮೆದುಳಿನ ಆರೋಗ್ಯದ ಕುರಿತು ಇಂದು ಉಚಿತ ಜಾಗೃತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯೂರೋಸರ್ಜನ್ ಡಾ. ಪ್ರಕಾಶ್ ಅವರು ಮಾತನಾಡಿ ಮೆದುಳಿನ ಗಾಯಗಳು, ಸ್ಟ್ರೋಕ್, ರಕ್ತ ಹೆಪ್ಪುಗಟ್ಟುವಿಕೆ (ಬ್ಲಡ್ ಕ್ಲಾಟ್), ಮತ್ತು ಇತರ ನರವೈಜ್ಞಾನಿಕ ತೊಂದರೆಗಳ ಬಗ್ಗೆ ಅಮೂಲ್ಯ ಮಾಹಿತಿ ನೀಡಿದರಲ್ಲದೆ ತಲೆಗೆ ಯಾವುದೇ ಗಾಯವಾದ 4 ಗಂಟೆಗಳೊಳಗೆ ಜಿಲ್ಲಾ ಆಸ್ಪತ್ರೆಗೆ ಬಂದರೆ, ಸೂಕ್ತ ಚಿಕಿತ್ಸೆ ಮತ್ತು ಇಂಜೆಕ್ಷನ್ ಮೂಲಕ ಸಮಸ್ಯೆಯನ್ನು ತಕ್ಷಣ ಪರಿಹರಿಸಬಹುದು. ಹಿಂದೆ ಬೆಂಗಳೂರಿನ ನಿಮಾನ್ಸ್, ಮೈಸೂರು, ಮಂಗಳೂರಿಗಳಿಗೆ ರೆಫರ್ ಮಾಡುತ್ತಿದ್ದ ವ್ಯವಸ್ಥೆಯನ್ನು ಸುಧಾರಿಸಿ, ಈಗ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲೂ ನ್ಯೂರೋ ಸರ್ಜನ್ಗಳ ತಂಡ ತುರ್ತು ಸೇವೆ ಒದಗಿಸುತ್ತಿದೆ. ಇದು ರಾಜ್ಯ ಸರ್ಕಾರದ ಮಹತ್ವದ ಉಪಕ್ರಮ” ಎಂದರು ಬಿದ್ದು ಗಾಯವಾದಾಗ, ಅಥವಾ ಮೆದುಳಿಗೆ ಯಾವುದೇ ಆಘಾತವಾದಾಗ ಪ್ರಜ್ಞೆ ತಪ್ಪುವುದು, ಪಾರ್ಶ್ವವಾಯು, ಅಥವಾ ಅರಿವು ಮರೆಯಾಗುವಂತಹ ಅಪಾಯಗಳು ಇರಬಹುದು. ಈ ಬಗ್ಗೆ ಸ್ಟೂಡೆಂಟ್ಗಳು, ಪಾಲಕರು ಹೆಚ್ಚಿನ ಮಾಹಿತಿ ಪಡೆದು ಎಚ್ಚರಿಕೆಯಿಂದಿರಬೇಕೆಂದು ಮನವಿ ಮಾಡಿದ್ದಾರೆ. ಈ ವೇಳೆ ಕರ್ನಾಟಕ ಬ್ರೈನ್ ಹೆಲ್ತ್ ಜಿಲ್ಲಾ ಸಂಯೋಜಕರಾದ ಲತಾಮಣಿ ಅವರು ಮಾತನಾಡಿ, ಸ್ಟ್ರೋಕ್ ಅಥವಾ ತಲೆಗಾಯದ ಸಂದರ್ಭದಲ್ಲಿ ‘ಗೋಲ್ಡನ್ ಅವರ್ಸ್’ (4.5 ಗಂಟೆಗಳು) ಬಹಳ ಮುಖ್ಯ. ಆ ಸಮಯದಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಸಾಧ್ಯವಾಗದೆ ಅಮೂಲ್ಯ ಸಮಯ ವ್ಯರ್ಥವಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಮತ್ತು ನಿಮಾನ್ಸ್ ಸಹಯೋಗದಲ್ಲಿ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ‘ಬ್ರೈನ್ ಹೆಲ್ತ್ ಕ್ಲಿನಿಕ್’ ಆರಂಭಿಸಲಾಗಿದೆ. ಅಲ್ಲಿ ನ್ಯೂರೋಲಜಿಸ್ಟ್ಗಳು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಖಾಸಗಿಯಲ್ಲಿ ಇದಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಅರಿವನ್ನು ಜನರಿಗೆ ತಲುಪಿಸಲು ಶಾಲೆ, ಕಾಲೇಜುಗಳಲ್ಲಿ ಪೋಷಕರು ಮತ್ತು ಶಿಕ್ಷಕರೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. Share this... Whatsapp Facebook Pinterest Twitter Linkedin Gmail Print Post navigation ಸರ್ಕಾರಿ ಶಾಲೆಗಳಲ್ಲಿ ಓದಿದವರು ಜೀವನವನ್ನು ಹೇಗೆ ಬೇಕಾದರು ಎದುರಿಸುವರು ರಮೇಶ್ ಅಡಿಗ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಸ್ಪಂದಿಸಲಿದೆ; ಎಂಎಜಿ